PM Lakhpati: ದೇಶದ ಮಹಿಳೆಯರಿಗೆ ಕೇಂದ್ರದ ಗ್ಯಾರೆಂಟಿ, ಪ್ರತಿ ಮಹಿಳೆಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷ ಸಾಲ.

ದೇಶದ ಪ್ರತಿ ಮಹಿಳೆಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷ ಸಾಲ.

Lakhpati Didi New Loan Scheme: ಕೇಂದ್ರದ ಮೋದಿ ಸರ್ಕಾರ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಗಳಲ್ಲಿ Lakhpati Didi Yojana ಕೂಡ ಒಂದಾಗಿದೆ. ಈ ಯೋಜನೆಯು ವಿಶೇಷವಾಗಿ ಮಹಿಳೆಯರಿಗಾಗಿಯೇ ರೂಪಿಸಲಾಗಿದೆ. ಈ ಯೋಜನೆಯಡಿ ಮಹಿಳೆಯರು ಸಾಲ ಸೌಲಭ್ಯವನ್ನು ಪಡೆಯಲು ಸಹಾಯವಾಗುತ್ತದೆ.

ಮಹಿಳೆಯರು ತಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಲು ಈ ಯೋಜನೆಯನ್ನು ಬಳಸಿಕೊಳ್ಳಬಹುದು. ಕೇಂದ್ರ ಸರ್ಕಾರ ಲಖ್ಪತಿ ದೀದಿ ಯೋಜನೆಯಡಿ ಎಷ್ಟು ಹಣ ನೀಡಲಿದೆ…? ಹಾಗೆಯೆ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಯ ವಿಧಾನವೇನು..? ಎನ್ನುವ ಬಗ್ಗೆ ಡಿಟೈಲ್ಸ್ ಇಲ್ಲಿದೆ.

Lakhpati Didi New Loan Scheme
Image Credit: ent24x7

ದೇಶದ ಮಹಿಳೆಯರಿಗೆ ಕೇಂದ್ರದ ಗ್ಯಾರೆಂಟಿ
ಲಖ್ಪತಿ ದೀದಿ ಯೋಜನೆಯನ್ನು 15 ಆಗಸ್ಟ್ 2023 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಾಗೂ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮಹಿಳೆಯರು ಯಾರ ಮೇಲು ಅವಲಂಬಿತರಾಗದೆ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ.

ಪ್ರತಿ ಮಹಿಳೆಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷ ಸಾಲ
ಲಖ್ಪತಿ ದೀದಿ ಯೋಜನೆ ಯೋಜನೆಯಡಿ ಮಹಿಳೆಯರಿಗೆ ರೂ. 1 ಲಕ್ಷದಿಂದ ರೂ. 1 ಕೋಟಿವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಮಹಿಳೆಯರು ತಮ್ಮ ಪ್ರಾದೇಶಿಕ ಸ್ವ-ಸಹಾಯ ಗುಂಪು ಕಚೇರಿಗೆ ಭೇಟಿ ನೀಡಿ, ಎಲ್ಲಾ ಅಗತ್ಯ ದಾಖಲೆಗಳು ಮತ್ತು ವ್ಯವಹಾರ ಯೋಜನೆಯನ್ನು ಅಲ್ಲಿ ಸಲ್ಲಿಸಿದರೆ ಅರ್ಜಿ ಪರಿಶೀಲನೆಯ ನಂತರ ಸಾಲ ನೀಡಲಾಗುತ್ತದೆ. ಮಹಿಳೆಯರು ಯಾವುದೇ ಸಮಸ್ಯೆ ಇಲ್ಲದೆ 5 ಲಕ್ಷ ರೂ. ವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

Lakhpati Didi Yojana
Image Credit: Informal Newz

ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯ
•ಆಧಾರ್ ಕಾರ್ಡ್

Join Nadunudi News WhatsApp Group

•PAN ಕಾರ್ಡ್

•ಆದಾಯ ಪ್ರಮಾಣಪತ್ರ

•ಬ್ಯಾಂಕ್ ಪಾಸ್ಬುಕ್

•ಮೊಬೈಲ್ ನಂಬರ್

ಇಂತವರು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು
•18 ರಿಂದ 50 ವರ್ಷದೊಳಗಿನ ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

•ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರುವುದು ಮುಖ್ಯ.

•ಮಹಿಳೆಯರು ಸಹ ವ್ಯವಹಾರವನ್ನು ಪ್ರಾರಂಭಿಸಲು ಯೋಜನೆಯನ್ನು ಹೊಂದಿರಬೇಕು ಮತ್ತು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

Lakhpati Didi Loan Scheme Details
Image Credit: Jagran

Join Nadunudi News WhatsApp Group