Gruha Lakshmi Deposit: ಪ್ರತಿ ತಿಂಗಳು ಈ ದಿನದಂದು ಖಾತೆಗೆ ಬರಲಿದೆ ಗೃಹಲಕ್ಷ್ಮಿ ಹಣ, ಲಕ್ಷ್ಮಿ ಹೆಬ್ಬಾಳ್ಕರ್ ಇನ್ನೊಂದು ಘೋಷಣೆ.

ಇನ್ನು ಕೂಡ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳದ್ದಿದ್ದವರಿಗೆ Lakshmi Hebbalkar ಮಹತ್ವದ ಮಾಹಿತಿ.

Lakshmi Hebbalkar About Gruha Lakshmi 2000 Credit: ಕಳೆದ ಮೂರು ತಿಂಗಳುಗಳಿಂದ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು 1.2 ಕೋಟಿ ಗೃಹಿಣಿಯರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ ಯೋಜನೆ ಅನುಷ್ಠಾನಗೊಂಡು ಮೂರು ತಿಂಗಳು ಕಳೆದಿದ್ದರು ಕೂಡ 30% ಪ್ರತಿಶತದಷ್ಟು ಅರ್ಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಮಾಸಿಕ 2000 ಹಣ ಜಮಾ ಆಗುತ್ತಿಲ್ಲ.

ಅರ್ಹ ಮಹಿಳೆಯರಿಗೆ ಹಣ ಏಕೆ ಜಮಾ ಆಗುತ್ತಿಲ್ಲ..? ಎನ್ನುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಗೃಹ ಲಕ್ಷ್ಮಿ ಯೋಜನೆಯಡಿ ಹಣ ವರ್ಗಾವಣೆ ವಿಳಂಭವಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಯೋಜನೆಯ ಲಾಭ ಪಡೆಯದ ಅರ್ಹ ಮಹಿಳೆಯರಿಗೆ ಸಚಿವೆ ಆದಷ್ಟು ಬೇಗ ಹಣ ಜಮಾ ಆಗುವುದಾಗಿ ಭರವಸೆ ನೀಡಿದ್ದಾರೆ.

Lakshmi Hebbalkar About Gruha Lakshmi 2000 Credit
Image Credit: Newsnext

ಶೀಘ್ರದಲ್ಲೇ ಜಮಾ ಆಗಲಿದೆ ಗೃಹ ಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ
ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಪರ್ಯಾಯ ಮಾರ್ಗವನ್ನು ಕಂಡುಹಿಡಿದಿದ್ದಾರೆ. ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹ ಲಕ್ಷ್ಮಿ ಹಣ ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹಣವನ್ನು ನೇರವಾಗಿ ಅಂಚೆ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ರಾಜ್ಯದ ಮಹಿಳೆಯರು ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯ ಗೃಹಿಣಿಯರಿಗೆ ಮಾಹಿತಿ ನೀಡಿದ್ದಾರೆ. ನೀವು ಅಂಚೆ ಇಲಾಖೆಯಲ್ಲಿ ಖಾತೆ ತೆರೆದರೆ November 10 ರೊಳಗೆ ಅರ್ಹ ಗೃಹಿಣಿಯರ ಖಾತೆಗೆ ಒಟ್ಟಾಗಿ 6,000 ರೂ. ಜಮಾ ಆಗಲಿದೆ. ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳೆಯರಿಗೆ ಆಶ್ವಾಸನೆ ನೀಡಿದ್ದಾರೆ.

Gruha Lakshmi 2000 Credit
Image Credit: Eisamay

ಈ ದಿನಾಂಕದೊಳಗೆ ಖಾತೆಗೆ ಜಮಾ ಆಗಲಿದೆ ಗೃಹ ಲಕ್ಷ್ಮಿ ಹಣ
ಸರ್ಕಾರ ಈ ತಿಂಗಳು 1.10 ಕೋಟಿ ಜನರಿಗೆ ಹಣವನ್ನು ಬಿಡುಗಡೆ ಮಾಡಿದೆ. ಕೆವೈಸಿ ವಿವರ ಮತ್ತು ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆಯ ಹಣ ಜಮಾ ಆಗಲು ವಿಳಂಭವಾಗುತ್ತಿದೆ. ಪ್ರತಿ ತಿಂಗಳು 15 ರಿಂದ 20 ದಿನದ ಒಳಗೆ ಅರ್ಹರಿಗೆ ಹಣವನ್ನು ವರ್ಗಯಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಹಣ ಬಿಡುಗಡೆಯಾದ 25 ದಿನದ ನಂತರ ಖಾತೆಗೆ ಹಣ ಜಮಾ ಆಗುತ್ತಿತ್ತು, ಸದ್ಯ ಹಣ ಜಮಾ ಆಗಲು ಕೇವಲ 6 ದಿನಕ್ಕೆ ಇಳಿಸಲಾಗಿದೆ. ಅರ್ಜಿದಾರರ ದಾಖಲೆಯ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಿ ಆದಷ್ಟು ಬೇಗ ಹಣ ಜಮಾ ಮಾಡುವತೆ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group