Registration Charge: ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಹೊಸ ನಿಯಮ, ಸರ್ಕಾರಕ್ಕೆ ಕೊಡಬೇಕು ಇಷ್ಟು ತೆರಿಗೆ.

ಇದೀಗ ರಾಜ್ಯ ಸರ್ಕಾರ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಆಘಾತ ನೀಡಿದೆ.

Land Registration Charges In Karnataka: ರಾಜ್ಯದಲ್ಲಿ Congress ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಸಾಕಷ್ಟಿ ನಿಯಮಗಳನ್ನು ಕೂಡ ಪರಿಚಯಿಸುತ್ತಿದೆ. ರಾಜ್ಯದಲ್ಲಿನ ಶಿಕ್ಷಣ ನೀತಿಯನ್ನು ಬದಲಾಯಿಸುವುದರಿಂದ ಹಿಡಿದು ಆಸ್ತಿ ನೋಂದಣಿಯ ನಿಯಮದಲ್ಲಿ ಕೂಡ ಸರ್ಕಾರ ನಿಯಮವನ್ನು ಬದಲಿಸುತ್ತಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ಜಾರಿಯಿಂದ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಬೇಕಾಗಿದೆ.

Land Registration Rate Hike
Image Credit: Rewariyasat

ಬೆಲೆ ಏರಿಕೆಯ ನಡುವೆಯೇ ರಾಜ್ಯದ ಜನತೆಗೆ ಮತ್ತೊಂದು ಶಾಕ್
ಈಗಾಗಲೇ ರಾಜ್ಯದ ಜನತೆ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳು. ಹಾಲು, ಮೊಸಲು ತರಕಾರಿ, ಗ್ಯಾಸ್ ಬೆಲೆ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆಯ ಏರಿಕೆ ಜನಸಮಾನ್ಯರಿಗೆ ಒಂದು ವಿಧದದಲ್ಲಿ ಹೆಚ್ಚಿನ ಆರ್ಥಿಕ ನಷ್ಟವನ್ನು ನೀಡುತ್ತಿದೆ. ಈ ಬೆಲೆಯ ಏರಿಕೆಯ ಬಿಸಿ ರಾಜ್ಯದ ಜನತೆಯನ್ನು ಸುಡುತಿರುವಾಗಲೇ ಇದೀಗ ರಾಜ್ಯ ಸರ್ಕಾರ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದೆ.

ರಾಜ್ಯದಲ್ಲಿ ಆಸ್ತಿ ನೋಂದಣಿ ದರ ಏರಿಕೆ
ರಾಜ್ಯದಲ್ಲಿ ಆಸ್ತಿ ಖರೀದಿ ಮತ್ತು ಆಸ್ತಿ ಮಾರಾಟದ ನಿಯಮಗಳು ಬದಲಾಗುತ್ತಿದೆ. ಕೆಲವೊಮ್ಮೆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಇಲ್ಲದವರು ಆಸ್ತಿಯನ್ನು ಮಾರಾಟ ಮಾಡಿರುವ ಉದಾಹರಣೆಗಳು ಇವೆ. ಆಸ್ತಿ ಖರೀದಿಯಲ್ಲಿ ಮೋಸ ಹೋಗಿರುವ ಸಾಕಷ್ಟು ಪ್ರಕರಣಗಳಿವೆ. ಹೀಗಾಗಿ ಆಸ್ತಿಯ ಮಾರಾಟ ಮತ್ತು ಖರೀದಿಯ ಯಾವುದೇ ರೀತಿಯ ವಂಚನೆ ಆಗಬಾರದು ಎನ್ನುವ ದೃಷ್ಟಿಯಿಂದ ಆಸ್ತಿಯ ಖರೀದಿ ಮತ್ತು ಮಾರಾಟದಲ್ಲಿ ನಿಯಮವನ್ನು ಅಳವಡಿಸಲಾಗಿದೆ.

Land Registration Rate increase from October 1
Image Credit: Informalnewz

ಅಧಿಕಾರ ಇಲ್ಲದವರು ಯಾವುದೇ ಆಸ್ತಿಯನ್ನು ಮಾರಾಟ ಮಾಡಬಾರದು, ಹಾಗೆಯೆ ಆಸ್ತಿ ಖರೀದಿಯಲ್ಲಿ ಆಗುತ್ತಿರುವ ವಂಚನೆಯನ್ನು ತಡೆಯುವ ಉದ್ದೇಶದಿಂದ ವಿವಿಧ ರೀತಿಯ ಆಸ್ತಿಯ ಕಾನೂನನ್ನು ಜಾರಿಗೊಳಿಸಲಾಗಿದೆ.

ಆಸ್ತಿ ನಿಯಮಗಳ ಬದಲಾವಣೆಯ ಜೊತೆಗೆ ಆಸ್ತಿ ನೋಂದಣಿ ದರ ಕೂಡ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರತಿ ವರ್ಷ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎನ್ನುವ ನಿಯಮವಿದೆ. ಈ ನಿಟ್ಟಿನಲ್ಲಿ October 1 ರಿಂದ Land Registration Rate ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.

Join Nadunudi News WhatsApp Group

ಆಸ್ತಿ ನೋಂದಣಿ ದರ ಶೇ. 30 ರಷ್ಟು ಏರಿಕೆ
ರಾಜ್ಯ ಸರ್ಕಾರ ಈಗಾಗಲೇ ಆಸ್ತಿ ಖರೀದಿಯ ನಿಯಮವನ್ನು ಜಾರಿಗೊಳಿಸಿದೆ. ಇದೀಗ ಮತ್ತೆ ಆಸ್ತಿ ಖರೀದಿಯ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ರಾಜ್ಯದಲ್ಲಿ ಮುದ್ರಾಣಾಂಕ ಶುಲ್ಕ ಜಾಸ್ತಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಆಸ್ತಿ ಖರೀದಿ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಲಿದೆ.

land registration latest update
Image Credit: Roofandfloor

ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅಕ್ಟೊಬರ್ ನಲ್ಲಿ ಏರಿಕೆಯಾಗಲಿದೆ. ಮುದ್ರಾಣಾಂಕ ಶುಲ್ಕದ ಹೆಚ್ಚಳವು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಈ ವರ್ಷಾಂತ್ಯದಲ್ಲಿ ಆಸ್ತಿ ಖರೀದಿಯ ಬೆಲೆ ಶೇ. 30 ರಿಂದ 40 ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಭೂಮಿ, ನಿವೇಶನ, ಕಟ್ಟಡ ಸೇರಿದಂತೆ ಸ್ಥಿರಾಸ್ತಿಗಳ ದರ ಪರಿಷ್ಕರಣೆಯ ಬಗ್ಗೆ ಸರ್ಕಾರ ನಿರ್ಧರಿಸಿದೆ. ಆಸ್ತಿ ನೋಂದಣಿಯ ಹೊಸ ನಿಯಮ October 1 ರಿಂದ ಜಾರಿಯಾಗಲಿದೆ.

Join Nadunudi News WhatsApp Group