Silver Bat: ಲಂಕಾ ಕ್ರಿಕೆಟಿಗನಿಂದ ಕೊಹ್ಲಿ ಸಿಕ್ಕ ಬೆಳ್ಳಿಯ ಬ್ಯಾಟ್ ಬೆಲೆ ಎಷ್ಟು…? ದುಬಾರಿ ಬ್ಯಾಟ್ ಕೊಹ್ಲಿಗೆ ಗಿಫ್ಟ್.

ಲಂಕಾ ಕ್ರಿಕೆಟಿಗನಿಂದ ವಿರಾಟ್ ಕೊಹ್ಲಿಗೆ ಬೆಳ್ಳಿಯ ಬ್ಯಾಟ್ ಗಿಫ್ಟ್.

Lankan Fan Gifts Virat Kohli A Specially Crafted Silver Bat: 2023 ರ ಏಷ್ಯಾ ಕಪ್ (Asia Cup) ಮ್ಯಾಚ್ ನ ಸೂಪರ್ 4 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದೆ. ಪಾಕ್ ತಂಡವನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ರೋಹಿತ್ ಪಡೆ ಪಂದ್ಯಕ್ಕೂ ಮುನ್ನ ವಿಶೇಷ ಅಭ್ಯಾಸಗಳನ್ನು ಮಾಡಿತ್ತು ಆದರೆ ಮಳೆ ಬಂದ ಕಾರಣ ಮ್ಯಾಚ್ ನಿನ್ನೆ ನಿಂತು ಹೋಗಿದೆ. ಇಂದು ಮತ್ತೆ ಇಂಡಿಯಾ ಮತ್ತು ಪಾಕಿಸ್ತಾನ ತಂಡ ಮೈದಾನದಲ್ಲಿ ಎದುರಾಗಲಿದ್ದಾರೆ.

Virat Kohli Gets Special Gift
Image Credit: Reddit

ಬೆಳ್ಳಿ ಬ್ಯಾಟ್ ಗಿಫ್ಟ್ ಕೊಟ್ಟ ಲಂಕಾ ನೆಟ್ ಬೌಲರ್
ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೂ ಮುನ್ನ ಶ್ರೀಲಂಕನ್ ಆಟಗಾರರು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ವಾಸ್ತವವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಪಾಕ್ ವೇಗಿ ಶಾಹಿನ್ ಅಫ್ರಿದಿ ಎದುರು ರನ್ ಗಳಿಸಲು ತಡವರಿಸಿದ್ದರು.

ಆದ್ದರಿಂದ ಅಫ್ರಿದಿ ಎದುರು ವಿಶೇಷ ತಂತ್ರ ರೂಪಿಸುವ ಸಲುವಾಗಿ ಟೀಮ್ ಇಂಡಿಯಾ ಆಟಗಾರರು ಲಂಕಾದ ಸಥಳೀಯ ಆಟಗಾರರೊಂದಿಗೆ ಅಭ್ಯಾಸ ನೆಡೆಸಿದ್ದರು. ಈ ವೇಳೆ ಲಂಕಾ ನೆಟ್ ಬೌಲರ್ ಚಂದ್ರಮೋಹನ್ ಕ್ರೀಶಾಂತ್ ಅವರು ಕೊಹ್ಲಿ ಅವರನ್ನು ಭೇಟಿಯಾಗಿ ಬೆಳ್ಳಿ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

Lankan Fan Gifts Virat Kohli A Specially Crafted Silver Bat
Image Credit: Khaleejtimes

76 ಶತಕಗಳ ಮಾಹಿತಿ ಬೆಳ್ಳಿ ಬ್ಯಾಟ್ ಮೇಲೆ
ಈ ಬೆಳ್ಳಿ ಬ್ಯಾಟ್ ನ ವಿಶೇಷತೆ ಏನೆಂದರೆ ವಿರಾಟ್ ಕೊಹ್ಲಿ ಸಿಡಿಸಿರುವ ಎಲ್ಲ 76 ಅಂತರ್ ರಾಷ್ಟ್ರೀಯ ಶತಕಗಳ ವಿವರವನ್ನು ಈ ಬ್ಯಾಟ್ ಮೇಲೆ ಮುದ್ರಿಸಲಾಗಿದೆ. ಇನ್ನು ಈ ಬ್ಯಾಟ್ ಉಡುಗೊರೆಯಾಗಿ ನೀಡಿದ ಕ್ರೀಶಾಂತ್ ಅವರು “ನಾನು ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ. ನಾನು ಅವರನ್ನು ಕೊನೆಯ ಬಾರಿಗೆ 2017 ರಲ್ಲಿ ನೆಟ್ ಅಭ್ಯಾಸದ ಸಮಯದಲ್ಲಿ ಭೇಟಿಯಾಗಿದ್ದೆ. ಇದು ಅವರಿಗೆ ನನ್ನ ಚಿಕ್ಕ ಉಡುಗೊರೆಯಾಗಿದೆ. ಈ ಬ್ಯಾಟ್ ನಲ್ಲಿ ಅವರು ಇಲ್ಲಿಯವರೆಗೆ ಸಿಡಿಸಿರುವ ಪ್ರತಿ ಶತಕಗಳನ್ನು ಒಳಗೊಂಡಿದೆ. ಬ್ಯಾಟ್ ಅನ್ನು ನಿರ್ಮಿಸಲು ನನಗೆ 3 ತಿಂಗಳು ಬೇಕಾಯಿತು ಎಂದು ಹೇಳಿಕೊಂಡಿದ್ದಾರೆ”.

Join Nadunudi News WhatsApp Group

ಇದಕ್ಕೂ ಮೊದಲು ವಜ್ರದ ಬ್ಯಾಟ್ ಗಿಫ್ಟ್
ಸೂರತ್ ಮೂಲದ ಉದ್ಯಮಿಯೊಬ್ಬರು ವಿರಾಟ್ ಕೊಹ್ಲಿ ಅವರಿಗೆ ವಜ್ರದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ಬ್ಯಾಟ್ 1.04 ಕ್ಯಾರಟ್ ಮೂಲ ವಜ್ರದಾಗಿದ್ದು, 15 ಮಿಲಿ ಮೀಟರ್ ಉದ್ದ ಹಾಗೂ 5 ಮಿಲಿ ಮೀಟರ್ ಅಗಲವಾಗಿದೆ. ಇದರ ಬೆಲೆ 10 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಇನ್ನು ಲಂಕಾ ಕ್ರಿಕೆಟಿಗನಿಂದ ಕೊಹ್ಲಿಗೆ ಸಿಕ್ಕ ಬೆಳ್ಳಿಯ್ ಬ್ಯಾಟ್ ಬೆಲೆ ಸುಮಾರು 3 ಲಕ್ಷ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

Join Nadunudi News WhatsApp Group