Leelavathi: ಈ ವಯಸ್ಸಿನಲ್ಲಿ ಮಗನ ಜೊತೆ ಡಾನ್ಸ್ ಮಾಡಿದ ಹಿರಿಯ ನಟಿ ಲೀಲಾವತಿ, ವಿಡಿಯೋ ವೈರಲ್.

ಅಮ್ಮನ ಆರೋಗ್ಯದ ಉದ್ದೇಶದಿಂದ ಅಮ್ಮನ ಜೊತೆ ನಟ ವಿನೋದ್ ರಾಜ್ ಡಾನ್ಸ್ ಮಾಡಿದ್ದಾರೆ.

Vinod Raj Dance With Mother Leelavathi: ಕನ್ನಡದ ಖ್ಯಾತ ನಟ ವಿನೋದ್ ರಾಜ್ (Vinod Raj) ಅವರು ಈ ಹಿಂದೆ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದರು. ಇನ್ನು ವಿನೋದ್ ರಾಜ್ ಮದುವೆ ಬಗ್ಗೆ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿ (Leelavathi) ಸ್ಪಷ್ಟನೆ ನೀಡಿದ್ದರು.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿನೋದ್ ರಾಜ್ ಅವರು ತಮ್ಮ ತಾಯಿಯ ಮೇಲೆ ಇಟ್ಟಿರುವ ಪ್ರೀತಿ ವೈರಲ್ ಆಗುತ್ತಿದೆ. ತಮ್ಮ ತಾಯಿಯನ್ನು ವಿನೋದ್ ನೋಡಿಕೊಳ್ಳುತ್ತಿರುವ ರೀತಿಯನ್ನು ನೋಡಿ ಎಲ್ಲರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Vinod Raj Dance With Mother Leelavathi
Image Source: India Today

ಮಗನ ಜೊತೆ ಡಾನ್ಸ್ ಮಾಡಿದ ಹಿರಿಯ ನಟಿ ಲೀಲಾವತಿ
ಇತ್ತೀಚಿಗೆ ಮಕ್ಕಳು ತಮ್ಮ ಹೆತ್ತವರನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿದೆ. ಮದುವೆ ಆದ ಬಳಿಕ ಮಕ್ಕಳು ತಮ್ಮ ಸ್ವತಃ ಜೀವನವನ್ನು ರೂಪಿಸಿಕೊಂಡ ಮೇಲೆ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಆದರೆ ಕನ್ನಡದ ಖ್ಯಾತ ನಟರಾದ ವಿನೋದ್ ರಾಜ್ ಅವರು ತಮ್ಮ ತಾಯಿಯನ್ನು ನೋಡಿಕೊಳ್ಳುವ ರೀತಿ ನೋಡಿದರೆ ತಾಯಿ ಮಗನ ಭಾಂದವ್ಯ ಎಷ್ಟಿದೆ ಎನ್ನುವುದು ತಿಳಿಯುತ್ತದೆ.

ನಟ ವಿನೋದ್ ರಾಜ್ ಅವರು ತಮ್ಮ ತಾಯಿ ಲೀಲಾವತಿ ಅವರ ಆರೋಗ್ಯವನ್ನು ಚೆನ್ನಾಗಿರಿಸುವ ಸಲುವಾಗಿ ಬೆಳಗಿನ ವ್ಯಾಯಾಮವನ್ನು ಮಾಡಿಸುತ್ತಿದ್ದಾರೆ. ಇನ್ನು ವ್ಯಾಯಾಮ ಮಾಡುವ ಸಮಯದಲ್ಲಿ ವಿನೋದ್ ರಾಜ್ ತಮ್ಮ ತಾಯಿಯನ್ನು ಹಾಡಿಗೆ ಹೆಜ್ಜೆ ಹಾಕಿಸಿದ್ದಾರೆ. ತಮ್ಮ ತಾಯಿಯ ಆರೋಗ್ಯವನ್ನು ಕಾಪಾಡಲು ವಿನೋದ್ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಪತಿನಿತ್ಯ ಅಮ್ಮನನ್ನು ವ್ಯಾಯಾಮ ಮಾಡುವಾಗ ಹಾಡಿಗೆ ಹೆಜ್ಜೆ ಹಾಕಿಸುತ್ತಾರೆ.

Vinod Raj Dance With Mother Leelavathi
Image Source: Times Of India

ಅಮ್ಮನ ಆರೈಕೆಯಲ್ಲಿ ವಿನೋದ್ ರಾಜ್ ಬ್ಯುಸಿ
ನಟ ವಿನೋದ್ ರಾಜ್ ಹಾಗೂ ಹಿರಿಯ ನಟಿ ಲೀಲಾವತಿ ಅವರು ಬೆಂಗಳೂರು ಹೊರವಲಯದ ನೆಲಮಂಗಳ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ವಾಸವಿದ್ದಾರೆ. ಈ ನಡುವೆ ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಾಥಮಿಕ ಕೇಂದ್ರವನ್ನು ನಿರ್ಮಿಸಿದ್ದಾರೆ. ಇನ್ನು ಹೊಸ ಪಶು ಆಸ್ಪತ್ರೆ ನಿರ್ಮಾಣ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ತಾಯಿಯ ಆರೋಗ್ಯ ಕಾಳಜಿಯ ಜೊತೆಗೆ ಸಮಾಜಮುಖಿ ಕೆಲಸ ಹಾಗೂ ಕೃಷಿಯಲ್ಲಿ ಬ್ಯುಸಿ ಆಗಿದ್ದಾರೆ.

Join Nadunudi News WhatsApp Group

Join Nadunudi News WhatsApp Group