Jeevan Akshay: LIC ಯಲ್ಲಿ ಬಂತು ಬಂಪರ್ ಪಿಂಚಣಿ ಯೋಜನೆ, ಪ್ರತಿ ತಿಂಗಳು ಸಿಗಲಿದೆ 36000 ರೂ ಪಿಂಚಣಿ.

LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ 36000 ರೂ ಪಿಂಚಣಿ.

LIC Jeevan Akshay Policy Pension: ಭಾರತೀಯ ಜೀವ ವಿಮೆ (LIC) ಜನಸಾಮಾನ್ಯರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕೆಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು LIC ಸಾಕಷ್ಟು ಯೋಜನೆಗಳು ಸಹಾಯವಾಗಲಿದೆ. ಇನ್ನು ಎಲ್ ಐಸಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಜನಸಾಮನ್ಯರಿಗೆ ಅನುಕೂಲವಾಗಲಿ ಎನ್ನುವ ಕಾರಣ ಭಾರತೀಯ ಜೀವ ವಿಮೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ.

ಎಲ್ ಐಸಿ ಜೀವನ್ ಅಕ್ಷಯ್ ಯೋಜನೆ (LIC Jeevan Akshay Policy) 
ಇನ್ನು ಎಲ್ ಐಸಿ ಯೋಜನೆಗಳಲ್ಲಿ ಅಧಿಕ ವರ್ಷದ ಹಣದ ಠೇವಣಿಗೆ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇದೀಗ ಎಲ್ ಐಸಿಯಲ್ಲಿ ಲಭ್ಯವಿರುವ ಅತಿ ಕಡಿಮೆ ಹೂಡಿಕೆಯ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

In Jeevan Akshay Yojana, you will get a pension of Rs 36000 every month
Image Credit: Naidunia

ಎಲ್ ಐಸಿ ಜೀವನ್ ಅಕ್ಷಯ್ ಯೋಜನೆಯಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಮೆಚ್ಯುರಿಟಿ ಅವಧಿಯ ನಂತರ ಹೆಚ್ಚಿನ ಲಾಭವನ್ನು ನೀಡುತ್ತದೆ. ಎಲ್ ಐಸಿಯಲ್ಲಿ ಲಭ್ಯವಿರುವ ಈ ಯೋಜನೆಯ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

ಈ ಯೋಜನೆಯಲ್ಲಿ 12000 ಪಿಂಚಣಿ ಪಡೆಯುವ ಅವಕಾಶವಿದೆ
ಎಲ್ ಐಸಿ ಇದೀಗ ಜನರಿಗಾಗಿ ಜೀವನ್ ಅಕ್ಷಯ್ ಯೋಜನೆಯನ್ನು ಪರಿಚಯಿಸಲಿದೆ. ಈ ಜೀವನ್ ಅಕ್ಷಯ್ ಪಾಲಿಸಿಯಲ್ಲಿಹೂಡಿಕೆ ಮಾಡಲು ಕೆಲವು ಅರ್ಹತಗಳಿರಬೇಕು. ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿ ಅರ್ಜಿದಾರರ ವಯಸ್ಸು ಕನಿಷ್ಠ 30 ವರ್ಷದಿಂದ ಗರಿಷ್ಟ 65 ವರ್ಷಗಳಾಗಿರಬೇಕು.

ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿಯಲ್ಲಿ ಕನಿಷ್ಠ 12 ಸಾವಿರ ರೂಪಾಯಿಯ ಪಿಂಚಣಿಯ ಲಾಭವನ್ನು ಪಡೆಯಬಹುದು. ನೀವು 1 ಲಕ್ಷ ಹಣವನ್ನು ಹೂಡಿಕೆ ಮಾಡುವ ಮೂಲಕ ಮಾಸಿಕ 12 ಸಾವಿರ ಪಿಂಚಣಿಯ ಲಾಭವನ್ನು ಪಡೆಯಬಹುದು.

Join Nadunudi News WhatsApp Group

In Jeevan Akshay Yojana, you will get a pension of Rs 36000 every month
Image Credit: Governmentjobsinkarnataka

ಜೀವನ್ ಅಕ್ಷಯ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 36000 ರೂ ಪಿಂಚಣಿ
ಈ ಜೀವನ್ ಅಕ್ಷಯ್ ಯೋಜನೆಯಲ್ಲಿ ಹತ್ತು ವಿಧಾನದಲ್ಲಿ ಪಿಂಚಣಿ ಪಡೆಯುವ ಆಯ್ಕೆ ಇರುತ್ತದೆ. ಈ ಯೋಜನೆಯಲ್ಲಿನ ಹೂಡಿಕೆ ಗರಿಷ್ಟ ಮಿತಿಯಿಲ್ಲ.

ಇನ್ನು 45 ವರ್ಷದ ವ್ಯಕ್ತಿಯು ಈ ಯೋಜನೆಯಲ್ಲಿ 70 ಲಕ್ಷ ರೂ. ವಿಮಾ ಮೊತ್ತದ ಆಯ್ಕೆಯನ್ನು ಆರಿಸಿದರೆ, ವ್ಯಕ್ತಿಯು 71,26,000 ರೂ. ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಹೂಡಿಕೆ ಮಾಡಿದ ನಂತರ ಪ್ರತಿ ತಿಂಗಳು 36,429 ರೂ. ಪಿಂಚಣಿಯನ್ನು ಪಡೆಯಬಹುದು.

Join Nadunudi News WhatsApp Group