LIC Policy: ಈಗ ನಿಮ್ಮ ಮಗಳ ಮದುವೆಯನ್ನ LIC ಮಾಡಲಿದೆ, ಕೇವಲ 151 ರೂ ಹೂಡಿಕೆ ಮಾಡಿದ್ರೆ ಸಿಗುತ್ತೆ 31 ಲಕ್ಷ

2024 ರ ಆಕರ್ಷಕ ಪ್ಲ್ಯಾನ್ ಘೋಷಿಸಿದ LIC, 151 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 31 ಲಕ್ಷ ರೂ.

LIC Kanyadana Policy Investment Details: LIC ಜನಮಸಾಮಾನ್ಯರಿಗೆ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ವಿವಿಧ ಯೋಜನೆಯನ್ನು ಪರಿಚಯಿಸಿದೆ. ಪಿಂಚಣಿ ಪಡೆಯಲು, ಜೀವ ವಿಮ ಪಾಲಿಸಿ ಸೇರಿದಂತೆ ಇನ್ನಿತರ ಸಣ್ಣ ಉಳಿತಾಯದ ಯೋಜನೆಗಳನ್ನು LIC ಪರಿಚಯಿಸುತ್ತಿದೆ.

ಇನ್ನು LIC ಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಯೋಜನೆಯನ್ನು ಪರಿಚಯಿಸಲಾಗಿದೆ. ಈ ವಿಶೇಷ ಯೋಜನೆಯಡಿ ಹೂಡಿಕೆ ಮಾಡಿದರೆ ಹೆಣ್ಣು ಮಕ್ಕಳ ಪೋಷಕರು ತಮ್ಮ ಮಗಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಇರುವುದಿಲ್ಲ. LIC ಪರಿಚಯಿಸಿರುವ ಈ ವಿಶೇಷ ಯೋಜನೆಯ ಬಗ್ಗೆ ನಾವೀಗ ಈ ಲೇಖಾನದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

LIC Kanyadana Policy Investment Details
Image Credit: Krishijagran

2024 ರ ಆಕರ್ಷಕ ಪ್ಲ್ಯಾನ್ ಘೋಷಿಸಿದ LIC
ಭಾರತೀಯ ಜೀವ ವಿಮಾ ನಿಗಮವು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಹೆಸರು ಎಲ್ ಐ ಸಿಯ ಕನ್ಯಾದಾನ ಪಾಲಿಸಿ ಆಗಿದೆ. LIC Kanyadana Policy ಯು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಹಣಕಾಸಿನ ಉಳಿತಾಯ ಮಾಡಲು ಸಹಾಯ ಮಾಡುವ ಯೋಜನೆಯಾಗಿದೆ.

ಎಲ್ ಐ ಸಿ ಕನ್ಯಾದಾನ ಉಳಿತಾಯ ಯೋಜನೆಯನ್ನು ಹೆಣ್ಣು ಮಗುವಿನ ಪೋಷಕರು ನಿರ್ವಹಣೆ ಮಾಡಬಹುದಾದ ಯೋಜನೆಯಾಗಿದೆ. ಇದು ಕುಟುಂಬಕ್ಕೆ ಮತ್ತು ವಿಶೇಷವಾಗಿ ಹೆಣ್ಣು ಮಗುವಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತದೆ. ಇದು 25 ವರ್ಷಗಳ ಅವಧಿಯನ್ನು ಹೊಂದಿದೆ. ವಿಮೆಯ ಕನಿಷ್ಠ ಅವಧಿ 13 ವರ್ಷ ಆಗಿದೆ ಮತ್ತು ಗರಿಷ್ಠ 25 ವರ್ಷಗಳು ಆಗಿದೆ. ಈ ಯೋಜನೆಗೆ ಸೇರಲು ಹೆಣ್ಣು ಮಗುವಿನ ತಂದೆಯ ವಯಸ್ಸು 18 ರಿಂದ 50 ರ ನಡುವೆ ಇರಬೇಕು.

LIC Kanyadan Policy Investment Plan
Image Credit: Original Source

151 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 31 ಲಕ್ಷ ರೂ.
ಕನ್ಯಾದಾನ ಪಾಲಿಸಿಯಲ್ಲಿ ನೀವು ದಿನಕ್ಕೆ ರೂ.151 ಪಾವತಿಸಬೇಕು ಅಂದರೆ ತಿಂಗಳಿಗೆ ರೂ. 4530 ಠೇವಣಿ ಇಡಬೇಕು. 22 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದಾದ ಬಳಿಕ 25 ವರ್ಷ ಪೂರೈಸಿದ ಬಳಿಕ 31 ಲಕ್ಷ ರೂ. ಮೊತ್ತವನ್ನು ಪಡೆಯಬಹುದು. ಈ ಮೊತ್ತವನ್ನು ನಿಮ್ಮ ಮಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅಥವಾ ಆಕೆಯ ಮದುವೆಗೆ ಬಳಸಬಹುದು.

Join Nadunudi News WhatsApp Group

ಹಾಗೆಯೆ ಕನ್ಯಾದಾನ ಪಾಲಿಸಿಯಲ್ಲಿ ದಿನಕ್ಕೆ ರೂ.121 ಠೇವಣಿ ಇಟ್ಟರೆ 27 ಲಕ್ಷ ರೂ. ಗಳಿಸಬಹುದು. ಎಲ್ಐಸಿ ಕನ್ಯಾದಾನ ಪಾಲಿಸಿಯು ವಿಮಾ ಯೋಜನೆಯನ್ನು ಸಹ ಹೊಂದಿದೆ. ಪಾಲಿಸಿದಾರನ ಹಠಾತ್ ಮರಣದ ಸಂದರ್ಭದಲ್ಲಿ ಕುಟುಂಬವು ಪ್ರೀಮಿಯಂ ಪಾವತಿಸಬೇಕಿಲ್ಲ. ವಿಮಾದಾರನ ತಂದೆ ಆಕಸ್ಮಿಕವಾಗಿ ಸಾವನ್ನಪ್ಪಿದರೆ 10 ಲಕ್ಷ ರೂ. ನೀಡಲಾಗುತ್ತದೆ. ನಿಮ್ಮ ಹೆಣ್ಣು ಮಗಳ ಉತ್ತಮ ಭವಿಷ್ಯಕ್ಕಾಗಿ ಇಂದೇ ಈ ಯೋಜನೆಯಲ್ಲಿ ಹೂಡಿಕೆಯ್ನನು ಮಾಡುವುದು ಉತ್ತಮ.

Join Nadunudi News WhatsApp Group