Saral Pension: LIC ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಬರಲಿದೆ ಪ್ರತಿ ತಿಂಗಳು 12000 ರೂ ಪಿಂಚಣಿ, ಇಂದೇ ಅರ್ಜಿ ಹಾಕಿ.

LIC ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 12000 ರೂ ಪಿಂಚಣಿ

LIC Saral Pension Scheme 2024: ಸಾಮಾನ್ಯವಾಗಿ ಸರ್ಕಾರೀ ನೌಕರರಿಗೆ ಸರ್ಕಾರ ನಿವೃತ್ತಿಯ ನಂತರ ಪಿಂಚಣಿಯನ್ನು ನೀಡುತ್ತದೆ. ಆದರೆ ಖಾಸಗಿ ವಲಯದ ನೌಕರರಿಗೆ ನಿವೃತ್ತಿಯ ನಂತರ ಸರ್ಕಾರ ಪಿಂಚಣಿಯನ್ನು ನೀಡುವುದಿಲ್ಲ. ಬದಲಾಗಿ ಖಾಸಗಿ ವಲಯದ ನೌಕರರು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಇನ್ನು ಸರ್ಕಾರ ಸಾಕಷ್ಟು ಪಿಂಚಣಿಯ ಯೋಜನೆಯನ್ನು ಜನರಿಗಾಗಿ ಪರಿಚಯಿಸಿದೆ. ಅದರಲ್ಲಿ LIC Saral Pension Scheme ವಿಶೇಷವಾಗಿದೆ ಎನ್ನಬಹುದು. 60 ವರ್ಷ ಮೇಲ್ಪಟ್ಟ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಲು ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯ ಮೂಲಕ ನೀವು ಸಿಂಗಲ್ ಪ್ರೀಮಿಯಂ ನಲ್ಲಿ ಪ್ರತಿ ತಿಂಗಳು ದೊಡ್ಡ ಮೊತ್ತದ ಪಿಂಚಣಿಯನ್ನು ಪಡೆಬಹುದು.

LIC Saral Pension Scheme Investment Profit
Image Credit: Original Source

LIC ನಿಮಗಾಗಿ ಪರಿಚಯಿಸಿದೆ ಬೆಸ್ಟ್ ಪೆನ್ಷನ್ ಸ್ಕೀಮ್
ಎಲ್ ಐಸಿ ಸರಳ ಪಿಂಚಣಿ ಯೋಜನೆಯ ಮೂಲಕ 40 ವರ್ಷದಿಂದ 80 ವರ್ಷದ ವಯಸ್ಸಿನವರು ಈ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು. ಈ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಠೇವಣಿ ಮಾಡಲಾಗುತ್ತದೆ. ಇನ್ನು ಪಿಂಚಣಿದಾರರು ಮರಣ ಹೊಂದಿದರೆ, ವ್ಯಕ್ತಿಯ ನಾಮಿನಿ ಠೇವಣಿ ಮಾಡಿದ ಮೊತ್ತದ ಹಣವನ್ನು ಮರಳಿ ಪಡೆಯಬಹುದಾಗಿದೆ. ಈ ಯೋಜನೆಯ ಹೂಡಿಕೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

LIC ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಬರಲಿದೆ ಪ್ರತಿ ತಿಂಗಳು 12000 ರೂ ಪಿಂಚಣಿ
LIC ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಇನ್ನು 42 ವರ್ಷ ವಯಸ್ಸಿನ ವ್ಯಕ್ತಿಯು 30 ಲಕ್ಷ ರೂ. ವರ್ಷಾಶನವನ್ನು ತೆಗೆದುಕೊಂಡರೆ ಅವರು ಮಾಸಿಕ ಸುಮಾರು 12,388 ರೂ.ಗಳ ಪಿಂಚಣಿ ಪಡೆಯಬಹುದು. ಈ ಯೋಜನೆಯಡಿ ಮಾಸಿಕವಾಗಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು ಹೂಡಿಕೆಗೆ ಗರಿಷ್ಟ ಮಿತಿಯಿಲ್ಲ.

LIC Saral Pension Scheme Calculator
Image Credit: tv9hindi

LIC ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರು 6 ತಿಂಗಳ ನಂತರ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಮಾಡಬಹುದಾಗಿದೆ. ಪಾಲಿಸಿ ಪಡೆದ ನಂತರ ಪಾಲಿಸಿದಾರರ ಜೀವತಾವದಿಯವರೆಗೂ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಪಾಲಿಸಿದಾರರ ಮರಣದ ನಂತರ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group