Vehicle Tax: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಹಿಸುದ್ದಿ ನೀಡಿದ ಸರ್ಕಾರ, 20% ತೆರಿಗೆ ಹಣ ವಾಪಸ್

ಹೊಸ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ನಿಯಮವನ್ನ ಸಡಿಲ ಮಾಡಿ ಸರ್ಕಾರ

Lifetime Tax Proposal On Electric Vehicles: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಾಗುತ್ತಿದ್ದು, ಈ ಕುರಿತು ಹೊಸ ತೆರಿಗೆ ವಿಧಿಸುವ ಪ್ರಸ್ಥಾಪನೆಯಂತೆ ಶೇ.20ರಷ್ಟು ತೆರಿಗೆ ವಿಧಿಸುವುದಾಗಿ ಮಾಹಿತಿ ಹೊರಬಿದ್ದಿತು. ಎಲೆಕ್ಟ್ರಿಕ್ ವಾಹನಗಳ ಮಾರಾಟವು ಸ್ಥಿರವಾದ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

ರಾಜ್ಯದಲ್ಲಿ ಪ್ರಸ್ತುತ ನೋಂದಾಯಿತ ವಾಹನಗಳ ಸಂಖ್ಯೆ ಜುಲೈನಲ್ಲಿ 2.36 ಲಕ್ಷವಾಗಿದೆ. ಏಪ್ರಿಲ್ 1, 2016 ಮತ್ತು 2017 ರಂತೆ ನಾಲ್ಕು ಚಕ್ರದ ಮತ್ತು ದ್ವಿಚಕ್ರ ವಾಹನಗಳಿಗೆ ರಸ್ತೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡುವ ಮೂಲಕ 2016 ರಲ್ಲಿ EV ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

Lifetime Tax Proposal On Electric Vehicles
Image Credit: TV9 Kannada

ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ತೆರಿಗೆ ವಿಧಿಸಲಾಗಿತ್ತು

ಕರ್ನಾಟಕ ಮೋಟಾರು ವಾಹನ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆಯ ಭಾಗವಾಗಿ ಹೊಸ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 20 ರಷ್ಟು ಜೀವಿತಾವಧಿ ತೆರಿಗೆಯನ್ನು ಪ್ರಸ್ತಾಪಿಸಲಾಗಿದ್ದು. ಸರ್ಕಾರವು ಈ ಶೂನ್ಯ ಶೇಕಡಾ ರಸ್ತೆ ತೆರಿಗೆ ವಿನಾಯಿತಿಯನ್ನು ತೆಗೆದುಹಾಕಲು ಪರಿಗಣಿಸಿತು ಮತ್ತು ಬದಲಿಗೆ 20 ಪ್ರತಿಶತ ರಸ್ತೆ ತೆರಿಗೆಯನ್ನು ಪ್ರಸ್ತಾಪಿಸಿತು.

ಈ ಸಂಬಂಧ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿತ್ತು. ಮಾಜಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತಿತರರು ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ.20ರಷ್ಟು ತೆರಿಗೆ ವಿಧಿಸದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಒತ್ತಾಯಿಸಿದರು.

Join Nadunudi News WhatsApp Group

Lifetime Tax On Electric Vehicles
Image Credit: Housing

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ತೆರಿಗೆ ವಿನಾಯಿತಿ

20 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇ.20ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವನ್ನು ಈ ಹಿಂದೆ ಪ್ರಸ್ತಾಪಿಸಿದ್ದು, ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಹಿಂಪಡೆದಿದ್ದಾರೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ. 20 ರಷ್ಟು ತೆರಿಗೆ ಪ್ರಸ್ತಾಪವನ್ನು ಕೈಬಿಡಲು ಸಚಿವರು ಒಪ್ಪಿಕೊಂಡ ನಂತರ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತು. ಮಸೂದೆಯ ತಿದ್ದುಪಡಿ ಆವೃತ್ತಿಯು ಎಲೆಕ್ಟ್ರಿಕ್ ವಾಹನಗಳ ಮೇಲೆ 10% ತೆರಿಗೆಯನ್ನು ಪ್ರಸ್ತಾಪಿಸುತ್ತದೆ. ಮಸೂದೆಯಡಿ, 10 ಲಕ್ಷದಿಂದ 15 ರೂ.ಗಳವರೆಗಿನ ಹಳದಿ ಬೋರ್ಡ್ ಕಾರುಗಳಿಗೆ ಸರ್ಕಾರ ಜೀವಮಾನ ತೆರಿಗೆ ವಿಧಿಸುವುದಿಲ್ಲ ಎಂದು ಹೇಳಿದರು.

Join Nadunudi News WhatsApp Group