Liquor Price Hike: ಎಣ್ಣೆ ಪ್ರಿಯರಿಗೆ ಮತ್ತೆ ಬೇಸರದ ಸುದ್ದಿ, ಜನವರಿ 1 ಈ ಮದ್ಯಗಳ ಬೆಲೆಯಲ್ಲಿ ಏರಿಕೆ

ಜನವರಿಯಿಂದ ಮದ್ಯ ಬೆಲೆಯಲ್ಲಿ ಬಾರಿ ಹೆಚ್ಚಳ.

Liquor Price Hike In 2024: ಹೊಸ ವರ್ಷದ ಆರಂಭಕ್ಕೆ ಇನ್ನು ಕೆಲವೇ ದಿನ ಭಾಕಿ ಇದೆ. ಹೊಸ ವರ್ಷದ ಆರಂಭ ಅಂದರೆ ಮೋಜು, ಮಸ್ತಿ, ಪಾರ್ಟಿ ಎಂಥೆಲ್ಲಾ ಎಲ್ಲಾ ಕಡೆಯೂ ಸಂಭ್ರಮದ ವಾತಾವರಣವೇ ಹೆಚ್ಚಾಗಿರುತ್ತದೆ. ಪಾರ್ಟಿ ಅಂದಮೇಲೆ ಮದ್ಯ ಸೇವನೆ ಇದ್ದೆ ಇರುತ್ತದೆ ಅಷ್ಟೇ ಅಲ್ಲದೆ ಸ್ವಲ್ಪ ಹೆಚ್ಚಾಗೇ ಮದ್ಯ ಬೇಕಾಗಿರುತ್ತದೆ.

ಆದರೆ ಸರ್ಕಾರ ಈ ಮದ್ಯ ದರವನ್ನು ಹೆಚ್ಚಿಸಿದ್ದು, ಮದ್ಯ ಪ್ರಿಯರಿಗೆ ಬಹಳ ಬೇಸರ ತರಿಸಿದೆ. ಜನವರಿಯಿಂದ ಮದ್ಯ ಬೆಲೆಯಲ್ಲಿ ಹೆಚ್ಚಳ ಆಗಲಿದ್ದು ಈ ಕುರಿತು ಕಂಪನಿ ಈಗಾಗಲೇ ಮಾಹಿತಿ ನೀಡಿದೆ ಎನ್ನಲಾಗಿದೆ. ಹೌದು ಜನವರಿ ಮೊದಲ ದಿನದಿಂದ ಕೆಲವು ಮದ್ಯಗಳ ಬೆಲೆ ಏರಿಕೆ ಆಗಲಿದ್ದು ಇದು ಮದ್ಯ ಪ್ರಿಯರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

Liquor Price Hike
Image Credit: The Economic Times

ಜನವರಿಯಿಂದ ಮದ್ಯ ಬೆಲೆಯಲ್ಲಿ ಬಾರಿ ಹೆಚ್ಚಳ

ಮದ್ಯ ಬೆಲೆಯನ್ನು ಸರಕಾರ ಹೆಚ್ಚಿಸಲು ಪ್ರಮುಖ ಕಾರಣವೇ ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ ಅಗತ್ಯವಾಗಿದ್ದು, ಈ ಕಾರಣ ಗ್ರಾಹಕರ ಮೇಲೆ ಹೊರೆ ಹಾಕಲೇಬೇಕಾದ ಹಿನ್ನೆಲೆ ದರ ಏರಿಕೆಗೆ ಕಂಪನಿಗಳು ನಿರ್ಧಾರ ಮಾಡಿವೆ. ಹಾಗಾಗಿ ಜನವರಿ 1 ರಿಂದ ದರ ಏರಿಕೆ ಮಾಡುವಂತೆ ಬಾರ್ (Bar) ಮಾಲೀಕರಿಗೆ ಕಂಪನಿಗಳಿಂದ ಸೂಚನೆ ನೀಡಿದೆ.

Liquor Price Hike In 2024
Image Credit: Times Now

ಮದ್ಯ ದರದಲ್ಲಿ ಎಷ್ಟು ಹೆಚ್ಚಳ ಆಗಿದೆ?

Join Nadunudi News WhatsApp Group

ಸರ್ಕಾರ ಆರಂಭದಲ್ಲೇ ಆರ್ಥಿಕ ಮೂಲವಾದ ಅಬಕಾರಿ ಸುಂಕದ (Excise Duty) ದರವನ್ನು ಶೇ.20ರಷ್ಟು ಹೆಚ್ಚಳ ಮಾಡಿತ್ತು. ಈಗ ಮತ್ತೆ ಸರ್ಕಾರದ ಖಜಾನೆಗೆ ತುಂಬಿಸಿಕೊಳ್ಳಲು ಜನವರಿ 1 ರಿಂದ ಮದ್ಯ ದರ ಏರಿಕೆಗೆ ಸೂಚನೆ ನೀಡಲಾಗಿದ್ದು, ಓಟಿ (OT) 180 ಎಂಎಲ್ ಗೆ 100 ರೂ. ಇದ್ದು, ಜನವರಿ 1 ರಿಂದ ಓಟಿ ಬೆಲೆ 123 ರೂ.ಗೆ ಏರಿಕೆಯಾಗಲಿದೆ. ಬಿಪಿ (BP) ದರ 123 ರೂ. ಇದ್ದು ಜನವರಿಯಿಂದ 159 ರೂ. ಆಗಲಿದೆ. 8ಪಿಎಂ (8PM) ದರ 100 ರೂ. ಇದ್ದು 123 ರೂ.ಗೆ ಏರಲಿದೆ. ಹಾಗಾಗಿ ಹೊಸ ವರ್ಷದ ಆಚರಣೆಗೆ ಮದ್ಯ ಬೆಲೆ ಹೆಚ್ಚಳದ ಬಿಸಿ ತಟ್ಟಲಿದೆ ಎನ್ನಬಹುದು.

Join Nadunudi News WhatsApp Group