Liquor: ಎಣ್ಣೆ ಪ್ರಿಯರಿಗೆ ಮತ್ತೆ ಬೇಸರದ ಸುದ್ದಿ, ಈ ಬ್ರಾಂಡ್ ಗಳ ಬೆಲೆಯಲ್ಲಿ ಮತ್ತೆ ಏರಿಕೆ

ಬಡವರು ಬಳಸುವ ಕೆಲವು ಮದ್ಯಗಳ ಬೆಲೆ ಏರಿಕೆ, ಹೊಸ ವರ್ಷಕ್ಕೆ ಏನೇ ಪ್ರಿಯರಿಗೆ ಬೇಸರದ ಸುದ್ದಿ

Some Brand Liquor Price Hikes: ಹೊಸ ವರ್ಷದ ಸಂಭ್ರಮದ ಜೊತೆಗೆ ಮದ್ಯ (Liquor) ಗಳ ಬೆಲೆ ಈಗಾಗಲೇ ಜಾಸ್ತಿ ಆಗಿದ್ದು ನಾವು ಕೇಳಿದ್ದೇವೆ. ಬಿಯರ್ ಉತ್ಪಾದನೆ ಕಡಿಮೆ ಮಾಡಿ ಬೆಲೆಯನ್ನು ಹೆಚ್ಚಿಸಿದ್ದರೂ ಕೂಡ ಹೊಸ ವರ್ಷದ (New Year) ಪಾರ್ಟಿಯೇನು ಕಡಿಮೆ ಆಗಿರಲಿಲ್ಲ, ಆದರೆ ಈಗ ಮತ್ತೆ ಬಡವರು ಕುಡಿಯುವ ಎಣ್ಣೆ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ದು, ಇಮದ್ಯಗಳ ಬೆಳೆಯನ್ನು ಇನ್ನಷ್ಟು ಹೆಚ್ಚಳ ಮಾಡಲು ತೀರ್ಮಾನವನ್ನ ಮಾಡಲಾಗಿದೆ.

Some Brand Liquor Price Hikes
Image Source: Mint

ಮದ್ಯ ಬೆಲೆಯಲ್ಲಿ ಏರಿಕೆ (Liquor Price Hike)

ಸರ್ಕಾರ ಹೊಸ ವರ್ಷದಂದೇ ಕುಡಿಯುವ ಮದ್ಯ ರೇಟ್ ಜಾಸ್ತಿ ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಅಬಕಾರಿ ಇಲಾಖೆ ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯ ಗಳಿಸಿದೆ. ಇಂದಿನಿಂದ ಬಡವರು ಕುಡಿಯುವ ಮದ್ಯದ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈಗಾಗಲೇ 17% ರಷ್ಟು ಓವರ್ ಆಲ್ ಮದ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಕೆಲ ಮದ್ಯದ ಬೆಲೆ, ಅದರಲ್ಲೂ ಬಡವರೇ ಹೆಚ್ಚಾಗಿ ಕುಡಿಯುತ್ತಿದ್ದ ಮದ್ಯಗಳ ಬೆಲೆ ಹೆಚ್ಚಿಸಲಾಗಿದೆ ಎನ್ನಲಾಗಿದೆ.

Some Brand Liquor Price Hikes
Image Source: Mint

ಮದ್ಯದ ಬೆಲೆಯಲ್ಲಿ ಎಷ್ಟು ಏರಿಕೆ ಆಗಿದೆ…?

ಕೆಲವು ಮದ್ಯ ಬ್ರಾಂಡ್ ಗಳ ಬೆಲೆ ಏರಿಕೆ ಆಗಿದ್ದು, ಮದ್ಯ ಉತ್ವಾದನ‌‌ ಕಂಪನಿಗಳು ಕ್ವಾಟರ್​ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿವೆ. ಬ್ರಾಂಡ್- 1 (180 ಎಂಎಲ್): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ. ಬ್ರಾಂಡ್ – 2 (180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ. ಬ್ರಾಂಡ್ – 3 (180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ. ಹೀಗೆ ಕೆಲವು ಬ್ರಾಂಡ್ ಗಳ ಬೆಲೆಯನ್ನು ಏರಿಸಲಾಗಿದೆ .

Join Nadunudi News WhatsApp Group

Join Nadunudi News WhatsApp Group