ಡಿ. 31 ಕ್ಕೆ ಮದ್ಯ ಮಾರಾಟದಿಂದ ಬಂದ ಒಟ್ಟು ಆದಾಯ ಎಷ್ಟು ಗೊತ್ತಾ…? ಕೋಟಿ ಕೋಟಿ ಬೆಲೆಯ ಮದ್ಯ ಮಾರಾಟ

ಡಿಸೆಂಬರ್ 31 ರಂದು ಮದ್ಯ ಮಾರಾಟದಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ

Liquor Sale In December 31st: ಸದ್ಯ 2023 ಗೆ ವಿದಾಯ ಹೇಳಿ 2024 ರನ್ನು ಸ್ವಾಗತಿಸಲಾಗಿದೆ. ಹೊಸ ವರ್ಷವನ್ನು ಎಲ್ಲರು ಕೂಡ ಬಹಳ ಅದ್ದೂರಿಯಾಗಿ ಆರಂಭಿಸಿದ್ದಾರೆ. ಇನ್ನು December 31st ನಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಜೋರಾಗಿಯೇ ನಡೆದಿದೆ.

ಎಲ್ಲೆಡೆ ಜನರು ಹೊಸ ವರ್ಷವನ್ನು ಪಾರ್ಟಿ ಮಾಡುವ ಮೂಲಕ ಬಹಳ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ನಿಮಗೆ ಗೊತ್ತೇ..? ಹೊಸ ವರ್ಷದ ಅದ್ದೂರಿ ಆರಂಭ ಅಬಕಾರಿ ಖಜಾನೆಯನ್ನು ತುಂಬಿಸಿದೆ ಎನ್ನುವ ವಿಚಾರ. ಹೌದು, ಈ ಬಾರಿ ನ್ಯೂ ಇಯರ್ ಸೆಲೆಬ್ರೆಷನ್ ಅಬಕಾರಿ ಇಲಾಖೆಗೆ ಬಾರಿ ಲಾಭವನ್ನು ನೀಡಿದೆ.

liquor sale december 31st in karnataka
Image Credit: Original Source

ಹೊಸ ವರ್ಷದ ಆಗಮನಕ್ಕೆ ಅದ್ದೂರಿ ಸೆಲೆಬ್ರೆಷನ್
ಡಿ. 31 ಕ್ಕೆ ಮದ್ಯ ಮಾರಾಟದಿಂದ ಅಬಕಾರಿ ಇಲಾಖೆ ಕೋಟಿ ಕೋಟಿ ಹಣ ಸಂಪಾದಿಸಿದೆ. 2023 ವರ್ಷದ ಕೊನೆಯ ಬಾರಿ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ದಾಖಲೆಯ ಮಟ್ಟದಲ್ಲಿ ಮದ್ಯ ಮಾರಾಟವಾಗಿರುವ ಬಗ್ಗೆ MYSORE SALES INTERNATIONAL LTD.(MSIL) ಅಧಿಕೃತ ಮಾಹಿತಿ ನೀಡಿದೆ. ಇದೀಗ ನಾವು ಡಿ 31 ಕ್ಕೆ ಮದ್ಯ ಮಾರಾಟದಿಂದ ಬಂದ ಒಟ್ಟು ಆದಾಯ ಎಷ್ಟು..? ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಡಿ. 31 ಕ್ಕೆ ಮದ್ಯ ಮಾರಾಟದಿಂದ ಬಂದ ಒಟ್ಟು ಆದಾಯ ಎಷ್ಟು ಗೊತ್ತಾ…?
ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ರಾಜ್ಯದಲ್ಲಿ ಒಟ್ಟು 1031 ಮದ್ಯದ ಮಳಿಗೆಗಳನ್ನು ಹೊಂದಿದೆ. 2023ರ ಕೊನೆಯ ದಿನವಾದ ಭಾನುವಾರ (ಡಿ.31) ಒಂದೇ ದಿನದಲ್ಲಿ ದಾಖಲೆಯ ರೂ. 18.85 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಎಂಎಸ್‌ ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಬಹಿರಂಗಪಡಿಸಿದ್ದಾರೆ. 2022 ಡಿ.31 ರಂದು ರೂ. 14.51 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.

Liquor sale profit december 31st in karnataka
Image Credit: Original Source

ರಾಯಚೂರು ರೈಲು ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಅತಿ ಹೆಚ್ಚು 11.66 ಲಕ್ಷ ರೂ.ಗಳ ಮದ್ಯ ಮಾರಾಟವಾಗಿದ್ದು, ಅದೇ ನಗರದ ಗಂಜ್ ರಸ್ತೆಯ ಅಂಗಡಿಯೊಂದರಲ್ಲಿ 9.96 ಲಕ್ಷ ರೂ. ಮದ್ಯ ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಸುಮಾರು ರೂ. 4.34 ಕೋಟಿ ಆದಾಯ ಹೆಚ್ಚಳವಾಗಿದೆ. ಈ ವರ್ಷದಲ್ಲಿ ಜನರು ನ್ಯೂ ಇಯರ್ ಸೆಲೆಬ್ರೆಷನ್ ಮಾಡುವ ಮೂಲಕ ಅಬಕಾರಿ ಇಲಾಖೆಗೆ ಕೋಟಿ ಕೋಟಿ ಆದಾಯವನ್ನು ನೀಡಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಅಬಕಾರಿ ಇಲಾಖೆಯ ಖಜಾನೆ ತುಂಬಿಹೋಗಿದೆ.

Join Nadunudi News WhatsApp Group

Join Nadunudi News WhatsApp Group