LIC Loan: CIBIL ಸ್ಕೋರ್ ಕಾರಣ ಬ್ಯಾಂಕಿನಲ್ಲಿ ಸಾಲ ಸಿಗುತ್ತಿಲ್ವಾ…? ಹಾಗಾದರೆ LIC ಯಿಂದ ಸುಲಭವಾಗಿ ಸಾಲ ಪಡೆಯಿರಿ.

ಈಗ ಬ್ಯಾಂಕ್ ಬದಲು LIC ಮೂಲಕ ಲೋನ್ ಪಡೆದುಕೊಳ್ಳಬಹುದು

Loan Facility On LIC Policy: ಪ್ರತಿಯೊಬ್ಬ ವ್ಯಕ್ತಿಗೂ ಒಂದು ಭವಿಷ್ಯ ಅನ್ನುವುದು ಇರುತ್ತದೆ. ನಾಳೆ ಎನ್ನುವುದು ಯಾರಿಗೂ ತಿಳಿದಿರುವುದಿಲ್ಲ, ಯಾವಾಗ ಯಾವ ಸಮಸ್ಯೆಯಲ್ಲಾದರೂ ಮನುಷ್ಯ ಸಿಲುಕಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಹಣ ಬಹಳ ಮುಖ್ಯ ಆಗಿರುತ್ತದೆ. ನಮ್ಮ ಜೀವನದಲ್ಲಿ ಆಕಸ್ಮಿಕ ವಾಗಿ ಸಂಭವಿಸುವ ಎಲ್ಲ ಸಮಸ್ಯೆಗಳ ಬಗೆಹರಿಕೆಗೂ ಹಣ ಅವಶ್ಯಕ ಆಗಿರುತ್ತದೆ.

ಅಂತಹ ಸಂದರ್ಭದಲ್ಲಿ ನಮ್ಮ ಸ್ನೇಹಿತರಿಂದಲೂ ಹಣ ದೊರೆಯದಿದ್ದಾಗ, ವಯಕ್ತಿಕ ಸಾಲದ ಮೊರೆ ಹೋಗಬೇಕಾಗುತ್ತದೆ ಅಂತ ಸಮಯದಲ್ಲಿ ನಮ್ಮ ಸಿಬಿಲ್ ಸ್ಕೋರ್ (Cibil Score) ಅತೀ ಮುಖ್ಯ ಆಗಿರುತ್ತದೆ. ಸಿಬಿಲ್ ಸ್ಕೋರ್ ಕೆಟ್ಟದಿದ್ದಾಗ ಸಾಲ ದೊರೆಯುವುದಿಲ್ಲ ಒಂದೊಮ್ಮೆ ಸಾಲ ಸಿಕ್ಕರೂ ಸಾಲದ ಬಡ್ಡಿಯನ್ನು ಊಹಿಸಿಕೊಳ್ಳಲು ಸಾಧ್ಯ ಇರುವುದಿಲ್ಲ ಅಷ್ಟೊಂದು ಎತ್ತರದಲ್ಲಿ ಬಡ್ಡಿದರ ಇರುತ್ತದೆ. ಇಂತಹ ಸಂದರ್ಭದಲ್ಲಿ ನಮಗೆ ಸಹಾಯಕ್ಕೆ ಬರುವುದೇ LIC ಸಾಲ.

Loan On LIC Policy
Image Credit: Jagran

ಎಲ್‌ಐಸಿ ನಮಗೆ ಸಾಲ ನೀಡುತ್ತದೆ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನಮಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ನಮಗೆ ಹಣದ ಅವಶ್ಯಕತೆ ಬಂದಾಗ ಸ್ನೇಹಿತರಿಂದ ಅಥವಾ ಬ್ಯಾಂಕ್ ನಿಂದ ಸಾಲ ದೊರೆಯದೇ ಇದ್ದಾಗ ಎಲ್‌ಐಸಿಯಿಂದ ಸಾಲವನ್ನು ಪಡೆಯಬಹುದಾಗಿದೆ.

ಆದರೆ ನೀವು ಎಲ್‌ಐಸಿಯಲ್ಲಿ ಪಾಲಿಸಿ ಹೊಂದಿರಬೇಕಾಗುತ್ತದೆ. ಎಲ್‌ಐಸಿಯಲ್ಲಿ ನಿಮ್ಮ ಹೆಸರಿನಲ್ಲಿ ಪಾಲಿಸಿಯಿದ್ದರೆ ನೀವು ಆ ಪಾಲಿಸಿಯಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ. LIC Policy ಅಡಿಯಲ್ಲಿ ನೀವು ಸಾಲವನ್ನು ಪಡೆಯುವಾಗ ಯಾವುದೇ ಸಿಬಿಸಿ ಸ್ಕೋರ್ ಗಣನೆಗೆ ತೆಗೆದುಕೊಳ್ಳುವುದಿಲ್ಲ ಹಾಗು ಇನ್ನಿತರ ವಯಕ್ತಿಕ ಸಾಲಕ್ಕೆ ಹೋಲಿಕೆ ಮಾಡಿದರೆ ಬಹಳ ಕಡಿಮೆ ಬಡ್ಡಿಯನ್ನು ಎಲ್‌ಐಸಿ ವಿಧಿಸುತ್ತದೆ.

Join Nadunudi News WhatsApp Group

LIC Loan Facility
Image Credit: Economictimes

ಎಲ್‌ಐಸಿ ಪಾಲಿಸಿ ಯಡಿ ಸಾಲ ಪಡೆಯಲು ಬೇಕಾಗಿರುವ ಪ್ರಮುಖ ಅರ್ಹತೆಗಳು

ಎಲ್‌ಐಸಿ ಪಾಲಿಸಿ ಅಡಿಯಲ್ಲಿ ಪಡೆಯುವ ಸಾಲವು ಪಾಲಿಸಿಯನ್ನು ಅಡಮಾನವಾಗಿಟ್ಟು ಪಡೆಯುವ ಸಾಲವಾಗಿದೆ. ನೀವು ಸಾಲ ಪಡೆಯಲು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಮೂರು ವರ್ಷಗಳ ಅವಧಿಗೆ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿ ಮಾಡಿರತಕ್ಕದು.ಪಾಲಿಸಿ ಖರೀದಿಸಿದ ಅಥವಾ ತೆರೆದ ನಿಗದಿತ ಅವಧಿಯ ಬಳಿಕ ಮಾತ್ರ ಎಲ್‌ಐಸಿಯಿಂದ ಸಾಲವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ಸಾಮಾನ್ಯವಾಗಿ ನಿಮ್ಮ ಎಲ್‌ಐಸಿ ಪಾಲಿಸಿಯ ಮೊತ್ತದ ಶೇಕಡ 90 ರಷ್ಟು ಮೊತ್ತವನ್ನು ನೀವು ಸಾಲವನ್ನು ಪಡೆಯಲು ಅರ್ಹರಾಗಿರುತ್ತೀರಿ.

ಎಲ್‌ಐಸಿ ಪಾಲಿಸಿ ಸಾಲದ ಬಡ್ಡಿದರ ಎಷ್ಟು?

ವೈಯಕ್ತಿಕ ಸಾಲಕ್ಕೆ ಹೋಲಿಕೆ ಮಾಡಿದರೆ ಎಲ್‌ಐಸಿ ಪಾಲಿಸಿ ಸಾಲದ ಬಡ್ಡಿದರ ಬಹಳ ಕಡಿಮೆ ಆಗಿರುತ್ತದೆ . ಎಲ್‌ಐಸಿ ಪಾಲಿಸಿಯಡಿಯಲ್ಲಿ ಪಡೆಯುವ ಸಾಲದ ಬಡ್ಡಿದರವು ಸಾಮಾನ್ಯವಾಗಿ ಶೇಕಡ 10 ರಿಂದ ಶೇಕಡ 13 ರ ನಡುವೆ ಇರುತ್ತದೆ.

ಇನ್ನು ನೀವು ಪ್ರತಿ ತಿಂಗಳು ಇಎಂಐ ಪಾವತಿ ಮಾಡುವ ತಲೆಬಿಸಿ ಮಾಡಬೇಕಾಗಿಲ್ಲ. ನಿಮಗೆ ಸುಲಭ ಆಗುವ ರೀತಿಯಲ್ಲಿ ನೀವು ಇನ್‌ಸ್ಟಾಲ್‌ ಮೆಂಟ್‌ ನಲ್ಲಿ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ. ಪಾಲಿಸಿದಾರರು ಸಾಲವನ್ನು ಮರುಪಾವತಿ ಮಾಡದಿದ್ದರೆ, ಪಾಲಿಸಿ ಮೆಚ್ಯೂರ್ ಆದಾಗ, ಬಡ್ಡಿದರವನ್ನು ಕಡಿತಗೊಳಿಸಲಾಗುತ್ತದೆ. ಸಾಲದ ಮೊತ್ತ ಕಡಿತ ಮಾಡಿ ಬಾಕಿ ಮೊತ್ತ ಮರುಪಾವತಿಸಲಾಗುತ್ತದೆ.

lic loan without cibil
Image Credit: Original Source

ಎಲ್‌ಐಸಿ ಪಾಲಿಸಿಗೆ ಅರ್ಜಿ ಸಲ್ಲಿಸುವ ವಿಧಾನ

ನೀವು ಆನ್‌ಲೈನ್‌ನಲ್ಲಿ ಅಥವಾ ಆಪ್‌ಲೈನ್‌ ನಲ್ಲಿ ಎಲ್‌ಐಸಿ ಪಾಲಿಸಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಆಫ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಎಲ್‌ಐಸಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಕೆವೈಸಿ ದಾಖಲೆಗಳೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ನೀವು ಎಲ್‌ಐಸಿ ಇ-ಸರ್ವಿಸ್‌ಗೆ ರಿಜಿಸ್ಟಾರ್ ಮಾಡಬೇಕಾಗುತ್ತದೆ.

ನಿಮ್ಮ ಖಾತೆಗೆ ಲಾಗಿನ್ ಆಗಿ, ಪಾಲಿಸಿ ಅಡಿಯಲ್ಲಿ ನೀವು ಎಷ್ಟು ಸಾಲ ಪಡೆಯಲು ಅರ್ಹರು ಎಂದು ಚೆಕ್ ಮಾಡಿಕೊಳ್ಳಿ. ನೀವು ಸಾಲ ಪಡೆಯಲು ಅರ್ಹರಾಗಿದ್ದರೆ, ನೀವು ನಿಯಮ, ಷರತ್ತು, ಬಡ್ಡಿದರ, ಇತರೆ ಮಾಹಿತಿ ಪರಿಶೀಲಿಸಿ ಅದಾದ ಬಳಿಕ ಕೆವೈಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಸಲ್ಲಿಸಿ ಎಲ್‌ಐಸಿ ಪಾಲಿಸಿಯ ಸರೆಂಡರ್ ಮೌಲ್ಯದ ಆಧಾರದಲ್ಲಿ ಸಾಲದ ಮೊತ್ತ ನಿರ್ಧರಿಸಲಾಗುತ್ತದೆ. ಎಲ್‌ಐಸಿ ಪಾಲಿಸಿಯ ಅಡಿಯಲ್ಲಿನ ಸಾಲವು ಬಹಳ ಸುರಕ್ಷಿತ ಸಾಲ ಎಂದು ಹೇಳಬಹುದು.

Join Nadunudi News WhatsApp Group