Loan Repayment: ರೈತರೇ ಬ್ಯಾಂಕ್ ಸಾಲದ EMI ಕಟ್ಟಲು ಕಷ್ಟವಾಗುತ್ತಿದೆಯಾ….? ಸಾಲ ಪರಿವರ್ತಿಸಲು ಸರ್ಕಾರದ ಆದೇಶ

ಬ್ಯಾಂಕ್ ಸಾಲ ಕಷ್ಟಪಡುತ್ತಿರುವ ರೈತರು ಈಗ ಸಾಲ ಪರಿವರ್ತಿಸಿಕೊಳ್ಳಬಹುದು

Loan Repayment Time Extension: ರೈತರು ತಮ್ಮ ಕೃಷಿ ಚಟುವಟಿಕೆಗಳ ಉದ್ದೇಶಕ್ಕಾಗಿ ಬ್ಯಾಂಕ್ ನಿಂದ ಸಾಲ ಪಡೆಯುತ್ತಾರೆ. ಒಂದು ಭೂಮಿಯಲ್ಲಿ ಬೆಳೆ ಬೆಳೆಯಬೇಕೆಂದರೆ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇರುತ್ತದೆ ಹಾಗಾಗಿ ರೈತರು ಭೂಮಿಯನ್ನು ನಂಬಿ ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆದಿರುತ್ತಾರೆ.

ಅಧಿಕ ಮಳೆ, ಬರಗಾಲ ಅಥವಾ ಇನ್ನಿತರ ಕಾರಣಗಳಿಂದ ಬೆಳೆ ನಾಶ ಆದರೆ ಅವರಿಗೆ ಸಾಲವನ್ನು ಮರು ಪಾವತಿ ಮಾಡಲು ಬಹಳ ಕಷ್ಟ ಆಗುತ್ತದೆ. ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಬ್ಯಾಂಕ್ ಗೆ ಕಟ್ಟಲು ಅಸಾಧ್ಯ ವಾಗಿ ರೈತರು ಬಹಳ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಇಂತಹ ವಿಚಾರಗಳನ್ನು ಗಮನಿಸಿದ ಸರಕಾರ ಬ್ಯಾಂಕ್ ಗೆ ಒಂದು ಸೂಚನೆ ಯನ್ನು ನೀಡಿದೆ.

Loan Repayment
Image Credit: Tataaia

ಸಾಲ ಮರುಪಾವತಿ ಅವಧಿ ವಿಸ್ತರಣೆ

ರೈತರು ಸಾಲ ಮಾಡದೇ ಕೃಷಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ಅವರ ಸಾಲ ಮರುಪಾವತಿ ಬಗ್ಗೆ ಹೆಚ್ಚಿನ ಗಮನಹರಿಸಿದ ಸರಕಾರ ಒಂದು ನಿರ್ದಿಷ್ಟ ಕ್ರಮವನ್ನು ಜಾರಿಗೆ ತರಲಿದೆ ಎನ್ನಲಾಗಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರೈತರ ಸಾಲ ಮರುಪಾವತಿ ಅವಧಿ ಪರಿವರ್ತಿಸಲು ಅಥವಾ ವಿಸ್ತರಣೆ ಮಾಡಲು ಕ್ರಮ ವಹಿಸಲಾಗಿದೆ ಎಂದರು. ಅಲ್ಪಾವಧಿ ಸಾಲವನ್ನು ಮಧ್ಯಮಾವಧಿಗೆ, ಮಧ್ಯಮಾವಧಿ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Loan Repayment Time Extension
Image Credit: Home Capital

ರೈತರ ಬರ ಪರಿಹಾರ ಯೋಜನೆಗೆ ಚಾಲನೆ

Join Nadunudi News WhatsApp Group

ರೈತರಿಗೆ ಚಳ್ಳಕೆರೆ ತಾಲೂಕಿನಲ್ಲಿ ಬರ ಪರಿಹಾರದ ಮೊದಲ ಕಂತು ₹2,000 ಡಿಬಿಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ 45,45,749 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಉಚಿತವಾಗಿ 2 ಜೊತೆ ಸಮವಸ್ತ್ರ ಮತ್ತು ಶೂ-ಸಾಕ್ಸ್‌ಗಳನ್ನು ವಿತರಿಸಲಾಗಿದೆ ಹಾಗು 55,43,828 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಉಚಿತವಾಗಿ 4,47,17,051 ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದ್ದಾರೆ.

Join Nadunudi News WhatsApp Group