Modi v/s Rahul Gandhi: ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲಿ ಹೆಚ್ಚು ಮತ ಬಿದ್ದಿದ್ದು ಯಾರಿಗೆ…? ಇಲ್ಲಿದೆ ಡೀಟೇಲ್ಸ್.

ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲಿ ಹೆಚ್ಚು ಮತ ಬಿದ್ದಿದ್ದು ಯಾರಿಗೆ...?

Lok Sabha Election Results 2024: ಸದ್ಯ ಎಲ್ಲೆಡೆ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಜೋರಾಗಿಯೇ ಚರ್ಚೆ ನಡೆಯುತ್ತಿದೆ. ಇನ್ನು BJP ಪಕ್ಷ ಹೆಚ್ಚು ಸ್ಥಾನವನ್ನು ಪಡೆದುಕೊಂಡು ಮುನ್ನಡಕ್ಕಿಯಲ್ಲಿದ್ದರು ಕೂಡ ದೇಶದಲ್ಲಿ ಸರ್ಕಾರ ರಚಿಸಲು ಒಂದಿಷ್ಟು ಸಮಸ್ಯೆ ಎದುರಾಗಲಿದೆ. ಇನ್ನು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ನ ಅಜಯ್ ರೈ ಅವರನ್ನು ಮೋದಿ ಸೋಲಿಸಿದ್ದಾರೆ. ಈ ನಡುವೆ ನೆಟಿಜನ್‌ ಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿಯವರ ಮತಗಳನ್ನು ಎಣಿಸುತ್ತಿದ್ದಾರೆ. ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲಿ ಹೆಚ್ಚು ಮತ ಬಿದ್ದಿದ್ದು ಯಾರಿಗೆ…? ಎನ್ನುವ ಚರ್ಚೆ ಇದೀಗ ಜೋರಾಗಿಯೇ ನಡೆಯುತ್ತಿದೆ. ಅಷ್ಟಕ್ಕೂ ಲೋಕಸಭಾ ಎಲೆಕ್ಷನ್ ನಲ್ಲಿ ಮೋದಿ ಅಥವಾ ರಹುಲ್ ಗಾಂದಿಯಲ್ಲಿ ಯಾರು ಹೆಚ್ಚು ಮತ ಪಡೆದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Modi vs Rahul Gandhi
Image Credit: Hindustan Times

ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲಿ ಹೆಚ್ಚು ಮತ ಬಿದ್ದಿದ್ದು ಯಾರಿಗೆ…?
ಹೌದು.. ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಅಜಯ್ ರಾಯ್ ಅವರನ್ನು ಸೋಲಿಸಿ ಮೋದಿ ಗೆಲುವು ಸಾಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 6 ಲಕ್ಷದ 12 ಸಾವಿರದ 970 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ 4 ಲಕ್ಷ 60 ಸಾವಿರದ 457 ಮತಗಳನ್ನು ಪಡೆದರು. ಒಟ್ಟಾರೆ ಮೋದಿ ವಾರಣಾಸಿ ಕ್ಷೇತ್ರದಿಂದ 1 ಲಕ್ಷದ 52 ಸಾವಿರದ 513 ಮತಗಳಿಂದ ಗೆದ್ದಿದ್ದಾರೆ. 2019ಕ್ಕೆ ಹೋಲಿಸಿದರೆ ಪ್ರಧಾನಿ ಮೋದಿ ಅವರ ಮುನ್ನಡೆ 3 ಲಕ್ಷದಷ್ಟು ಕಡಿಮೆಯಾಗಿದೆ.

ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ವಾಸ್ತವವಾಗಿ, 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿ ಸಂಸತ್ತಿಗೆ ಪ್ರವೇಶಿಸಿದರು. ಒಂದು ಸ್ಥಾನದಿಂದ ಗೆದ್ದ ಮೂರನೇ ಪ್ರಧಾನಿ ಮೋದಿ ಆಗಿದ್ದರೆ. ಈ ಹಿಂದೆ ದೇಶದ ಮೊದಲ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ಪ್ರಧಾನಿ ಮೋದಿ ಅವರು 1.5 ಲಕ್ಷ ಮತಗಳಿಂದ ಗೆದ್ದಿದ್ದಾರೆ. ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಸುಮಾರು 4 ಲಕ್ಷ ಮತಗಳಿಂದ ಗೆದ್ದಿದ್ದಾರೆ. ಭಾರತದಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯತೆ ಮೋದಿಯವರಿಗಿಂತ ಹೆಚ್ಚು ಎಂಬುದು ಇದರಿಂದ ಸಾಬೀತಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Loksabha Election Results 2024
Image Credit: NDTV

Join Nadunudi News WhatsApp Group

Join Nadunudi News WhatsApp Group