Loksabha MP Salary: ಲೋಕಸಭಾ ಸಂಸದರ ಮಾಸಿಕ ಸಂಬಳ ಎಷ್ಟು ಮತ್ತು ಅವರಿಗೆ ಏನೇನು ಸೇವೆ ಉಚಿತ ಗೊತ್ತಾ…..?

ಲೋಕಸಭಾ ಸಂಸದರ ಮಾಸಿಕ ಸಂಬಳ ಎಷ್ಟು...?

Loksabha MP Salary Per Month: ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು NDA ಮೈತ್ರಿಕೂಟದ ಸಹಾಯದಿಂದ ಈ ಬಾರಿ ಕೇಂದ್ರದಲ್ಲಿ ಮತ್ತೊಮ್ಮೆ BJP ಸರ್ಕಾರ ರಚನೆಯಾಗಲಿದೆ. ದೇಶದ ಪ್ರಧಾನಿಯಾಗಿ ಮೋದಿ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿ ಪ್ರಮಾಣವಚನದ ಬಳಿಕ ಲೋಕಸಭಾ ಸಂಸದರ ಆಯ್ಕೆ ಆಗಲಿದೆ.

ಈ NDA ಮೈತ್ರಿಕೂಟದೊಂದಿಗೆ ಲೋಕಸಭಾ ಸಂಸದರ ಆಯ್ಕೆ ಆಗಲಿದೆ. ಇನ್ನು ಲೋಕಸಭಾ ಸಂಸದರ ಮಾಸಿಕ ವೇತನ ಎಷ್ಟಿರುತ್ತದೆ ಎನ್ನುವ ಬಗ್ಗೆ ನಿಮಗೆ ಗೊತ್ತೇ..? ನಾವೀಗ ಈ ಲೇಖನದಲ್ಲಿ ಲೋಕಸಭಾ ಸಂಸದರ ಮಾಸಿಕ ವೇತನ ಹಾಗೂ ಸಂಸದರಿಗೆ ಸಿಗುವ ಸೌಲಭ್ಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

Lok Sabha MP Salary Per Month
Image Credit: Thedailyguardian

ಲೋಕಸಭಾ ಸಂಸದರ ಮಾಸಿಕ ಸಂಬಳ ಎಷ್ಟು ಮತ್ತು ಅವರಿಗೆ ಏನೇನು ಸೇವೆ ಉಚಿತ ಗೊತ್ತಾ….?
•ಸಂಸದರ ಮಾಸಿಕ ವೇತನ ರೂ.1,00,೦೦೦ ಆಗಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆಯ ಆಧಾರದ ಮೇಲೆ 2018 ರಲ್ಲಿ ಸಂಸದರ ಸಂಬಳವನ್ನು ಪರಿಷ್ಕರಿಸಲಾಗಿದೆ.

•ಸಂಸದರು ಮಾಸಿಕ 70,000 ರೂ.ಗಳನ್ನು ಕ್ಷೇತ್ರ ಭತ್ಯೆಯಾಗಿ ಕಚೇರಿ ನಿರ್ವಹಣೆ ಹಾಗೂ ತಮ್ಮ ಲೋಕಸಭಾ ಕ್ಷೇತ್ರ ಸುತ್ತಲು ಮತ್ತು ಇತರ ಖರ್ಚುಗಳಿಗೆ ಪಡೆಯುತ್ತಾರೆ.

•ಕಚೇರಿ ಸಿಬ್ಬಂದಿ, ದೂರಸಂಪರ್ಕ, ಪೀಠೋಪಕರಣ ಮುಂತಾದ ಕಚೇರಿ ನಿರ್ವಹಣೆಗೆ ತಿಂಗಳಿಗೆ 60,000 ಭತ್ಯೆ ಪಡೆಯುತ್ತಾರೆ.

Join Nadunudi News WhatsApp Group

•ಸಂಸತ್ ಭವನ ಮತ್ತು ಸಂಸದರ ಸಭೆಗೆ ರಾಜಧಾನಿ ದೆಹಲಿಗೆ ಭೇಟಿ ನೀಡಿದಾಗ ವಸತಿ, ಆಹಾರ ಇತ್ಯಾದಿ ವೆಚ್ಚಗಳಿಗಾಗಿ ದಿನಕ್ಕೆ 2000 ದೈನಂದಿನ ಭತ್ಯೆ ನೀಡಲಾಗುತ್ತದೆ.

•ಸಂಸದರು ಮತ್ತು ಅವರ ನಿಕಟ ಸಂಬಂಧಿಗಳು ವರ್ಷದಲ್ಲಿ 34 ಬಾರಿ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಬಹುದು. ಕೆಲಸ ಅಥವಾ ವೈಯಕ್ತಿಕ ಕೆಲಸಗಳಿಗಾಗಿ ರೈಲುಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಬಹುದು. ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿದರೆ ಎಷ್ಟು ಬೇಕಾದರೂ ಪ್ರಯಾಣ ಭತ್ಯೆ ಪಡೆಯಬಹುದು.

MP Salary And Facilities
Image Credit: Oneindia

•ಸಂಸದರು ತಮ್ಮ 5 ವರ್ಷಗಳ ಅವಧಿಯಲ್ಲಿ ನಗರದ ಪ್ರಮುಖ ಬಡಾವಣೆಯಲ್ಲಿರುವ ಪ್ರತಿಷ್ಠಿತ ಬಡಾವಣೆ ಅಥವಾ ಐಷಾರಾಮಿ ಬಂಗಲೆಯಲ್ಲಿ ಉಚಿತವಾಗಿ ವಾಸಿಸಬಹುದು. ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ. ಬಂಗಲೆ, ಮನೆ ಬೇಡವೆಂದು ನಿರಾಕರಿಸಿದರೆ ತಿಂಗಳಿಗೆ 2 ಲಕ್ಷ ರೂ. ವಸತಿ ಭತ್ಯೆಯಾಗಿ ಲಭ್ಯವಿದೆ.

•ಸಂಸದರು ಮತ್ತು ಅವರ ಕುಟುಂಬದ ಸದಸ್ಯರು ಕೇಂದ್ರ ಸರ್ಕಾರದ ವೈದ್ಯಕೀಯ ಸೇವಾ ಯೋಜನೆಯಡಿ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು.

•ಸಂಸದರಿಗೆ 5 ವರ್ಷಗಳ ಸೇವೆಗೆ ತಿಂಗಳಿಗೆ 25 ಸಾವಿರ ರೂ. ಸಿಗಲಿದೆ. ಅವರಿಗೆ ಮಾಸಿಕ ಪಿಂಚಣಿ ಸಿಗಲಿದೆ. 5 ವರ್ಷಕ್ಕಿಂತ ಹೆಚ್ಚಿನ ಸೇವೆಗಾಗಿ ವರ್ಷಕ್ಕೆ ಹೆಚ್ಚುವರಿ 2,000 ರೂ. ಭತ್ಯೆ ಪಡೆಯುತ್ತಾರೆ.

•ಸಂಸದರು ತಿಂಗಳಿಗೆ 1,50,000 ಉಚಿತ ಕರೆಗಳನ್ನು ಮಾಡಬಹುದು. ಅಲ್ಲದೆ ಅವರು ತಮ್ಮ ಮನೆ ಮತ್ತು ಕಚೇರಿಗೆ ಹೆಚ್ಚಿನ ವೇಗ ಮತ್ತು ಉತ್ತಮ ಗುಣಮಟ್ಟದ ಅನಿಯಮಿತ ಇಂಟರ್ನೆಟ್ ಸೇವೆಯನ್ನು ಪಡೆಯಬಹುದು.

•ಸಂಸದರು ವರ್ಷಕ್ಕೆ 50 ಸಾವಿರ ಯೂನಿಟ್ ವಿದ್ಯುತ್ ಮತ್ತು 4000 ಲೀಟರ್ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಪಡೆಯಬಹುದು.

MP Salary Per Month
Image Credit: 10TV

Join Nadunudi News WhatsApp Group