Scholarship 2023: PUC ಪಾಸ್ ಆಗಿರುವ ಹೆಣ್ಣುಮಕ್ಕಳಿಗೆ ಸಿಗಲಿದೆ 2.5 ಲಕ್ಷ ರೂ ವಿದ್ಯಾರ್ಥಿವೇತನ, ಇಂದೇ ಅರ್ಜಿ ಹಾಕಿ.

PUC ಪಾಸ್ ಆಗಿರುವ ಹೆಣ್ಣುಮಕ್ಕಳಿಗೆ ಸಿಗಲಿದೆ 2 .5 ಲಕ್ಷ ರೂಪಾಯಿ Loreal India Scholarship

Loreal India For Young Women In Science Scholarship 2023: ಸದ್ಯ ಶಿಕ್ಷಣದ ಉತ್ತೇಜನಕ್ಕಾಗಿ ವಿವಿಧ ಸೌಲಭ್ಯವನ್ನು ಕೇಂದ್ರ ಸರ್ಕಾರ ಪರಿಚಯಿಸುತ್ತಿದೆ. ಇನ್ನು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ವಿವಿಧ ರೀತಿಯ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಬೆಂಬಲ ನೀಡುವ ಗುರಿ ಸರ್ಕಾರದ್ದಾಗಿದೆ. ಇದೀಗ ದ್ವಿತೀಯ ಪಿಯುಸಿ ಮುಗಿಸಿದ ಮಹಿಳಾ ವಿದ್ಯಾರ್ಥಿನಿಯರಿಗಾಗಿ ವಿಶೇಷ ವಿದ್ಯಾರ್ಥಿ ವೇತನವೊಂದು ಪರಿಚಯವಾಗಿದೆ. ನೀವು PUC ಪಾಸಾದವರಾಗಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮೂಲಕ 2 .50 ಲಕ್ಷ ರೂ. ಗಳ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

Loreal India Scholarship 2023
Image Credit: Careerkeeda

PUC ಪಾಸ್ ಆಗಿರುವ ಹೆಣ್ಣುಮಕ್ಕಳಿಗೆ ಸಿಗಲಿದೆ 2 .5 ಲಕ್ಷ ರೂ ವಿದ್ಯಾರ್ಥಿವೇತನ
ಸದ್ಯ ಫ್ರೆಂಡ್ ಮೂಲಕ Loreal India ಕಂಪನಿ ತನ್ನ CRS ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿನಿಯರಿಗೆ ಸ್ಕೊಲರ್ ಶಿಪ್ ನೀಡಲು ಮುಂದಾಗಿದೆ. 12 ನೇ ತರಗತಿ ಮುಗಿಸಿ ಉತ್ತಮ ಅಂಕವನ್ನು ಗಳಿಸಿ ಪದವಿ ವ್ಯಾಸಂಗದಲ್ಲಿ Science ವಿಭಾಗವನ್ನು ಆರಿಸಿಕೊಳ್ಳುವ ವಿದ್ಯಾರ್ಥಿನಿಯರಿಗೆ Loreal Indian Scholarship 2023 ಲಭ್ಯವಾಗಲಿದೆ.

ಇನ್ನು 12 ತರಗತಿ ಮುಗಿಸಿದ ವಿದ್ಯಾರ್ಥಿಗಳು Loreal Indian Scholarship 2023 ಗೆ ಅರ್ಜಿ ಸಲ್ಲಿಸುವ ಮೂಲಕ ಆಯ್ಕೆಯಾದರೆ ವಿದ್ಯಾಭ್ಯಾಸದ ಮುಂದುವರೆಸುವಿಕೆಗೆ 2 .50 ಲಕ್ಷ ಸಹಾಯಧನ ನೀಡಲಾಗುತ್ತದೆ. ಇನ್ನು ಅಧಿಕೃತ ವೆಬ್ ಸೈಟ್ https://www.buddy4study.com/page/loreal-india-for-young-women-in-science-scholarships ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು

Loreal India For Young Women In Science Scholarship 2023
Image Credit: Webexam

Loreal Indian ಸ್ಕೊಲರ್ ಶಿಪ್ ಪಡೆಯಲು ಯಾರು ಅರ್ಹರು..?
•ಮೆಡಿಕಲ್, ಇಂಜಿನಿಯರಿಂಗ್, ಫುಡ್ ಸೈನ್ಸ್ ಮಾಡುವ ವಿದ್ಯಾರ್ಥಿನಿಯರಿಗೆ ಮಾತ್ರ ಈ ಸ್ಕೊಲರ್ ಶಿಪ್ ಲಭ್ಯವಾಗಲಿದೆ.

Join Nadunudi News WhatsApp Group

•ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಮೀರಿರಬಾರದು.

•ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 85 % ಅಂಕವನ್ನು ಗಳಿಸಿರಬೇಕು.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳಾವುವು..?
•ಆಧಾರ್ ಕಾರ್ಡ್

•ಆದಾಯ ಪ್ರಮಾಣಪತ್ರ

•ಬ್ಯಾಂಕ್ ಪಾಸ್ ಬುಕ್

•10th ಮಾರ್ಕ್ಸ್ ಕಾರ್ಡ್

•12th ಮಾರ್ಕ್ಸ್ ಕಾರ್ಡ್

Join Nadunudi News WhatsApp Group