Lower Seat: ಇನ್ಮುಂದೆ ರೈಲಿನ ಕೆಳಗಿನ ಆಸನಗಳು ಇಂತಹ ಜನರಿಗೆ ಮಾತ್ರ ಸೀಮಿತ, ರೈಲ್ವೆ ಇಲಾಖೆಯ ನಿರ್ಧಾರ.

ಇನ್ನುಮುಂದೆ ನೀವು ರೈಲಿನಲ್ಲಿ ಈ ಸೀಟುಗಳನ್ನು ಬುಕ್ ಮಾಡುವಂತಿಲ್ಲ.

Lower Seat Reservation For Senior Citizen: ಜನರು ಹೆಚ್ಚಾಗಿ ದೂರದ ಪ್ರಯಾಣಕ್ಕೆ ರೈಲು ಪ್ರಯಾಣವನ್ನು ಆರಿಸುತ್ತಾರೆ. ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಿರುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಇಲಾಖೆಯು ಸಾಕಷ್ಟು ಸೌಕರ್ಯವನ್ನು ನೀಡುತ್ತಿದೆ.

ರೈಲು ಪ್ರಯಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಬಾರದವು ಎನ್ನುವ ಉದ್ದೇಶದಿಂದ ಈಗಾಗಲೇ ಸಾಕಷ್ಟು ಸೌಲಭ್ಯವನ್ನು ವಿಧಿಸಿದೆ. ಸದ್ಯ ರೈಲ್ವೆ ಇಲ್ಕಎಯು ಇಂತವರಿಗಾಗಿ ವಿಶೇಷ ಆಸನಗಳ್ನು ಕೂಡ ನಿಗದಿಪಡಿಸಿದೆ. ಇನ್ನುಮುಂದೆ ರೈಲಿನಲ್ಲಿ ಪ್ರಯಾಣಿಸಲು ಸೀಟಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

Indian Railway Rules
Image Credit: Medium

ರೈಲ್ವೆ ಇಲಾಖೆ ಮಹತ್ವದ ನಿರ್ಧಾರ
ಪ್ರಯಾಣಿಕರಿಗಾಗಿ ರೈಲುಗಳಲ್ಲಿ ಊಟ, ತಿಂಡಿ, ನಿದ್ದೆ ಯಾವುದಕ್ಕೂ ತೊಂದರೆ ಆಗಬಾರದು ಎಂದು ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಇನ್ನು ರೈಲುಪ್ರಯಾಣದಲ್ಲಿ ಹಿರಿಯ ನಾಗರಿಕರು ಹೆಚ್ಚು ಪ್ರಯಾಣ ಮಾಡಲು ಬಯಸುತ್ತಾರೆ. ಏಕೆಂದರೆ ರೈಲುಗಳಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸೌಲಭ್ಯವನ್ನು ನೀಡಲಾಗುತ್ತದೆ. ಇದೀಗ ಹಿರಿಯ ನಾಗರಿಕರು ರೈಲ್ವೆ ಪ್ರಯಾಣವನ್ನು ಇನ್ನಷ್ಟು ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಇನ್ಮುಂದೆ ರೈಲಿನ ಕೆಳಗಿನ ಆಸನಗಳು ಇಂತಹ ಜನರಿಗೆ ಮಾತ್ರ ಸೀಮಿತ
ಸಾಮಾನ್ಯವಾಗಿ ರೈಲು ಪ್ರಯಾಣಿಕರು ತಮ್ಮ ಅನುಕೂಲಕ್ಕಾಗಿ ಪ್ರಯಾಣದ ಮುಂಚಿತವಾಗಿಯೇ ಸೀಟ್ ಗಳನ್ನೂ ಕಾಯ್ದಿರಿಸುತ್ತಾರೆ. ಇನ್ನು ಪ್ರಯಾಣಿಕರು ಆರಾಮದಾಯಕ ಆಸನಗಳನ್ನು ಬುಕ್ ಮಾಡಲು ಇಷ್ಟಪಡುತ್ತಾರೆ. ಆರಾಮದಾಯ ಆಸನಗಳಲ್ಲಿ Lower Berth ಅಥವಾ Side lower berth ಹೆಚ್ಚಿನ ಜನರ ಆಯ್ಕೆಯಾಗಿರುತ್ತದೆ. ಆದರೆ ರೈಲ್ವೆ ಹೊಸ ನಿಯಮದ ಪ್ರಕಾರ ಇನ್ನುಮುಂದೆ ನೀವು ಈ ಸೀಟ್ ಗಳನ್ನೂ ಬುಕ್ ಮಾಡುವಂತಿಲ್ಲ.

Lower Seat Reservation For Senior Citizen
Image Credit: Live Mint

ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಅಥವಾ ಸ್ಲೀಪರ್, ಎಸಿ ಥರ್ಡ್, ಸೆಕೆಂಡ್ ಮತ್ತು ಫಸ್ಟ್ ನಂತಹ ಎಲ್ಲಾ ವರ್ಗಗಳಲ್ಲಿ ಗರ್ಭಿಣಿಯರಿಗೆ ವಿವಿಧ ಸಂಖ್ಯೆಯ ಸೀಟುಗಳನ್ನು ಕಾಯ್ದಿರಿಸಲಾಗಿದೆ ಎಂದು ಅವರು ಹೇಳುತ್ತಾರೆ. ಹೊಸ ನಿಯಮದ ಅಡಿಯಲ್ಲಿ, ಸ್ಲೀಪರ್ ಕ್ಲಾಸ್‌ ನಲ್ಲಿ ಪ್ರತಿ ಕೋಚ್‌ ಗೆ ಆರರಿಂದ ಏಳು ಲೋವರ್ ಬರ್ತ್‌ ಗಳು, ಥರ್ಡ್ ಎಸಿಯಲ್ಲಿ ಪ್ರತಿ ಕೋಚ್‌ ಗೆ ಐದರಿಂದ ಆರು ಲೋವರ್ ಬರ್ತ್‌ ಗಳು, ಸೆಕೆಂಡ್ ಎಸಿಯಲ್ಲಿ ಮೂರರಿಂದ ನಾಲ್ಕು ಲೋವರ್ ಬರ್ತ್‌ ಗಳನ್ನೂ ಮೀಸಲಿಡಲಾಗಿದೆ.

Join Nadunudi News WhatsApp Group

Join Nadunudi News WhatsApp Group