Personal Loan: ಸಾಲ ಮಾಡಲು ಯಾವ ಬ್ಯಾಂಕ್ ಬೆಸ್ಟ್…? ಇಲ್ಲಿದೆ ನೋಡಿ ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕುಗಳು

ಸಾಲ ಪಡೆಯುವ ಮುನ್ನ ಈ ವಿಚಾರದ ಬಗ್ಗೆ ಗಮನವಿರಲಿ, ಇಲ್ಲಿದೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್ ಗಳ ಪಟ್ಟಿ

Lowest Interest Rate Bank For Personal Loan: ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದ್ದೆ ಇರುತ್ತದೆ. ಕೆಲವೊಮ್ಮೆ ತುರ್ಥಾಗಿ ಹಣ ಬೇಕಾದಾಗ ನಾವು ಬ್ಯಾಂಕ್ ನ ಸಾಲದ ಮೊರೆ ಹೋಗುತ್ತದೆ. ಅದರಲ್ಲೂ ವಯಕ್ತಿಕ ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಇಂತಹ ಸಮಯದಲ್ಲಿ ನಾವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಕು ಹಾಗು ಯಾವ ಬ್ಯಾಂಕ್ ನ ಸಾಲ ನಮಗೆ ಹೊರೆ ಆಗದು ಎಂದು ತಿಳಿಯುವುದು ಬಹಳ ಮುಖ್ಯ ಆಗಿದೆ.

ಬ್ಯಾಂಕ್ ನ ಬಡ್ಡಿ ದರಗಳು ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗಿರುತ್ತದೆ, ನಾವು ಬಹಳ ಕಡಿಮೆ ಬಡ್ಡಿದರ ಇರುವ ಬ್ಯಾಂಕ್ ಗಳಲ್ಲಿ ಸಾಲ ಮಾಡುವುದು ಉತ್ತಮ ಆಗಿದೆ. ಯಾವ ಬ್ಯಾಂಕ್ ನಲ್ಲಿ ವಯಕ್ತಿಕ ಸಾಲದ ಬಡ್ಡಿದರ ಕಡಿಮೆ ಇದೆ ಎಂದು ತಿಳಿಯೋಣ.

SBI Personal Loan Interest Rate
Image Credit: aubank

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಬಡ್ಡಿದರ ಬಗ್ಗೆ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಯಕ್ತಿಕ ಬಡ್ಡಿದರವು 11.3 ಪ್ರತಿಶತದಿಂದ ಪ್ರಾರಂಭ ಆಗುತ್ತದೆ. ಅಲ್ಲದೆ ಬಡ್ಡಿದರವು 13.8 ರ ವರೆಗೆ ಇರಬಹುದು ಇದು ಸರ್ಕಾರೀ ನೌಕರರಿಗೆ ಅನ್ವಯಿಸುತ್ತದೆ.

ಕೋಟೆಕ್ ಮಹಿಂದ್ರಾ ಬ್ಯಾಂಕ್ ಬಡ್ಡಿದರದ ಬಗ್ಗೆ ಮಾಹಿತಿ

Join Nadunudi News WhatsApp Group

ಈ ಬ್ಯಾಂಕ್ ನಲ್ಲಿ ವಯಕ್ತಿಕ ಸಾಲದ ಬಡ್ಡಿದರವು ಶೇಕಡಾ 10.99 ರಿಂದ ಪ್ರಾರಂಭವಾಗಿದ್ದು, ಬ್ಯಾಂಕ್ ನ ವೆಬ್ಸೈಟ್ ನಲ್ಲಿ ಗರಿಷ್ಠ ಬಡ್ಡಿದರದ ಬಗ್ಗೆ ಮಾಹಿತಿ ಇಲ್ಲ. 03 ರಷ್ಟು ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Lowest Interest Rate Bank For Personal Loan
Image Credit: Live Mint

HDFC ಬ್ಯಾಂಕ್ ನ ಬಡ್ಡಿದರದ ವಿವರ

HDFC ಬ್ಯಾಂಕ್ ನ ವಯಕ್ತಿಕ ಬಡ್ಡಿದರ 10.5 ಆಗಿದ್ದು, ಗರಿಷ್ಠ 24 ಪ್ರತಿಶತದ ವರೆಗೆ ಇರಬಹುದು, ಇದು ವೇತನದಾರರಿಗೆ ಅನ್ವಯಿಸುತ್ತದೆ. ಸಂಸ್ಕರಣಾ ಶುಲ್ಕ 4,999 ಆಗಿರುತ್ತದೆ.

ಐಸಿಐಸಿಐ ಬ್ಯಾಂಕ್ ನ ಬಡ್ಡಿದರದ ಮಾಹಿತಿ

ಈ ಬ್ಯಾಂಕ್ 10.65 ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಅಲ್ಲದೆ ಗರಿಷ್ಠ ಬಡ್ಡಿದರವು 16 ಪ್ರತಿಶತದವರೆಗೆ ಇರುತ್ತದೆ. ಸಂಸ್ಕರಣಾ ಶುಲ್ಕವು 2.5 ಪ್ರತಿಶತದವರೆಗೆ ಇರುತ್ತದೆ. ಹೀಗೆ ಒಂದೊಂದು ಬ್ಯಾಂಕ್ ಗಳು ವಿಭಿನ್ನ ಬಡ್ಡಿದರವನ್ನು ಹೊಂದಿದ್ದು, ನಿಮಗೆ ಸಹಾಯವಾಗುವ ನಿಟ್ಟಿನಲ್ಲಿ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಂಡು ಸಾಲ ಪಡೆಯುವುದು ಮುಖ್ಯ ಆಗಿದೆ.

Join Nadunudi News WhatsApp Group