LPG Insurance: ಮನೆಯಲ್ಲಿ ಗ್ಯಾಸ್ ಬಳಸುವ ಪ್ರತಿಯೊಬ್ಬರಿಗೂ ಸಿಗಲಿದೆ ಕೇಂದ್ರದಿಂದ 50 ಲಕ್ಷ, ಸಾಕಷ್ಟು ಜನರಿಗೆ ತಿಳಿದಿಲ್ಲ

ಮನೆಯಲ್ಲಿ ಗ್ಯಾಸ್ ಬಳಸುವ ಪ್ರತಿಯೊಬ್ಬರೂ ಕೇಂದ್ರದಿಂದ 50 ಲಕ್ಷ ವಿಮೆ ಪಡೆದುಕೊಳ್ಳಬಹುದು.

LPG Cylinder Insurance: ಸದ್ಯ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ LPG ಸಿಲಿಂಡರ್ ಗಳನ್ನೂ ಅಡುಗೆಗಾಗಿ ಬಳಸುತ್ತಾರೆ. ಕೇಂದ್ರದ ಮೋದಿ ಸರ್ಕಾರ ಉಚಿಯ ಗ್ಯಾಸ್ ಸಿಲಿಂಡರ್ ಅನ್ನು ನೀಡಿದ ಬಳಿಕ ಗ್ಯಾಸ್ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಇನ್ನು ಗ್ಯಾಸ್ ಸಿಲಿಂಡರ್ ಬಳಕೆಯು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯವನ್ನು ಕೂಡ ತಂದೊಡ್ಡುತ್ತದೆ.

ಗ್ಯಾಸ್ ಅಪಘಾತದಿಂದ ಈಗಾಗಲೇ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗುತ್ತದೆ. ಗ್ಯಾಸ್ ಸಿಲಿಂಡರ್ ಅಪಘಾತದ ವಿಮೆ ಕೂಡ ಲಭ್ಯವಿರುವ ಬಗ್ಗೆ ನಿಮಗೆ ಗೊತ್ತೆ..? 

ಹೌದು ಗ್ಯಾಸ್ ಸಿಲಿಂಡರ್ ಮನೆಯಲ್ಲಿ ಬಳಸುವ ಅದೆಷ್ಟೋ ಜನರಿಗೆ ಕೇಂದ್ರದಿಂದ ಸಿಗುವ ಕೆಲವು ಪರಿಹಾರದ ಬಗ್ಗೆ ಇನ್ನೂ ಕೂಡ ಮಾಹಿತಿ ಲಭಿಸಿಲ್ಲ ಎಂದು ಹೇಳಬಹುದು. ಹೌದು ಕೇಂದ್ರದ ಈ ಯೋಜನೆಯ ಅಡಿಯಲ್ಲಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ 50 ಲಕ್ಷ ರೂ ಪರಿಹಾರ ಪಡೆದುಕೊಳ್ಳಬಹುದು.

LPG Cylinder Insurance
Image Credit: New Indian Express

ಮನೆಯಲ್ಲಿ ಗ್ಯಾಸ್ ಬಳಸುವ ಪ್ರತಿಯೊಬ್ಬರಿಗೂ ಸಿಗಲಿದೆ ಕೇಂದ್ರದಿಂದ 50 ಲಕ್ಷ
ನೀವು LPG Cylinder ಅಪಘಾತಕ್ಕೂ ಕೂಡ ವಿಮೆಯನ್ನು ಪಡೆದುಕೊಳ್ಳಬಹುದು. ಒಂದು ಪೈಸೆಯೂ ಪ್ರೀಮಿಯಂ ಪಾವತಿಸದೇ ನೀವು ಅಪಘಾತ ವಿಮೆಯ ಮೊತ್ತವನ್ನು ಪಡೆದುಕೊಳ್ಳಬಹುದು. ಕೆಲವು ಕಾರಣಗಳಿಂದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಇಂತಹ ಸಮಯದಲ್ಲಿ ಗ್ರಾಹಕರು ಅಪಘಾತದ ಸಮಯದಲ್ಲಿ ಉಂಟಾದ ನಷ್ಟವನ್ನು ಪರಿಹರಿಸಿಕೊಳ್ಳಲು ಪರಿಹಾರ ಮೊತ್ತವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಗ್ರಾಹಕನು ತನ್ನ ಕುಟುಂಬಕ್ಕಾಗಿ ಪೆಟ್ರೋಲಿಯಂ ಕಂಪನಿಗಳಿಂದ 50 ಲಕ್ಷ ರೂ.ಗಳನ್ನು ಕ್ಲೈಮ್ ಮಾಡುವ ಹಕ್ಕನ್ನು ಪಡೆಯುತ್ತಾನೆ. ಸರ್ಕಾರಿ ವೆಬ್‌ ಸೈಟ್ MyLPG.in (http://mylpg.in) ಪ್ರಕಾರ, LPG ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರು ಮತ್ತು ಅವರ ಕುಟುಂಬಕ್ಕೆ ಪೆಟ್ರೋಲಿಯಂ ಕಂಪನಿಗಳು ಅಪಘಾತದ ರಕ್ಷಣೆಯನ್ನು ಒದಗಿಸುತ್ತವೆ. ಅನಿಲ ಸೋರಿಕೆ ಅಥವಾ ಸ್ಫೋಟದಂತಹ ಅಪಘಾತಗಳ ನಂತರ ಕುಟುಂಬಕ್ಕೆ ಆರ್ಥಿಕ ಸಹಾಯವಾಗಿ 50 ಲಕ್ಷ ರೂಪಾಯಿಗಳ ಈ ಕವರ್ ವಿಮೆಯನ್ನು ನೀಡಲಾಗುತ್ತದೆ.

Join Nadunudi News WhatsApp Group

LPG Gas Cylinder Latest Update
Image Credit: Amarujala

ಗ್ಯಾಸ್ ಸಿಲಿಂಡರ್ ಅಪಘಾತ ವಿಮೆಯ ಪ್ರಯೋಜನಗಳು
ಇಡೀ ಕುಟುಂಬಕ್ಕೆ ವಿಮೆ ಮಾಡಲಾಗಿದ್ದು, ಪ್ರತಿ ಸದಸ್ಯರಿಗೆ 10 ಲಕ್ಷ ರೂ. ನೀಡಲಾಗುತ್ತದೆ.
ಇಡೀ ಕುಟುಂಬಕ್ಕೆ ಗರಿಷ್ಠ ಮೊತ್ತ 50 ಲಕ್ಷ ರೂ. ಪಡೆಯಬಹುದು. ಕೇವಲ ಆಸ್ತಿ ಹಾನಿಯಾಗಿದ್ದರೆ ನೀವು 2 ಲಕ್ಷದವರೆಗೆ ಕ್ಲೈಮ್ ಮಾಡಬಹುದು. ಅಪಘಾತದ ಸಮಯದಲ್ಲಿ ಸಾವು ಸಂಭವಿಸಿದಲ್ಲಿ, ವೈಯಕ್ತಿಕ ಅಪಘಾತ ರಕ್ಷಣೆಯಾಗಿ 6 ​​ಲಕ್ಷ ರೂ. ಪಡೆಯಬಹುದು. ಚಿಕಿತ್ಸೆಗೆ ಗರಿಷ್ಠ 30 ಲಕ್ಷ ರೂ. ಲಭ್ಯವಿದ್ದು ಪ್ರತಿ ಸದಸ್ಯರಿಗೆ 2 ಲಕ್ಷ ರೂ. ಪಡೆಯುವ ಅವಕಾಶ ಇರುತ್ತದೆ.

Join Nadunudi News WhatsApp Group