LPG E-KYC: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರ ಗಮನಕ್ಕೆ, KYC ಕುರಿತಂತೆ ಕೇಂದ್ರದಿಂದ ಇನ್ನೊಂದು ಬಿಗ್ ಅಪ್ಡೇಟ್

LPG KYC ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್ ನೀಡಿದ ಕೇಂದ್ರ ಸರ್ಕಾರ

LPG E-KYC Latest Update: ಕೇಂದ್ರ ಸರ್ಕಾರವು ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಈ ಹಿಂದೆ ಕಡ್ಡಾಯವಾಗಿ E-KYC ಮಾಡಿಸತಕ್ಕದೆಂದು ಆದೇಶ ಹೊರಡಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಅಡುಗೆ ಅನಿಲ ಸಂಖ್ಯೆಗೆ ಇ-ಕೆವೈಸಿಯನ್ನು ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ಗ್ರಾಹಕರು ದಿನಾಂಕ 31-12-2023ರ ಒಳಗೆ ಗ್ಯಾಸ್ ಏಜೆನ್ಸಿಯಲ್ಲಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಅಂತಹ ಗ್ರಾಹಕರಿಗೆ ಸಹಾಯಧನ ನಿಲ್ಲಿಸಲಾಗುತ್ತದೆ ಎನ್ನಲಾಗಿದೆ. ಸದ್ಯ KYC ಕುರಿತಂತೆ ಕೇಂದ್ರ ಇನ್ನೊಂದು ಅಪ್ಡೇಟ್ ನೀಡಿದ್ದು ಇದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

LPG E-KYC Latest Update
Image Credit: Newslinetelugu

ಗ್ಯಾಸ್ ಸಬ್ಸಿಡಿ ಪಡೆಯಲು E-KYC ಕಡ್ಡಾಯ

ಇಂದಿನ ದಿನಗಳಲ್ಲಿ ಹೆಚ್ಚಿನ ಮನೆಯಲ್ಲಿ ಅಡುಗೆ ಅನಿಲವನ್ನು ಬಳಸುತ್ತಿದ್ದಾರೆ. ಅಡುಗೆ ಅನಿಲದ ಬೆಲೆ ಏರಿಕೆ ಆದ ನಂತರ ಗ್ರಾಹಕರು ಸಬ್ಸಿಡಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರಿಂದ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ಘೋಷಣೆ ಮಾಡಿ ಸಬ್ಸಿಡಿ ನೀಡುತ್ತಿದ್ದು, ಈ ಕುರಿತು ಎಲ್ಲರಿಗೂ ಸಬ್ಸಿಡಿ ಸಿಗಬೇಕೆಂದರೆ E-KYC ಮಾಡಿಸುವುದು ಕಡ್ಡಾಯ ಆಗಿದೆ. ಹಾಗೆಯೆ ಗೃಹ ಬಳಕೆ ಅಡುಗೆ ಅನಿಲ ವಾಣಿಜ್ಯ ಬಳಕೆಯಾಗಿ ಪರಿವರ್ತನೆಯಾಗುತ್ತದೆ ಮತ್ತು ಅನಿಲ ಸಂಪರ್ಕ ಕಡಿತವಾಗುತ್ತದೆ ಹಾಗೂ ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕೆಂಬ ವದಂತಿ ಸಾರ್ವಜನಿಕರ ವಲಯದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿರುತ್ತದೆ.

LPG Gas Cylinder E-KYC
Image Credit: Delhibreakings

ಇಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತ ಹಾಗು ಇ-ಕೆವೈಸಿ ಮಾಡಿಸುವುದು ನಿರಂತರ ಪ್ರಕ್ರಿಯೆಯಾಗಿದೆ

ಗ್ರಾಹಕರು ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರವು/ ಅನಿಲ ಕಂಪನಿಗಳು ಯಾವುದೇ ಕೊನೆಯ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ ಹಾಗೂ ಇ-ಕೆವೈಸಿ ಮಾಡಿಸುವುದಕ್ಕೆ ಯಾವುದೇ ಶುಲ್ಕ ನಿಗಧಿಯಾಗಿರುವುದಿಲ್ಲ. ಇಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ.

Join Nadunudi News WhatsApp Group

ಇ-ಕೆವೈಸಿ ಮಾಡಿಸುವುದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವವರು ಮತ್ತು ಸಹಾಯಧನ ಪಡೆಯುವ ಗ್ರಾಹಕರು ಮಾತ್ರ ಇ-ಕೆವೈಸಿಯನ್ನು ಆದ್ಯತೆ ಮೇಲೆ ನೀಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಅವರು ತಿಳಿಸಿದ್ದಾರೆ.

Join Nadunudi News WhatsApp Group