LPG Rules: ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಡಿ 31 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ ಸಬ್ಸಿಡಿ ಬಂದ್

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಬೇಕು ಅಂದರೆ ಡಿ 31 ರೊಳಗೆ ಈ ಕೆಲಸ ತಪ್ಪದೆ ಮಾಡಿ

LPG Gas Cylinder e-KYC Mandatory: ದೇಶದಲ್ಲಿ ಗ್ಯಾಸ್ ಬಳಕೆ ಮಾಡದೇ ಇರುವ ಮನೆ ಬಹಳ ಕಡಿಮೆ, ಹೆಚ್ಚಾಗಿ ಈಗ ಎಲ್ಲಾರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸಿಯೇ ಬಳಸುತ್ತಾರೆ ಅಂಥವರಿಗೆ ಈ ಸುದ್ದಿ ಬಹಳ ಉಪಯುಕ್ತಕರ ಆಗಲಿದೆ.

ಈಗಾಗಲೇ ಗ್ಯಾಸ್ ಸಿಲಿಂಡರ್ ಹೊಂದಿರುವವರು ಸರಕಾರದಿಂದ ಸಬ್ಸಿಡಿ ಪಡೆಯುತ್ತಿರಬಹುದು ಆದರೆ ಇನ್ನು ಮುಂದೆ ಕೂಡ ನಿಮಗೆ ಸರಕಾರದಿಂದ ಸಬ್ಸಿಡಿ ಬೇಕೆಂದರೆ ಕಡ್ಡಾಯವಾಗಿ ನೀವು ಈ ಕೆಲಸವನ್ನು ಮಾಡಲೇಬೇಕಾಗಿರುತ್ತದೆ. ಈ ಕೆಲಸವನ್ನು ನೀವು ಮಾಡಿಲ್ಲ ಅಂತಾದರೆ ನಿಮಗೆ ಇನ್ನುಮುಂದೆ ಯಾವುದೇ ಗ್ಯಾಸ್ ಸಬ್ಸಿಡಿ ಸಿಗದು. ಹೌದು ಡಿ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಗ್ಯಾಸ್ ಸಬ್ಸಿಡಿ ಹಣ ರದ್ದಾಗಲಿದ್ದು ಆದಷ್ಟು ಬೇಗ ಈ ಕೆಲಸವನ್ನ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶವನ್ನ ಹೊರಡಿಸಿದೆ.

LPG Gas Cylinder e-KYC Update
Image Credit: Zeebiz

ಎಲ್ಪಿಜಿ ಗ್ಯಾಸ್ ಗೆ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಹಣ ಪಡೆಯಬಹುದು

ಸಚಿವಾಲಯದ ಸೂಚನೆಗಳಿಗೆ ಅನುಸಾರವಾಗಿ ಗ್ರಾಹಕರ ಇ-ಕೆವೈಸಿ ಕೆಲಸ ನಡೆಯುತ್ತಿದೆ. ಭಾರತ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶನದ ಪ್ರಕಾರ, ಸಬ್ಸಿಡಿ ಅನಿಲ ಬೆಲೆಯಲ್ಲಿ ಸಬ್ಸಿಡಿ ಪಡೆಯುವ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ತಮ್ಮ ಏಜೆನ್ಸಿಗೆ ಸಂಬಂಧಿಸಿದ 15,500 ಗ್ರಾಹಕರಲ್ಲಿ, ಕೇವಲ 500 ಮಂದಿ ಮಾತ್ರ ಇಲ್ಲಿಯವರೆಗೆ ಇ-ಕೆವೈಸಿ ಮಾಡಿದ್ದಾರೆ ಎಂದು ಅವರು ಹೇಳಿದರು.

LPG Gas Cylinder e-KYC Mandatory
Image Credit: Online 38 Media

ಎಲ್ಪಿಜಿ ಗ್ಯಾಸ್ ಇ-ಕೆವೈಸಿ ಕಡ್ಡಾಯ

Join Nadunudi News WhatsApp Group

ಗ್ಯಾಸ್ ಸಿಲಿಂಡರ್ ಗ್ರಾಹಕರು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ, ಅಲ್ಲಿ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಯಂತ್ರದ ಮೂಲಕ ಇ-ಕೆವೈಸಿ ಮಾಡಲಾಗುತ್ತದೆ. ಈ ಇ-ಕೆವೈಸಿ ಕೆಲಸವನ್ನು ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮಾಡಬಹುದು. ಸರ್ಕಾರದ ಸೂಚನೆಯ ಮೇರೆಗೆ ಇ-ಕೆವೈಸಿಯನ್ನು ನವೆಂಬರ್ 25 ರಂದು ಪ್ರಾರಂಭಿಸಲಾಯಿತು ಮತ್ತು ಡಿಸೆಂಬರ್ 31 ರ ವರೆಗೆ ಮುಂದುವರಿಯುತ್ತದೆ. ನೀವು ಗ್ಯಾಸ್ ಸಬ್ಸಿಡಿ ತೆಗೆದುಕೊಳ್ಳಬೇಕಾದರೆ ಡಿಸೆಂಬರ್ 31 ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ.

Join Nadunudi News WhatsApp Group