Gas Cylinder Pipe: ಮನೆಯ ಗ್ಯಾಸ್ ಸಿಲಿಂಡರ್ ಪೈಪಿನ Expiry ಡೇಟ್ ಚೆಕ್ ಮಾಡುವುದು ಹೇಗೆ…? ಬೇಗನೆ ಪೈಪ್ ಬದಲಿಸಿ

ಈ ರೀತಿಯಾಗಿ ಗ್ಯಾಸ್ ಸಿಲಿಂಡರ್ ಪೈಪಿನ Expiry ಡೇಟ್ ಚೆಕ್ ಮಾಡಿಕೊಳ್ಳಿ

LPG Gas Cylinder Pipe Expiry Date: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Gas Cylinder ಬಳಸೆ ಬಳಸುತ್ತಾರೆ. ಕೇಂದ್ರ ಮೋದಿ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸಮಯದಿಂದ ಮನೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಹೆಚ್ಚಿದೆ ಎನ್ನಬಹುದು. ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

ಸಿಲಿಂಡರ್​ನ ಗ್ಯಾಸ್ ಪೈಪ್ ಹಾನಿಗೊಳಗಾದರೆ ಅಥವಾ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಬಹುದು. ಆದ್ದರಿಂದ, ಗ್ಯಾಸ್ ಸಿಲಿಂಡರ್​ನ ಸುರಕ್ಷತೆಗಾಗಿ ಗ್ಯಾಸ್ ಪೈಪ್ ​ನ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು ಮುಖ್ಯ.

LPG Gas Cylinder Pipe
Image Credit: News 18

ಗ್ಯಾಸ್ ಸಿಲಿಂಡರ್ ಪೈಪಿನ Expiry ಡೇಟ್ ಚೆಕ್ ಮಾಡುವುದು ಹೇಗೆ…?
ಇನ್ನು ಗ್ಯಾಸ್ ಸಿಲಿಂಡರ್ ಬಳಸುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಗ್ಯಾಸ್ ಬಳಸುವಾಗ ಸ್ವಲ್ಪ ಅಸಡ್ಡೆ ತೋರಿದರು ಕೂಡ ದೊಡ್ಡ ಅನಾಹುತ ಉಂಟಾಗುತ್ತದೆ. ಗ್ಯಾಸ್ ಪೈಪ್ ಅನ್ನು ರಬ್ಬರ್ ನಿಂದ ತಯಾರಿಸಲಾಗುತ್ತದೆ. ಸಮಯ ಕಳೆದಂತೆ ಆ ರಬ್ಬರ್ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ.

ಗ್ಯಾಸ್ ಪೈಪ್ ಹಾಳಾದರೆ ಅನಿಲ ಸೋರಿಕೆಯಾಗುತ್ತದೆ. ನಂತರ ಗ್ಯಾಸ್ ಲೀಕ್ ಗೆ ಬೆಂಕಿ ತಗುಲಿ ಅಪಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ಗ್ಯಾಸ್ ಪೈಪ್ ಅನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು. ಇದಕ್ಕಾಗಿ ನೀವು BIS ಕೇರ್ ಅಪ್ಲಿಕೇಶನ್ ಬಳಸಿಕೊಂಡು ಗ್ಯಾಸ್ ಪೈಪಿನ ಮುಕ್ತಾಯದ ದಿನಾಂಕವನ್ನು ಸುಲಭವಾಗಿ ನೋಡಬಹುದಾಗಿದೆ.

LPG Gas Cylinder Pipe Expiry Date
Image Credit: India Mart

ಈ ರೀತಿಯಾಗಿ ಗ್ಯಾಸ್ ಸಿಲಿಂಡರ್ ಪೈಪಿನ Expiry ಡೇಟ್ ಚೆಕ್ ಮಾಡಿಕೊಳ್ಳಿ
*ಮೊದಲು BIS ಕೇರ್ App ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Join Nadunudi News WhatsApp Group

*ಇದರಲ್ಲಿ ವೆರಿಫೈ ಲೈಸನ್ಸ್ ವಿವರವನ್ನು ಆಯ್ಕೆ ಮಾಡಬೇಕು

*ಪೈಪ್ ನಲ್ಲಿ ಬರೆದ CM/L ಕೋಡ್ ಅನ್ನು ನಮೂದಿಸಬೇಕು

*ಇದಾದ ನಂತರ ನಿಮಗೆ ಗ್ಯಾಸ್ ಪೈಪ್ ಗೆ ಸಂಬಂದಿಸಿದ ಎಲ್ಲ ಮಾಹಿತಿಗಳು ಲಭ್ಯವಾಗುತ್ತದೆ. ಪೈಪ್ ಅವಧಿ ಮುಗಿದಿದ್ದರೆ ತಕ್ಷಣ ಹೊಸ ಪೈಪ್ ಖರೀದಿಸಬೇಕು.

Join Nadunudi News WhatsApp Group