Luggage Limit: ಒಬ್ಬ ವ್ಯಕ್ತಿ ರೈಲಿನಲ್ಲಿ ಇಷ್ಟು ಕೆಜಿ ಬ್ಯಾಗ್ ಮಾತ್ರ ತಗೆದುಕೊಂಡು ಹೋಗಬಹುದು, ಲಗೇಜ್ ನಿಯಮ ಬದಲಾವಣೆ

ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಲಗೇಜ್ ಸಾಗಿಸಲು ಮಿತಿ ಹೇರಲಾಗಿದೆ

Luggage Limit In Train: ದೇಶದಲ್ಲಿ ಕೋಟ್ಯಾಂತರ ಜನರು ರೈಲಿನಲ್ಲಿ ದಿನನಿತ್ಯ ಪ್ರಯಾಣ ಮಾಡುತ್ತಾರೆ. ರೈಲು ಸೇವೆ ಹೆಚ್ಚಿನ ಕಡೆಯವರೆಗೂ ತಲುಪುವುದರಿಂದ ಈಗ ರೈಲು ಪ್ರಯಾಣ ಹೆಚ್ಚಾಗುತ್ತಿದೆ. ರೈಲು ಇಲಾಖೆಯು ಇತೀಚಿನ ವರ್ಷಗಳಲ್ಲಿ ಹಲವು ನಿಯಮಗಳನ್ನು ಜಾರಿಗೆ ತಂದಿದೆ ಅಷ್ಟೇ ಅಲ್ಲದೆ ಈ ನಿಯಮಗಳು ಪ್ರಯಾಣಿಕರಿಗೆ ಅನುಕೂಲಕರ ಕೂಡ ಆಗಿದೆ.

ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ರೈಲಿನಲ್ಲೂ ಉತ್ತಮ ಸೌಲಭ್ಯಗಳಿದ್ದು, ಹೆಚ್ಚು ಹೆಚ್ಚು ಜನರು ರೈಲಿನಲ್ಲಿ ಬಹಳ ಆರಾಮದಾಯಕವಾಗಿ ಪ್ರಯಾಣಿಸುತ್ತಿದ್ದಾರೆ. ರೈಲು ಪ್ರಯಾಣದಲ್ಲಿ ನಾವು ತಿಳಿದುಕೊಳ್ಳಬೇಕಾದ ಕೆಲವು ನಿಯಮಗಳಿವೆ, ಅವುಗಳ ಬಗ್ಗೆ ತಿಳಿದಿಲ್ಲವೆಂದರೆ ದಂಡವನ್ನು ಪಾವತಿಸಬೇಕಾಗುತ್ತದೆ.

IRCTC Luggage Rules
Image Credit: Zeenews

ಟಿಕೆಟ್ ಖರೀದಿಸದೇ ರೈಲು ಪ್ರಯಾಣ ಮಾಡುವುದು ಕಾನೂನು ಬಾಹಿರ ಅಪರಾಧ

ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿಯೇ ರೈಲ್ವೆ ಇಲಾಖೆ ಟಿಕೆಟ್ ಖರೀದಿ ಮಾಡಲು ಸಹಾಯ ಆಗಲಿ ಎಂದು ಆಪ್ ಲೈನ್ ಜೊತೆಗೆ ಆನ್ ಲೈನ್ ಅವಕಾಶವನ್ನು ನೀಡಿದೆ. ಈಗ ಟಿಕೆಟ್ ಖರೀದಿಸುವುದು ಬಹಳ ಸುಲಭ ಹಾಗು ಇತರ ವಾಹನಗಳ ಟಿಕೆಟ್ ದರಕ್ಕೆ ಹೋಲಿಸಿದರೆ ರೈಲು ಟಿಕೆಟ್ ದರ ಕಡಿಮೆ ಆಗಿದ್ದು, ಪ್ರತಿಯೊಬ್ಬರು ಟಿಕೆಟ್ ಖರೀದಿಸಿಯೇ ಪ್ರಯಾಣಿಸಬೇಕಾಗಿದೆ. ರೈಲ್ವೆ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ವ್ಯಕ್ತಿಗೆ ಗರಿಷ್ಠ 1000 ರೂ. ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ರೈಲಿನಲ್ಲಿ ಪ್ರಯಾಣಿಸುವಾಗ ಗುರುತಿನ ಚೀಟಿ ಕಡ್ಡಾಯ

Join Nadunudi News WhatsApp Group

ರೈಲಿನಲ್ಲಿ ಪ್ರಯಾಣಿಸುವಾಗ ನೆನಪಿನಿಂದ ನಾವು ನಮ್ಮ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು. ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿ, ಪ್ರಯಾಣದ ಸಮಯದಲ್ಲಿ ಗುರುತಿನ ಚೀಟಿಯನ್ನು ಕೊಂಡೊಯ್ಯದಿದ್ದರೆ TTE ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ದಂಡ ವಿಧಿಸಬಹುದು.

Luggage Limit In Train
Image Credit: Pune

ನಿಗದಿ ಮಿತಿ ಮೀರಿ ಲಗೇಜ್ ಸಾಗಿಸಲು ಅವಕಾಶ ಇಲ್ಲ

ಪ್ರಯಾಣಿಕರು ತಮ್ಮ ಲಗೇಜ್ ಗಳನ್ನು ರೈಲಿನಲ್ಲಿ ಸಾಗಿಸಲು ಅನುಮತಿಸಲಾಗಿದೆ. ಆದರೆ ಅದರ ತೂಕದ ಮಿತಿಯನ್ನು ನಿಗದಿ ಪಡಿಸಲಾಗಿದೆ. ಬ್ಯಾಗೇಜ್ ಭತ್ಯೆಯು 1 ನೇ ಎಸಿ ಮತ್ತು 2 ನೇ ಎಸಿಗೆ 40 ಕೆಜಿ, 3 ನೇ ಎಸಿ ಮತ್ತು ಸೀಟ್‌ಗೆ 35 ಕೆಜಿ ಮತ್ತು ಸ್ಲೀಪರ್ ಕ್ಲಾಸ್‌ಗೆ 15 ಕೆಜಿ ಆಗಿದೆ. ಪ್ರಯಾಣಿಕರು ಅಪಾಯಕಾರಿ ವಸ್ತುಗಳನ್ನು ಸಾಗಿಸಲು ಅನುಮತಿಸಲಾಗುವುದಿಲ್ಲ. ಈ ನಿಯಮವನ್ನು ಉಲ್ಲಂಘಿಸಿದರೆ ದಂಡ ಹಾಗು ಶಿಕ್ಷೆ ಖಚಿತ.

ವಿನಾಕಾರಣ ಚೈನ್ ಎಳೆಯುವಂತಿಲ್ಲ

ರೈಲಿನಲ್ಲಿ ಚೈನ್ ಸೌಲಭ್ಯ ಇರುವುದು ಅವಶ್ಯಕತೆ ಇದ್ದಾಗ ಮಾತ್ರ ಬಳಸಿಕೊಳ್ಳಲು. ತುರ್ತಾಗಿ ಅಥವಾ ಸೂಕ್ತ ಕಾರಣವಿಲ್ಲದೆ ರೈಲಿನ ಚೈನ್ ಎಳೆದವರನ್ನು ಅಪರಾಧಿ ಎಂದು ಪರಿಗಣಿಸಲಾಗುವುದು. ಅವನಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು.

Indian Railway Luggage Rules 2023
Image Credit: PressReleasePage

ರೈಲಿನಲ್ಲಿ ಮದ್ಯ ಸೇವನೆ , ಧೂಮಪಾನ ಮಾಡುವಂತಿಲ್ಲ

ಮದ್ಯ ಸೇವಿಸಿ ರೈಲಿನಲ್ಲಿ ಪ್ರಯಾಣಿಸಿದರೆ 500 ರೂ. ದಂಡ ವಿಧಿಸಲಾಗುವುದು ಮಾತ್ರವಲ್ಲ ರೈಲಿನಿಂದ ಕೆಳಗಿಳಿಸುವ ಅಧಿಕಾರವೂ ಇದೆ. ರೈಲಿನಲ್ಲಿ ಧೂಮಪಾನ ಮಾಡುವುದನ್ನು ಕೂಡಾ ನಿಷೇಧಿಸಲಾಗಿದೆ. ಯಾರಾದರೂ ರೈಲಿನಲ್ಲಿ ಧೂಮಪಾನ ಮಾಡಿದರೆ 200 ರೂ ದಂಡವನ್ನು ಪಾವತಿಸಬೇಕಾಗುತ್ತದೆ. ರೈಲಿನಲ್ಲಿ ಮದ್ಯ ಸೇವನೆ ಹಾಗು ಧೂಮಪಾನ ನಿಷೇದ. ರೈಲಿನಲ್ಲಿ ಪ್ರಯಾಣಿಸುವಾಗ ಈ ರೀತಿಯ ಹಲವು ನಿಯಾಮಗಳ ಬಗ್ಗೆ ನಾವು ತಿಳಿದಿರುವುದು ಉತ್ತಮ.

Join Nadunudi News WhatsApp Group