mAadhaar: ಆಧಾರ್ ಹೊಂದಿರುವವರಿಗೆ ಬಿಗ್ ಅಪ್ಡೇಟ್, ಇನ್ನುಮುಂದೆ ಎಲ್ಲ ಕಡೆ ನಿಮ್ಮ ಆಧಾರ್ ಅನ್ನು ಕೊಂಡೊಯ್ಯುವ ಅಗತ್ಯವಿಲ್ಲ.

ಈ ರೀತಿ ಮಾಡುವುದರಿಂದ ಎಲ್ಲ ಕಡೆ ನಿಮ್ಮ ಆಧಾರ್ ಅನ್ನು ಕೊಂಡೊಯ್ಯುವ ಅಗತ್ಯ ಇರುವುದಿಲ್ಲ.

mAadhaar Application: ಭಾರತೀಯ ನಾಗರಿಕರಿಗೆ Aadhar card ನ ಬಗ್ಗೆ ಹೆಚ್ಚು ವಿವರಣೆ ನೀಡುವ ಅಗತ್ಯ ಇರುವುದಿಲ್ಲ. ಏಕೆಂದರೆ Aadhar Card ನ ಮಹತ್ವ ಭಾರತೀಯ ಪ್ರಜೆಯಾದ ಪ್ರತಿಯೊಬ್ಬರಿಗೂ ತಿಳಿದಿದೆ. ಸದ್ಯ ದೇಶದಲ್ಲಿ ಎಲ್ಲ ಕೆಲಸಗಳು ಕೂಡ ಆಧಾರ್ ಇಲ್ಲದೆ ಪೂರ್ಣಗೊಳ್ಳುವುದಿಲ್ಲ ಎನ್ನಬಹುದು. ಎಲ್ಲ ರೀತಿಯ ಹಣಕಾಸು ವಹಿವಾಟಿನಿಂದ ಹಿಡಿದು, ಯಾವುದೇ ಖಾತೆಯನ್ನು ತೆರೆಯಬೇಕಿದ್ದರು ಕೂಡ Aadhar Card ಮುಖ್ಯವಾಗಿದೆ.

mAadhaar Application Information
Image Credit: Jupiter

ಆಧಾರ್ ಹೊಂದಿರುವವರಿಗೆ ಬಿಗ್ ಅಪ್ಡೇಟ್
ಇನ್ನು ಆಧಾರ್ ನಲ್ಲಿ ವ್ಯಕ್ತಿಯ ಎಲ್ಲಾ ವೈಯಕ್ತಿಕ ಮಾಹಿತಿ ಅಡಕವಾಗಿರುವುದರಿಂದ ಆಧಾರ್ ಬೇರೊಬ್ಬರ ಕೈಗೆ ಸಿಕ್ಕಿದರೆ ಅದು ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ Aadhar ಅನ್ನು ಯಾರು ಕೂಡ ಕಳೆದುಕೊಳ್ಳಬಾರದು. ಇನ್ನು ಎಲ್ಲ ಕೆಲಸಗಳಿಗೂ ಆಧಾರ್ ಮುಖ್ಯವಾಗಿರುವುದರಿಂದ ಎಲ್ಲ ಕಡೆ Aadhar ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ವೇಳೆ ಆಧಾರ್ ಕಳೆದುಹೋಗುವ ಸಾಧ್ಯತೆ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು UIDAI ಇದೀಗ ಹೊಸ ವ್ಯವಸ್ಥೆಯನ್ನು ಕಂಡು ಹಿಡಿದಿದೆ. ನೀವು ಈ ರೀತಿ ಮಾಡುವುದರಿಂದ ಎಲ್ಲ ಕಡೆ ನಿಮ್ಮ ಆಧಾರ್ ಅನ್ನು ಕೊಂಡೊಯ್ಯುವ ಅಗತ್ಯ ಇರುವುದಿಲ್ಲ.

ಇನ್ನುಮುಂದೆ ಎಲ್ಲ ಕಡೆ ನಿಮ್ಮ ಆಧಾರ್ ಅನ್ನು ಕೊಂಡೊಯ್ಯುವ ಅಗತ್ಯವಿಲ್ಲ
ಮೂಲ ಆಧಾರ್ ಅನ್ನು ಕೊಂಡೊಯ್ಯುವ ಬದಲಿಗೆ ಜನರು ಈ ಪರ್ಯಾಯ ಮಾರ್ಗವನ್ನು ಬಳಸಿಕೊಳ್ಳಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಸಂಖ್ಯೆ ಹೊಂದಿರುವವರಿಗೆ ಅವರ ಜನಸಂಖ್ಯಾ ಮಾಹಿತಿಯನ್ನು ಸಾಗಿಸಲು Interface ಒದಗಿಸಲು ಹೊಸ App ಅನ್ನು ಅಭಿವೃದ್ಧಿಪಡಿಸಿದೆ. ನೀವು ನಿಮ್ಮ ಮೊಬೈಲ್ ನಲ್ಲಿ mAadhaar Application ಅನ್ನು ಬಳಸುವ ಮೂಲಕ ಎಲ್ಲ ಕಡೆ ಆಧಾರ್ ಅನ್ನು ಕೊಂಡುಯ್ಯುವುದರಿಂದ ತಪ್ಪಿಸಿಕೊಳ್ಳಬಹುದು. mAadhaar Application ನಲ್ಲಿ ನೀವು ನಿಮ್ಮ Aadhaar ಅನ್ನು ಸೇರಿಸಿ ಅಗತ್ಯವಿದ್ದಲ್ಲಿ ಅದನ್ನು ಬಳಸಿಕೊಳ್ಳಬಹುದು.

mAadhaar Application
Image Credit: Paytm

mAadhaar Application ನಲ್ಲಿ ನಿಮ್ಮ ಪ್ರೊಫೈಲ್ ರಚಿಸುವ ವಿಧಾನ
•mAadhaar ಅಪ್ಲಿಕೇಶನ್ ಅನ್ನು ಬಳಸಲು ನೀವು ಮೊದಲು ನಿಮ್ಮ Profile ಅನ್ನು Application ನಲ್ಲಿ ಸೇರಿಸುವ ಅಗತ್ಯವಿದೆ.

•Smartphone ನಲ್ಲಿ ಬಳಸಲಾದ Aadhar ನಲ್ಲಿ ನಮೂದಿಸಲಾದ Phone Number ಒಂದೇ ಆಗಿದ್ದರೆ ಮಾತ್ರ Profile ಅನ್ನು ಸೇರಿಸಲಾಗುತ್ತದೆ.

Join Nadunudi News WhatsApp Group

•ಮೊದಲು Google Play Store ಅಥವಾ App Store ಗೆ ಭೇಟಿ ನೀಡಿ ಮತ್ತು ಅಗತ್ಯವಿರುವ ಅನುಮತಿಗಳೊಂದಿಗೆ mAadhaar Application ಅನ್ನು Install ಮಾಡಿಕೊಳ್ಳಿ.

•mAadhaar Application ಅನ್ನು ತೆರೆಯಿರಿ ಮತ್ತು ‘Register My Aadhaar’ ಕ್ಲಿಕ್ ಮಾಡಿ ಮತ್ತು 4 ಅಂಕಿಯ Password ಅನ್ನು ನಮೂದಿಸಿ.

•ನಿಮ್ಮ Aadhar Number ನಮೂದಿಸಿ ಅಥವಾ ನಿಮ್ಮ Aadhar Card ನಲ್ಲಿರುವ QR Code, Captcha code ಅನ್ನು Scan ಮಾಡಿ ಮತ್ತು ‘Request OTP’ ಕ್ಲಿಕ್ ಮಾಡಿ

•ನೀವು ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Verify’ ಕ್ಲಿಕ್ ಮಾಡಿ.

•ಈಗ mAadhaar Application ಮುಖಪುಟದಲ್ಲಿ ನಿಮ್ಮ Profile ಅನ್ನು ಟ್ಯಾಪ್ ಮಾಡಿ Profile Password ನಮೂದಿಸಿ Profile ಪುಟದಲ್ಲಿ, ನಿಮ್ಮ ಮಾಹಿತಿಯನ್ನು ಫ್ಲಿಪ್ ಮಾಡಿ್ದರೇ mAadhaar Application ನಲ್ಲಿ ನಿಮ್ಮ Profile ರಚಿಸಲಾಗುತ್ತದೆ.

Join Nadunudi News WhatsApp Group