Free Laptop: ವಿದ್ಯಾರ್ಥಿಗಳ ಖಾತೆಗೆ ಬರಲಿದೆ 25000 ರೂ, ಬೇಗ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಿ.

BPL ಕಾರ್ಡ್ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಫ್ರೀ ಲ್ಯಾಪ್ ಟಾಪ್ ಯೋಜನೆಯ ಲಾಭ ಲಭ್ಯವಾಗಲಿದೆ.

 Govt Free Laptop Scheme: ದೇಶದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಸೌಲಭ್ಯವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒಟ್ಟು ನೀಡುತ್ತಿದೆ. ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಕೊರತೆ ಕಾಣಬಾರದು ಎನ್ನುವ ಕಾರಣ ಸಾಕಷ್ಟು ಸೌಕರ್ಯವನ್ನು ಶಾಲೆಗಳಲ್ಲಿ ಒದಗಿಸಲಾಗುತ್ತಿದೆ.

ಇನ್ನು ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಆಗಾಗ ನೀಡುತ್ತಲೇ. ಇರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಕೇಂದ್ರ ಸರ್ಕಾರ ಆಗಾಗ ಅರ್ಜಿ ಅಹ್ವಾನ ಮಾಡುತ್ತಿರುತ್ತದೆ. ಕೇಂದ್ರ ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನದಿಂದಾಗಿ ದೇಶದಲ್ಲಿ ಕೋಟ್ಯಂತರ ಮಕ್ಕಳು ಉತ್ತಮ ವ್ವಿದ್ಯಾಭ್ಯಾಸವನ್ನು ಕಂಡುಕೊಂಡಿದ್ದಾರೆ ಎನ್ನಬಹುದು.

Madhya Pradesh Govt Free Laptop Scheme
Image Credit: Zeenews

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
ಇನ್ನು ಇತ್ತೀಚೆಗಂತೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಂಬಲ ನೀಡಲು ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ Laptop ಅನ್ನು ಘೋಷಿಸಲಾಗುತ್ತಿದೆ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವ ಬಗ್ಗೆ ಘೋಷಣೆ ಹೊರಡಿಸಿತ್ತು. ಇದೀಗ ಇದರ ಬೆನ್ನಲ್ಲೇ Madya Pradesh Govt  ಕೂಡ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನಿಡಲು ಮುಂದಾಗಿದೆ.

MP Free Laptop ಯೋಜನೆಗೆ ಯಾರು ಅರ್ಹರು
ಇದೀಗ ಮದ್ಯ ಪ್ರದೇಶ ಸರ್ಕಾರ MP Free Laptop ಯೋಜನೆಯಡಿ 12 ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವುದಾಗಿ ಘೋಷಣೆ ಹೊರಡಿಸಿದೆ. 12 ನೇ ತರಗತಿಯಲ್ಲಿ ಶೇ. 75 ಕ್ಕಿಂತ ಹೆಚ್ಚಿನ ನಕ ಪಡೆದ ವಿದ್ಯಾರ್ಥಿಗಳು ಈ ಯೋಜನೆಯಡಿ ಉಚಿತ ಲ್ಯಾಪ್ ಟಾಪ್ ಅನ್ನು ಪಡೆಯಬಹುದಾಗಿದೆ. ಇನ್ನು BPL ಕಾರ್ಡ್ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಯೋಜನೆಯ ಲಾಭ ಲಭ್ಯವಾಗಲಿದೆ.

ಉಚಿತ ಲ್ಯಾಪ್ ಟಾಪ್ ಪಡೆಯುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಹೆಚ್ಚಿರಬಾರದು. ಸದ್ಯ ಕರ್ನಾಟಕದಲ್ಲಿ ಕೂಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಘೋಷಣೆ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಲ್ಯಾಪ್ ಟಾಪ್ ಸಿಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group

MP Free Laptop
Image Credit: India

ವಿದ್ಯಾರ್ಥಿಗಳ ಖಾತೆಗೆ ಬರಲಿದೆ 25000 ರೂ.
ಇನ್ನು ರಾಜ್ಯದಲ್ಲಿ 708553 ವಿದ್ಯಾರ್ಥಿಗಳು MP Govt ಪರಿಚಯಿಸಿರುವ Free Laptop ಯೋಜನೆಯಡಿ 25000 ರೂ. ಮೊತ್ತವನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳ ಖಾತೆಗಳಿಗೆ 25 ಸಾವಿರ ರೂ.ಗಳ ಬೃಹತ್ ಮೊತ್ತವನ್ನು ವರ್ಗಾಯಿಸಲಾಗುವುದು. MP Free Laptop ಯೋಜನೆಯ ಮೂಲಕ, 12 ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಮಧ್ಯಪ್ರದೇಶದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ಖರೀದಿಸಲು ಸರ್ಕಾರವು 25 ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ.

Join Nadunudi News WhatsApp Group