Bank Closure: ಜೂಲೈ 1 ರಿಂದ ಶಾಶ್ವತವಾಗಿ ಮುಚ್ಚಲಿದೆ ಈ ಬ್ಯಾಂಕ್ ಲೈಸೆನ್ಸ್ ರದ್ದು ಮಾಡಿದ RBI

ಇನ್ನೊಂದು ಬ್ಯಾಂಕಿನ ಲೈಸೆನ್ಸ್ ಅನ್ನು RBI ರದ್ದು ಮಾಡಿದ್ದು ಜೂಲೈ 1 ರಿಂದ ಬ್ಯಾಂಕ್ ಮುಚ್ಚಲಿದೆ.

Bank License Cancel: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ರಿಸರ್ವ್ ಬ್ಯಾಂಕ್ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ. ಈಗ ಈ ಬ್ಯಾಂಕ್ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಂತೆ ಕೆಲಸ ಮಾಡುತ್ತಿದೆ.

ನಿನ್ನೆಯಿಂದ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಿದೆ. ರಿಸರ್ವ್ ಬ್ಯಾಂಕ್ ಈ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದ್ದು, ಇದೀಗ ಈ ಬ್ಯಾಂಕ್ ನಲ್ಲಿ ಯಾವುದೇ ವ್ಯವಹಾರಗಳು ನಡೆಯುತ್ತಿಲ್ಲ.

RBI cancels license of Mahalakshmi Co-operative Bank
Image Credit: Hindustantimes

ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನ ಪರವಾನಗಿ ರದ್ದುಗೊಳಿಸಿದ RBI
ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಬ್ಯಾಂಕಿಂಗ್ ಯೇತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಮಾರ್ಚ್ 23 1994 ರಂದು ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ಪರವಾನಗಿ ನೀಡಿದೆ. ಆದರೆ ನಿಯಮಗಳನ್ನ ಪಾಲಿಸದ ಕಾರಣ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಲಾಗಿದೆ.

ಇದೆ ಏಪ್ರಿಲ್ 2023 ರಲ್ಲಿ ರಿಸರ್ವ್ ಬ್ಯಾಂಕ್ ಅಡೂರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿತು ಮತ್ತು ಅದನ್ನು ಏನ್ ಬಿ ಎಫ್ ಸಿ ಆಗಿ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು. ಇದೀಗ ನಿನ್ನೆ ಮಹಾಲಕ್ಷಿ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿದೆ.

RBI cancels license of Mahalakshmi Co-operative Bank
Image Credit: Rightsofemployees

ಹಲವು ಬ್ಯಾಂಕುಗಳಿಗೆ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಇನ್ನು ರಿಸರ್ವ್ ಬ್ಯಾಂಕ್ ಕೆಲವು ನಿಯಮಗಳನ್ನು ಇಟ್ಟುಕೊಂಡು ಸಹಕಾರಿ ಬ್ಯಾಂಕ್ ಗಳಿಗೆ ದಂಡ ವಿಧಿಸಿತ್ತು. ಆ ಸಹಕಾರಿ ಬ್ಯಾಂಕ್ ಗಳೆಂದರೆ ಟೆಕ್ಸ್ ಟೈಲ್ ಟ್ರೇಡರ್ಸ್ ಕೋ- ಒಪರೇಟಿವ್ ಬ್ಯಾಂಕ್ ಲಿಮಿಟೆಡ್. ಉಜ್ಜಯಿನಿ ನಾಗರಿಕ್ ಸಹಕಾರಿ ಬ್ಯಾಂಕ್ ಮರ್ಯಾಡಿತ್, ಪಾನಿಹಟಿ ಕೋ ಆಪರೇಟಿವ್ ಬ್ಯಾಂಕ್, ದಿ ಬರ್ಹಾಮ್ಪುರ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ಸೋಲಾಪುರ ಸಿದ್ದೇಶ್ವರ ಸಹಕಾರಿ ಬ್ಯಾಂಕ್, ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮತ್ತು ಉತ್ತರಾಪರ ಸಹಕಾರಿ ಆಪರೇಟಿವ್ ಬ್ಯಾಂಕ್.

Join Nadunudi News WhatsApp Group

Join Nadunudi News WhatsApp Group