MSSC: ಏನಿದು ಮಹಿಳಾ ಸಮ್ಮಾನ್ ಸರ್ಟಿಫಿಕೇಟ್ ಸ್ಕೀಮ್, ಈ ಯೋಜನೆಯಲ್ಲಿ ಮಹಿಳೆಯರಿಗೆ ಎಷ್ಟು ಹಣ ಸಿಗಲಿದೆ

ಮಹಿಳೆಯರಿಗಾಗಿ ಕೇಂದ್ರ ಜಾರಿಗೆ ತಂಡ ಮಹಿಳಾ ಸಮ್ಮಾನ್ ಯೋಜನೆಯ ಲಾಭ ಏನು ನೋಡಿ

Mahila Samman Savings Certificate: ಮಹಿಳಾ ಸಮ್ಮಾನ್ (Mahila Samman) ಉಳಿತಾಯ ಯೋಜನೆಯು ಮಹಿಳೆಯರಿಗಾಗಿ ಸರ್ಕಾರ ನಡೆಸುತ್ತಿರುವ ವಿಶೇಷ ಯೋಜನೆಯಾಗಿದೆ. ಇದು ಮಹಿಳೆಯರಿಗೆ ಉತ್ತಮ ಬಡ್ಡಿಯನ್ನು ನೀಡುವ ಠೇವಣಿ ಯೋಜನೆಯಾಗಿದೆ.

ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರದ ಮೋದಿ ಸರ್ಕಾರ ಈ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ನಾವು ಕೇಂದ್ರದ ಮೋದಿ ಸರ್ಕಾರ ಪರಿಚಯಿಸಿರುವ ಉತ್ತಮ ಹೂಡಿಕೆಯ ಯೋಜನೆಯಾ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Mahila Samman Savings Certificate Details
Image Credit: Informalnewz

Mahila Samman Savings Certificate Details
ಇದೀಗ ನಾವು ಈ ಲೇಖನದಲ್ಲಿ ಸರ್ಕಾರ ಮಹಿಳೆರಿಗಾಗಿ ಪರಿಚಯಿಸಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸರ್ಕಾರ ಆರಂಭಿಸಿರುವ ಯೋಜನೆಯ Mahila Samman Savings Certificate. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ಇದರಿಂದಾಗಿ ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಅಂಚೆ ಇಲಾಖೆಯು ನಡೆಸುತ್ತಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೆಚ್ಚು ಲಾಭದಾಯಕವಾಗಿದೆ.

ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ.7.5 ಬಡ್ಡಿ ಮೊತ್ತವನ್ನು ಸರಕಾರ ನೀಡುತ್ತಿದೆ. ಖಾತೆ ಕ್ಲೋಸ್‌ ಮಾಡಿದಾಗ ನಿಮಗೆ 7.5 ಶೇಕಡಾ ಬಡ್ಡಿದರದ ಬದಲು 5.5% ಬಡ್ಡಿದರ ಲಭ್ಯವಾಗುತ್ತದೆ. ಮಹಿಳೆಯರು ಅಲ್ಪಾವಧಿಗೆ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಮಹಿಳೆಯರು ಇದನ್ನು ಎರಡು ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಬೇಕು. ಹೂಡಿಕೆಯ ಗರಿಷ್ಠ ಮಿತಿಯನ್ನು 2 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.

Mahila Samman Savings Certificate Interest Rate
Image Credit: Zeenews

ಖಾತೆಯನ್ನು ತೆರೆಯುವ ಕುರಿತು ಮಾಹಿತಿ
ಯಾವುದೇ ಮಹಿಳೆ ತನ್ನ MSSC ಖಾತೆಯನ್ನು ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್‌ಗಳಲ್ಲಿ ತೆರೆಯಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ, ಅವರ ಪೋಷಕರು ಈ ಖಾತೆಯನ್ನು ತೆರೆಯಬಹುದು. ಖಾತೆಯನ್ನು ತೆರೆಯುವಾಗ, ನೀವು ಫಾರ್ಮ್-1 ಅನ್ನು ಭರ್ತಿ ಮಾಡಬೇಕಾಗುತ್ತದೆ, ಇದರೊಂದಿಗೆ ನಿಮಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಫೋಟೋ ಮುಂತಾದ KYC ದಾಖಲೆಗಳು ಬೇಕಾಗುತ್ತವೆ. ಈ ಯೋಜನೆಯ ಪ್ರಯೋಜನವನ್ನು 2025 ರ ವರೆಗೆ ಪಡೆಯಬಹುದು.

Join Nadunudi News WhatsApp Group

Mahila Samman Savings Certificate Profit
Image Credit: Ichorepaka

Join Nadunudi News WhatsApp Group