ಮಾರುಕಟ್ಟೆಗೆ ಬಂತು ಕಡಿಮೆ ಬೆಲೆಯ ಮಹಿಂದ್ರಾ ಸ್ಕಾರ್ಪಿಯೊ N SUV, ಕಾರಿಗೆ ಜನರು ಫುಲ್ ಫಿದಾ ನೋಡಿ.

ಕಾರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹುಟ್ಟಿದ ಪ್ರತಿಯೊಬ್ಬ ಮಾನವನಿಗೂ ಜೀವನದಲ್ಲಿ ಒಮ್ಮೆಯಾದರೂ ತಮಗಿಷ್ಟವಾದ ವಾಹನವನ್ನ ಖರೀದಿ ಮಾಡಬೇಕು ಅನ್ನುವ ಬಯಕೆ ಇದ್ದೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಗನಕ್ಕೆ ಏರಿದ ಕಾರಣ ಜನರು ವಾಹನಗಳನ್ನ ಖರೀದಿ ಮಾಡಲು ಹಿಂದೆಮುಂದೆ ನೋಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕೆಲವು ಕಾರು ಕಂಪನಿಗಳು ಒಂದರ ಮೇಲೆ ಒಂದರಂತೆ ವಿಶಿಷ್ಟ ಬಗೆಯ ಕಾರುಗಳನ್ನ ಬಿಡುಗಡೆ ಮಾಡುತ್ತಿದ್ದು ಇದು ಜನರನ್ನ ಕಾರು ಖರೀದಿ ಮಾಡಲು ಆಕರ್ಷಣೆ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಇರುವ ದೊಡ್ಡ ದೊಡ್ಡ ಕಾರು ಕಂಪನಿಗಳಲ್ಲಿ ಮಹಿಂದ್ರಾ ಕಾರಿನ ಕಂಪನಿ ಕೂಡ ಒಂದು ಎಂದು ಹೇಳಬಹುದು. ಆನಂದ್ ಮಹಿಂದ್ರಾ ಅವರ ಮಾಲೀಕತ್ವದ ಈ ಕಂಪನಿ ಈಗಾಗಲೇ ಹಲವು ಬಗೆಯ ಕಾರುಗಳನ್ನ ಪರಿಚಯ ಮಾಡಿದ್ದು ಆ ಕಾರುಗಳು ಜನರ ಮೆಚ್ಚುಗೆಗೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಮಹಿಂದ್ರಾ ಕಂಪನಿ ಪರಿಚಯಿಸಿದ ಕಾರುಗಳಲ್ಲಿ ಸ್ಕಾರ್ಪಿಯೊ ಕಾರು ಕೂಡ ಒಂದು ಎಂದು ಹೇಳಬಹುದು. ಈಗಾಗಲೇ ಹಲವು ವಿಧದ ಸ್ಕಾರ್ಪಿಯೊ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದ ಮಹಿಂದ್ರಾ ಕಂಪನಿ ಈಗ ಹಿಂದೆಂದೂ ಬಿಡುಗಡೆ ಮಾಡದ ಹೊಸ ವೈಶಿಷ್ಟ್ಯತೆಯನ್ನ ಹೊಸ ಬಗೆಯ ಸ್ಕಾರ್ಪಿಯೊ N SUV ಕಾರನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈ ಕಾರು ಜನರ ಆಶ್ಚರ್ಯ ಮತ್ತು ಮೆಚ್ಚುಗೆಗೆ ಕೂಡ ಕಾರಣವಾಗಿದೆ.

Mahindra scorpio n suv

ಈ ಕಾರಿನ ವಿಶೇಷತೆಯನ್ನ ನೋಡಿದ ನೋಡಿದ ಜನರು ಕಾರನ್ನ ಹೆಚ್ಚುಹೆಚ್ಚು ಬುಕ್ ಮಾಡಲು ಆರಂಭ ಮಾಡಲಿದ್ದು ಈ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಸ್ಕಾರ್ಪಿಯೊ N SUV ಕಾರಿನ ವಿಶೇಷತೆ ಏನು ಮತ್ತು ಈ ಹೊಸ ಸ್ಕಾರ್ಪಿಯೊ ಕಾರಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಕಳೆದ ಬಾರಿ ಮಹಿಂದಾ SUV 700 ಕಾರನ್ನ ಬಿಡುಗಡೆ ಮಾಡಿ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಇತಿಹಾಸ ಮಾಡಿದ ಮಹಿಂದ್ರಾ ಕಂಪನಿ ಈಗ ಸ್ಕಾರ್ಪಿಯೊ N SUV ಕಾರನ್ನ ನಿನ್ನೆ ಬಿಡುಗಡೆ ಮಾಡಿದೆ.

ಈ ಹೊಸ ಸ್ಕಾರ್ಪಿಯೊ ಕಾರು ಬಹಳ ವಿಶೇಷತೆಯನ್ನ ಹೊಂದಿದ್ದು ಈ ಕಾರಿನ ಆರಂಭಿಕ ಬೆಲೆ 12 ಲಕ್ಷ ರೂಪಾಯಿಯಿಂದ ಆರಂಭ ಆಗುತ್ತದೆ. ಮುಂದಿನ ತಿಂಗಳು ಜುಲೈ ತಿಂಗಳಿಂದ ಈ ಕಾರಿನ ಬುಕಿಂಗ್ ಆರಂಭ ಆಗಲಿದೆ ಎಂದು ಕಂಪನಿ ಹೇಳಿದೆ. ಪೆಟ್ರೋಲ್ ಹಾಗೂ ಡೀಸೆಲ್ ಆಯ್ಕೆಗಳನ್ನು ಇದು ಹೊಂದಿದ್ದು, ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೂ ಲಭ್ಯವಿರಲಿವೆ. ಇನ್ನು ಸ್ಕಾರ್ಪಿಯೊ N SUV ಕಾರು ಎಲ್ಲಾ ಬಗೆಯ ಸೌಲಭ್ಯವನ್ನ ಹೊಂದಿರುತ್ತದೆ ಎಂದು ಕಂಪನಿ ಹೇಳಿದ್ದು ಇತರೆ ಈ SUV ಕಾರನ್ನ ಐಷಾರಾಮಿ ಕಾರಿಗೆ ಹೋಲಿಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಈ ಕಾರಿನ ಕುರಿತು ನಿಖರ ಮಾಹಿತಿ ಇನ್ನೂ ಕೂಡ ಲಭ್ಯವಾಗಿರುವುದಿಲ್ಲ. ಸ್ನೇಹಿತರೆ ಈ ಹೊಸ ಸ್ಕಾರ್ಪಿಯೊ N SUV ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Mahindra scorpio n suv car

Join Nadunudi News WhatsApp Group