Thar 5 Door: ಕೊನೆಗೂ ಬಂತು 5 ಡೋರ್ ಇರುವ ಮಹಿಂದ್ರಾ ಥಾರ್, ಇಲ್ಲಿದೆ ನೋಡಿ ಬೆಲೆ ಮತ್ತು ಕಾರಿನ ಮೈಲೇಜ್.

5 ಬಾಗಿಲಿನ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿರುವ ಮಹಿಂದ್ರಾ ಕಂಪನಿ.

Mahindra Thar 5 door Car: ದೇಶಿಯ ಮಾರುಕಟ್ಟೆಯಲ್ಲಿ ಮಹಿಂದ್ರಾ (Mahindra) ಕಂಪನಿಯ ಕಾರ್ ಗಳ ಮೇಲಿನ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಬೇಡಿಕೆಗೆ ಅನುಗುಣವಾಗಿ ಮಹಿಂದ್ರಾ ಕಂಪನಿ ಕಾರುಗಳ ಮಾರಾಟ ಕೂಡ ಹೆಚ್ಚುತ್ತಿದೆ. ಇನ್ನು ಮಹಿಂದ್ರಾ ಕಂಪನಿ ಕಾರ್ ಪ್ರಿಯರಿಗಾಗಿ ಹೊಸ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಆಗಸ್ಟ್ ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಮಹಿಂದ್ರಾ ಕಾರ್
ಮಹಿಂದ್ರಾ ಕಂಪನಿ ಪ್ರತಿ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮತ್ತು ವಿಭಿನ್ನ ಶೈಲಿಯ ಕಾರ್ ಗಳನ್ನೂ ಪರಿಚಯಿಸುತ್ತದೆ. ಹೀಗಾಗಿ ಮುಂಬರುವ ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆಗೊಳಿಸಲು ಮಹಿಂದ್ರಾ ಕಂಪನಿಯ ಹೊಸ ರೂಪಾಂತರದ ಕಾರ್ ಸಜ್ಜಾಗಿದೆ.

Mahindra Car will enter the market in August
Image credit: Livemint

ಪ್ರಸ್ತುತ ನಾಲ್ಕನೇ ಬರಿ ಮಹಿಂದ್ರಾ ಕಂಪನಿ ತನ್ನ ಹೊಸ ರೂಪಾಂತರದ ಕಾರ್ ಅನ್ನು ಬಿಡುಗಡೆ ಮಾಡಲಿದೆ. ಮಹಿಂದ್ರಾ ಕಂಪನಿಯ ಈ ಹೊಸ ಕಾರ್ ನ ವಿವರಗಳನ್ನು ತಿಳಿಯೋಣ.

ಮಹಿಂದ್ರಾ ಥಾರ್ 5 ಡೋರ್ ಕಾರ್ (Mahindra Thar 5 door Car) 
ಮಹಿಂದ್ರಾ ತನ್ನ ಜನಪ್ರಿಯ ಮಹಿಂದ್ರಾ ಥಾರ್ 5 ಬಾಗಿಲಿನ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಮಹಿಂದ್ರಾ ಕಂಪನಿ ತನ್ನ ಹೊಸ ರೂಪಾಂತರದ 5 ಬಾಗಿಲಿನ ಕಾರ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ SUV ಶ್ರೇಣಿಯ ಮಾರಾಟವನ್ನು ಹೆಚ್ಚಿಸುತ್ತಿದೆ.

ಮಹಿಂದ್ರಾ ಥಾರ್ 5 ಡೋರ್ ಕಾರ್ ನಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನ ಆಯ್ಕೆಯನ್ನು ನೀಡಿದೆ. ಕಂಪನಿಯು ಈ ಕಾರ್ ನಲ್ಲಿ 2 .2 ಲೀಟರ್ ಡೀಸೆಲ್ ಮತ್ತು 2 .0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ.

Join Nadunudi News WhatsApp Group

Mahindra Car will enter the market in August
Image Credit: Navbharattimes

ಮಹಿಂದ್ರಾ ಥಾರ್ 5 ಡೋರ್ ಕಾರ್ ನ ವಿಶೇಷತೆ
ಇನ್ನು 5 ಬಾಗಿಲಿನ ಮಾರುತಿ ಜಿಮ್ನಿ ಕಾರ್ 3985 ಮಿಮಿ ಉದ್ದವನ್ನು ಹೊಂದಿದೆ. ಮಾರುತಿ ಜಿಮ್ನಿ ಕಾರ್ ಗೆ ಹೋಲಿಸಿದರೆ ಮಹಿಂದ್ರಾ ಥಾರ್ 5 ಡೋರ್ ಕಾರ್ ನ ಉದ್ದ ಹೆಚ್ಚಿದೆ.

ಮಹಿಂದ್ರಾ ಥಾರ್ 5 ಡೋರ್ ಕಾರ್ 1820 mm ಅಗಲ ಮತ್ತು 1850 mm ಎತ್ತರವನ್ನು ಹೊಂದಿದೆ. ಮಹಿಂದ್ರಾ ಥಾರ್ 5 ಡೋರ್ ಕಾರ್ ಅನ್ನು 2024 ರಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಕಾರ್ ನ ಬೆಲೆಯ ಬಗ್ಗೆ ಕಂಪನಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Join Nadunudi News WhatsApp Group