Mahindra 2024: ಮಾರುತಿ ಜಿಮ್ನಿ ಕಾರಿಗೆ ಮತ್ತೆ ಸಂಕಷ್ಟ, ಕಡಿಮೆ ಬೆಲೆಗೆ ಇದೆ ವರ್ಷ ಜನರ ಕೈ ಸೇರಲಿದೆ ಥಾರ್ 5 ಡೋರ್ ಕಾರ್

ಮಾರುತಿ ಜಿಮ್ನಿಯನ್ನು ಹಿಂದಿಕ್ಕಲು ಬಂದು ಮಹಿಂದ್ರಾ ನ್ಯೂ SUV

Mahindra Thar 5 Door Car:  Maruti Suzuki, Hyundai, Tata, Renault, Kia ಸೇರಿದಂತೆ ದೇಶದ ಇನ್ನಿತರ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಹೆಚ್ಚಿನ ವೈಶಿಷ್ಟ್ಯಗಳಿರುವ SUV ಗಳನ್ನೂ ಪರಿಚಯಿಸಿದೆ. ಸದ್ಯ ಟೆಕ್ ವಲಯದಲ್ಲಿ SUV ಮಾದರಿಗಳು ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ SUV ಖರೀದಿಗೆ ಗ್ರಾಹಕರಿಗೆ ಸಾಕಷ್ಟು ಆಯ್ಕೆಗಳು ಲಭ್ಯವಾಗುತ್ತಿದೆ.

ಗ್ರಾಹಕರು ಕಾರ್ ಖರೀದಿಸುವ ಮುನ್ನ ಕಾರ್ ನ ಮೈಲೇಜ್ ನ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಸುರಕ್ಷತಾ ಫೀಚರ್ ನ ಜೊತೆಗೆ ಬಜೆಟ್ ಬೆಲೆಯಲ್ಲಿ ಸಿಗುವಂತಹ ಕಾರ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸದ್ಯ ಮಾರುತಿ ಜಿಮ್ನಿ ಮಾದರಿಗೆ ಠಕ್ಕರ್ ನೀಡಲು ಇದೀಗ Mahindra ತನ್ನ ಹೊಚ್ಚ ಹೊಸ 5 ಡೋರ್ ಕಾರ್ ಅನ್ನು ಪರಿಚಯಿಸಿದೆ. ಈ ಕಾರ್ ನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Mahindra Thar 5 Door Car
Image Credit: Motokeeda

ಮಾರುತಿ ಜಿಮ್ನಿಯನ್ನು ಹಿಂದಿಕ್ಕಲು ಬಂದು ಮಹಿಂದ್ರಾ ನ್ಯೂ SUV
ಮಾರುಕಟ್ಟೆಯಲ್ಲಿ ಸದ್ಯ Mahindra Thar 5 Door Car ಶೀಘ್ರದಲ್ಲೇ ಎಂಟ್ರಿ ಕೊಡಲಿದೆ. ಅತ್ಯಾಧುನಿಕ ಫೀಚರ್ ನೊಂದಿಗೆ ಥಾರ್ ಮಾದರಿಯನ್ನು ಕಂಪನಿಯು ಸಿದ್ಧಪಡಿಸಿದೆ. Mahindra Thar 5 Door Car ನಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನ ಆಯ್ಕೆಯನ್ನು ನೀಡಿದೆ. ಕಂಪನಿಯು ಈ ಕಾರ್ ನಲ್ಲಿ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ.  ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಬರೋಬ್ಬರಿ 15 ಕಿಲೋಮೀಟರ್ ಮೈಲೇಜ್ ನೀಡಲಿದೆ.

5 ಡೋರ್  ಥಾರ್ ಕಾರ್ ಗೆ ಮಾರುಕಟ್ಟೆಯಲ್ಲಿ ಹೆಚ್ಚಿದೆ ಬೇಡಿಕೆ
ಮಹಿಂದ್ರಾ ಥಾರ್ 5 ಡೋರ್ ಕಾರ್ ಅನ್ನು 2024 ರಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ 15 ಲಕ್ಷದಿಂದ 19 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಲೆದರ್ ಸೀಟ್‌ ಗಳು, ದೊಡ್ಡ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಮರುವಿನ್ಯಾಸಗೊಳಿಸಲಾದ ಸೆಂಟ್ರಲ್ ಕನ್ಸೋಲ್ ಮತ್ತು ಮಹೀಂದ್ರಾ XUV700 ಗೆ ಹೋಲುವ ಸ್ಟೀರಿಂಗ್ ವೀಲ್ Mahindra Thar 5 Door Car ನ ಒಳವಿನ್ಯಾಸದಲ್ಲಿ ನೋಡಬಹುದು.

Mahindra Thar 5 Door Car Price And Feature
Image Credit: Motorbeam

ಒಳಭಾಗವು ಸ್ಪ್ಲಿಟ್ ಸೆಂಟರ್ ಆರ್ಮ್‌ರೆಸ್ಟ್‌ ನೊಂದಿಗೆ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿರುವುದು ವಿಶೇಷವಾಗಿದೆ. ಮಹಿಂದ್ರಾ ಥಾರ್ 5 ಡೋರ್ ಕಾರ್ 1820 mm ಅಗಲ ಮತ್ತು 1850 mm ಎತ್ತರವನ್ನು ಹೊಂದಿದೆ. ಇನ್ನು ವಾಹನ ಸವಾರರ ಸುರಕ್ಷತೆಗಾಗಿ ಕಂಪನಿಯು ನೂತನ 5 Door Thar ನಲ್ಲಿ 6 Airbags, ABS with EBD, Electronic Stability Control, Hill Descent Control, Traction Control, Rear Parking Sensor with Camera, Seat Belt Reminder ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group