Thar 5 Door: 5 ಡೋರ್ ಥಾರ್ ಖರೀದಿಸಲು ಕಾಯುತ್ತಿದ್ದ ಜನರಿಗೆ ಬೇಸರದ ಸುದ್ದಿ, ಮಹಿಂದ್ರಾ ಕಂಪನಿಯ ಇನ್ನೊಂದು ನಿರ್ಧಾರ.

ಮಹಿಂದ್ರಾ ಥಾರ್ 5 ಡೋರ್ ಕಾರ್ ಖರೀದಿಸಲು ಕುತೂಹಲದಿಂದ ಕಾಯುತ್ತಿದ್ದ ಜನರಿಗೆ ಬೇಸರದ ಸುದ್ದಿ.

Mahindra Thar 5 Door: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗಿವೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗುವ ಮೂಲಕ ಸದ್ದು ಮಾಡುತ್ತಿದೆ. ಅದರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಹಿಂದ್ರ ಕಂಪನಿಯ ಕಾರುಗಳ ಕ್ರೇಜ್ ಕಡಿಮೆ ಆಗಿಲ್ಲ.

ಮಹಿಂದ್ರಾ ಥಾರ್ 5 ಡೋರ್ ಬಿಡುಗಡೆ
ಮಾರುಕಟ್ಟೆಯಲ್ಲಿ ಮಹಿಂದ್ರಾ ಕಾರು ಕಂಪನಿ 5 ಡೋರ್ ಥಾರ್ ಬಿಡುಗಡೆ ಮಾಡುವ ಬಗ್ಗೆ ಮಾತನಾಡಿತ್ತು. ಆದರೆ ಈಗ ಈ ಕಾರು ವಿಳಂಬವಾಗುವ ಲಕ್ಷಣ ಕಾಣುತ್ತಿದೆ. ಮುಂಬರುವ ಆಗಸ್ಟ್ 15 ರಂದು ಅನಾವರಣಗೊಳ್ಳಲಿದೆ ಎಂದು ಮಹಿಂದ್ರಾ ತಿಳಿಸಿತ್ತು. ಇದರ ನಡುವೆ ಈಗ ಥಾರ್ 5 ಡೋರ್ ಕಾರು ಬಿಡುಗಡೆ ವಿಷಯವಾಗಿ ಇನ್ನೊಂದು ಸುದ್ದಿ ಹಬ್ಬಿದೆ.

Price of Mahindra Thar 5 Door
Image Credit: dnaindia

ಥಾರ್ 5 ಡೋರ್ ಕಾರನ್ನ 15 ಆಗಸ್ಟ್ 2023 ರಂದು ದಕ್ಷಿಣ ಆಫ್ರಿಕಾದಲ್ಲಿ ಪರಿಚಯಿಸಲಾವುದು. ಅದರ ಆರಂಭಿಕ ಬೆಲೆಯನ್ನು ಅಲ್ಲಿ ಪ್ರಕಟಿಸಲಾಗುವುದು. ಆದರೆ ಇದು ಭಾರತದಲ್ಲಿ 2024 ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಕಂಪನಿಯು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಮಹಿಂದ್ರ ಥಾರ್ ನ 5 ಡೋರ್
ಮಹಿಂದ್ರ ಥಾರ್ ನ 5 ಡೋರ್ ನ ರೂಪಾಂತರವು 2 .2 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯಲಿದೆ. ಇದಲ್ಲದೆ ಇದು 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುತ್ತದೆ .

ಈ ಎರಡು ಎಂಜಿನ್ ಗಳನ್ನೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ನೀಡಲಾಗುವುದು. ಇದರ ಡೀಸೆಲ್ ಎಂಜಿನ್ ಹೆಚ್ಚು ಮಾರಾಟವಾಗುತ್ತದೆ. ಏಕೆಂದರೆ ಅದರಲ್ಲಿ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಬಹುದು. ಇದರ ವೀಲ್ ಬೇಸ್ ಪ್ರಸ್ತುತ ಮಾರಾಟವಾಗುತ್ತಿರುವ ಥಾರ್ ಗಿಂತ 300 ಎಂ ಎಂ ಹೆಚ್ಚು ಉದ್ದವಾಗಿರುತ್ತದೆ.

Join Nadunudi News WhatsApp Group

Price of Mahindra Thar 5 Door
Image Credit: Navbharattimes

ಮಹಿಂದ್ರ ಥಾರ್ ನ 5 ಡೋರ್ ನ ಬೆಲೆ
ನೀವು 1 ಲಕ್ಷ ರೂಪಾಯಿ ಕೊಟ್ಟು ಈ ಕಾರನ್ನು ಖರೀದಿ ಮಾಡಬಹುದು. ಇದು ಪೋರ್ ವೀಲ್ ಡ್ರೈವ್ ಆಯ್ಕೆಯನ್ನು ಪಡೆಯಲಿದ್ದು ಇದು ಅತ್ತ್ಯುತ್ತಮ ಆಫ್ ರೋಡಿಂಗ್ ಎಸ್ ಯು ವಿ ಆಗಿದೆ. ಎವರೆಸ್ಟ್ ವೈಟ್ ಮತ್ತು ಬ್ಲೇಜಿಂಗ್ ಕಂಚಿನ ಎರಡು ಹೊಸ ಬಣ್ಣ ಆಯ್ಕೆಗಳನ್ನು ಸಹ ಸೇರಿಸಲಾಗುತ್ತದೆ. 5 ಡೋರ್ ಥಾರ್ ಬೆಲೆ ₹ 15 ಲಕ್ಷದಿಂದ ಪ್ರಾರಂಭವಾಗುತ್ತದೆ.

Join Nadunudi News WhatsApp Group