ಕೇವಲ 5.9 ಲಕ್ಷ ರೂಪಾಯಿಗೆ ಮನೆಗೆ ತನ್ನಿ ಮಹಿಂದ್ರಾ ಥಾರ್, ಹೊಸ ಆಫರ್ ನೀಡಿದ ಮಹಿಂದ್ರಾ ಕಂಪನಿ.

ಕಾರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆಯಾದರೂ ತಮಗಿಷ್ಟವಾದ ಕಾರನ್ನ ಖರೀದಿ ಮಾಡಬೇಕು ಅನ್ನುವ ಬಯಕೆ ಎಲ್ಲರಿಗೂ ಇದ್ದೆ ಇರುತ್ತದೆ. ಪ್ರಸ್ತುತ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಹಳ ಏರಿಕೆಯಾದ ಕಾರಣ ಜನರು ಕಾರ್ ಖರೀದಿ ಮಾಡುವ ಆಸೆಯನ್ನ ಬದಿಗೊತ್ತಿದ್ದರೆ ಎಂದು ಹೇಳಬಹುದು. ಇನ್ನು ಕಾರು ಕಂಪನಿಗಳಲ್ಲಿ ಬಹಳ ಹೆಸರುವಾಸಿಯಾದ ಕಂಪನಿಗಳಲ್ಲಿ ಮಹಿಂದ್ರಾ ಕಂಪನಿ ಕೂಡ ಒಂದು ಎಂದು ಹೇಳಬಹುದು. ಮಾರುಕಟ್ಟೆಯಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನ ಸೃಷ್ಟಿಮಾಡಿವ ಮಹಿಂದ್ರಾ ಕಂಪನಿ ಈಗಾಗಲೇ ಹಲವು ವಿಧವಾದ ಕಾರುಗಳನ್ನ ಮಾರುಕಟ್ಟೆಗೆ ಕೊಟ್ಟಿದ್ದು ಅದರಲ್ಲಿ ಮಹಿಂದ್ರಾ ಥಾರ್ ಕಾರ್ ಕೂಡ ಒಂದು ಎಂದು ಹೇಳಬಹುದು.

ಹೌದು ಮಹಿಂದ್ರಾ ಥಾರ್ ದೇಶದಲ್ಲಿ ಬಹಳ ಹೆಸರು ಮಾಡಿರುವ ಕಾರ್ ಎಂದು ಹೇಳಬಹುದು. ಯುವಕರನ್ನ ತನ್ನತ್ತ ಸೆಳೆದಿರುವ ಈ ಥಾರ್ ಅದೆಷ್ಟೋ ಜನರು ಇಷ್ಟಪಡತ್ತಿದ್ದು ಮಾರಾಟವಾಗುತ್ತಿರುವ ಹೆಚ್ಚು ಹೆಚ್ಚು ಕಾರ್ ಗಳಲ್ಲಿ ಈ ಮಹಿಂದ್ರಾ ಥಾರ್ ಕೂಡ ಒಂದು ಎಂದು ಹೇಳಬಹುದು. ಇನ್ನು ಈಗ ಥಾರ್ ಕಾರುಗಳನ್ನ ಖರೀದಿ ಮಾಡುವ ಆಸೆ ಹೊಂದಿರುವವರಿಗೆ ಬಂಪರ್ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು. ನಿಮಗೆಲ್ಲ ತಿಳಿದಿರುವ ಹಾಗೆ ಮಹಿಂದ್ರಾ ಥಾರ್ ಬೆಲೆ ಮಾರುಕಟ್ಟೆಯಲ್ಲಿ 18 ಲಕ್ಷಕ್ಕೂ ಅಧಿಕವಾಗಿದೆ, ಆದರೆ ಈಗ ಕೇವಲ 5 .9 ಲಕ್ಷ ರೂಪಾಯಿಯಲ್ಲಿ ಮಹಿಂದ್ರಾ ಥಾರ್ ಕಾರನ್ನ ನಾವು ಮನೆಗೆ ತರಬಹುದಾಗಿದೆ.

mahindra thar car

ಹಾಗಾದರೆ ಏನದು ಆಫರ್ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಹೊಸ ಕಾರಿನ ಬೆಲೆ ಅಧಿಕವಾದ ಕಾರಣ ಹಲವು ಜನರು ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿ ಮಾಡುತ್ತಾರೆ. ಇನ್ನು ಈಗ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಜನರಿಗೆ ಅತೀ ಕಡಿಮೆ ಬೆಲೆಯಲ್ಲಿ ಮಹಿಂದ್ರಾ ಕಂಪನಿಯ ಕಾರುಗಳು ಸಿಗಲಿದೆ. ಇನ್ನು ಇದರ ಕುರಿತು ಮಾಹಿತಿಯನ್ನ ಹಂಚಿಕೊಂಡಿರುವ ಮಹಿಂದ್ರಾ ಕಂಪನಿ ಮಹೀಂದ್ರಾ ಫಸ್ಟ್ ಚಾಯ್ಸ್ ವೆಬ್‌ಸೈಟ್‌ನಲ್ಲಿ ಈ ವಿಷಯವನ್ನ ಹೇಳಿದೆ.

ಕಂಪನಿ ತನ್ನ ವೆಬ್ ಸೈಟ್ ನಲ್ಲಿ ಮಹಿಂದ್ರಾ ಥಾರ್ ಕಾರನ್ನ ಮಾರಾಟಕ್ಕೆ ಇಟ್ಟಿದೆ ಮತ್ತು ಅದರ ಬೆಲೆ ಬಹಳ ಕಡಿಮೆ ಎಂದು ಹೇಳಬಹುದು. ಕಂಪನಿ ತನ್ನ ವೆಬ್ ಸೈಟ್ ನಲ್ಲಿ 2017 ರ ಮಹೀಂದ್ರಾ KUV100 K4 6 ಸೀಟರ್‌ ಕಾರನ್ನ 4 .75 ಲಕ್ಷ ರೂಪಾಯಿಗೆ ಮಾರಾಟಕ್ಕೆ ಇಟ್ಟಿದೆ ಮತ್ತು ಈ ಕಾರು ಕಾರು ಇದುವರೆಗೆ 18200 ಕಿಮೀ ಕ್ರಮಿಸಿದೆ. ಕೆಂಪು ಬಣ್ಣದ ಈ ಕಾರು ಡಿಸೇಲ್ ಎಂಜಿನ್ ಆಗಿದೆ. ಇನ್ನು ಅದೇ ರೀತಿಯಲ್ಲಿ 2015 ಮಹಿಂದ್ರಾ ಥಾರ್ ಕಾರ್ ಮಾರಾಟಕ್ಕೆ ಇದ್ದು ಅದರ ಬೆಲೆ 5 .9 ಲಕ್ಷ ರೂಪಾಯಿ ಆಗಿದೆ. ಈ ಕಾರು ಇದುವರೆಗೆ 52795 ಕಿಮೀ ಕ್ರಮಿಸಿದೆ ಮತ್ತು ಕಾರು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಡೀಸೆಲ್ ಎಂಜಿನ್ ಹೊಂದಿದೆ. ಸ್ನೇಹಿತರೆ ಈ ಮಾಹಿತಿಯನ್ನ ಕಾರು ಖರೀದಿಸುವ ಬಯಕೆ ಹೊಂದಿರುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

mahindra thar car

Join Nadunudi News WhatsApp Group