Mahindra XUV3XO: 21 Km ಮೈಲೇಜ್ ಕೊಡುವ ಈ ಮಹಿಂದ್ರಾ XUV ಕಾರ್ ಬುಕಿಂಗ್ ಆರಂಭ, ಕಡಿಮೆ ಬೆಲೆ.

21 Km ಮೈಲೇಜ್ ಕೊಡುವ ಈ ಮಹಿಂದ್ರಾ ಕಾರಿಗೆ ಹೆಚ್ಚಾಗಿದೆ ಬೇಡಿಕೆ

Mahindra XUV3XO Booking:  ಪ್ರಸ್ತುತ 2024 ರಲ್ಲಿ ದೇಶದ ಜನಪ್ರಿಯ ಕಂಪನಿಗಳು ತನ್ನ ಲೇಟೆಸ್ಟ್ ಮಾಡೆಲ್ ಕಾರ್ ಗಳನ್ನೂ ಪರಿಚಯಿಸಲು ತಯಾರಾಗಿವೆ. ಸದ್ಯ ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ MAHINDRA ಇದೀಗ 2024 ರ ಬಹುನಿರೀಕ್ಷಿತ Mahindra XUV3XO ಅನ್ನು ಲಾಂಚ್ ಮಾಡಿದೆ.

ಹೊಸ ಕಾರ್ ಖರೀದಿಸುವ ಯೋಜನೆ ಹಾಕಿಕೊಂಡವರಿಗೆ ಇದೀಗ Mahindra XUV3XO ಮಾದರಿಯು ಆಯ್ಕೆಗೆ ಸಿಗಲಿದೆ. ಕಂಪನಿಯು ನೂತನವಾಗಿ ಪರಿಚಯಿಸಲಿರುವ Mahindra XUV3XO ಮಾದರಿಯು ಅತ್ಯಾಧುನಿಕ ಫೀಚರ್ ನೊಂದಿಗೆ ಬರಲಿದೆ. ಇದೀಗ ನಾವು Mahindra XUV3XO ಮಾದರಿಯ ಫೀಚರ್, ಬೆಲೆ, ಮೈಲೇಜ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

mahindra xuv 3x0 price and mileage
Image Credit: Original Source

21 Km ಮೈಲೇಜ್ ಕೊಡುವ ಈ ಮಹಿಂದ್ರಾ XUV ಕಾರ್ ಬುಕಿಂಗ್ ಆರಂಭ
ಕಂಪನಿಯು ಇತ್ತೀಚೆಗಷ್ಟೇ ತನ್ನ ಬಹುನಿರೀಸ್ಖಿತ Mahindra XUV3XO SUV ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಮೇ 15 ರಿಂದ ಗ್ರಾಹಕರು Mahindra XUV3XO ಕಾರ್ ನ ಬುಕಿಂಗ್ ಅನ್ನು ಮಾಡಬಹುದು. ಹೊಸ ಮಹೀಂದ್ರಾ XUV 3XO ಖರೀದಿಸಲು ಬಯಸುವ ಗ್ರಾಹಕರು ಬುಕಿಂಗ್‌ ಗಾಗಿ ಕಂಪನಿಯ ಅಧಿಕೃತ ವೆಬ್‌ ಸೈಟ್ ಅಥವಾ ಹತ್ತಿರದ ಡೀಲರ್‌ ಶಿಪ್‌ ಗೆ ಭೇಟಿ ನೀಡಬಹುದು. ಈ ಎಸ್‌ಯುವಿಯನ್ನು ಬುಕ್ ಮಾಡಲು ಖರೀದಿದಾರರು ಮುಂಗಡವಾಗಿ ರೂ. 21,000 ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ. ಕೇವಲ 21 ಸಾವಿರದಲ್ಲಿ ನೀವು ಈ ಹೊಸ ಮಾದರಿಯನ್ನು ಖರೀದಿಸಬಹುದು.

Mahindra ಕಂಪನಿಯು ಲೇಟೆಸ್ಟ್ ಮಾಡೆಲ್ Mahindra XUV3XO ಕಾರು ಪನೋರಮಿಕ್ ಸನ್‌ ರೂಫ್ ಅನ್ನು ಒಳಗೊಂಡಿದೆ. ಇದಲ್ಲದೆ ಹೊಸ ಕಾರು ಹಳೆಯ XUV 3OO ಗಿಂತ ವಿಭಿನ್ನವಾದ ಡ್ಯಾಶ್‌ ಬೋರ್ಡ್ ಅನ್ನು ಹೊಂದಿರಲಿದೆ. ಮಹಿಂದ್ರಾ XUV 3XO ಫ್ರೀ ಸ್ಟ್ಯಾಂಡಿಂಗ್ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಕಾರು 5 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಕಾರಿನ ಪ್ರಮುಖ ಆಕರ್ಷಣೆ ಎಂದರೆ ಪನೋರಮಿಕ್ ಸನ್ ರೂಫ್. ಈ ಸನ್‌ ರೂಫ್ 4 ಮೀಟರ್‌ ಗಿಂತಲೂ ದೊಡ್ಡದಾಗಿದೆ.

details about mahindra xuv 3x0
Image Credit: Original Source

ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್
ಕಂಪನಿಯು ಹೊಸ SUV ಯಲ್ಲಿ ಡ್ಯುಯಲ್ ಟೋನ್ ಅನ್ನು ನೀಡುತ್ತದೆ, ಜೊತೆಗೆ ಪಿಯಾನೋ ಕಪ್ಪು ಫಿನಿಶ್ ಹೊಂದಿದೆ. ಹೊಸ XUV 3XO ಪೆಟ್ರೋಲ್ ಮತ್ತು ಡೀಸೆಲ್ ಪವರ್‌ ಟ್ರೇನ್‌ ಗಳೊಂದಿಗೆ ಲಭ್ಯವಿದೆ. ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಗರಿಷ್ಠ ಶಕ್ತಿ ಮತ್ತು 200 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಇನ್ನು 1.2-ಲೀಟರ್ TGDI ಟರ್ಬೊ ಪೆಟ್ರೋಲ್ ಎಂಜಿನ್ 130 PS ಪವರ್ ಮತ್ತು 250 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇನ್ನೊಂದು 1.5-ಲೀಟರ್ ಡೀಸೆಲ್ ಎಂಜಿನ್ 117 PS ಪವರ್ ಮತ್ತು 300 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ. ಇನ್ನು ಪೆಟ್ರೋಲ್ ಮಾದರಿಗಳು 17.96 ರಿಂದ 20.1 kmpl ಮೈಲೇಜ್ ನೀಡಿದರೆ, ಡೀಸೆಲ್ ರೂಪಾಂತರಗಳು 20.6 ರಿಂದ 21.2 kmpl ಮೈಲೇಜ್ ನೀಡುತ್ತದೆ.

mahindra xuv 3x0 booking
Image Credit: Original Source

Join Nadunudi News WhatsApp Group