Mahindra XUV3XO: 8 ಲಕ್ಷಕ್ಕೆ ಲಾಂಚ್ ಆಯಿತು ಸನ್ ರೂಫ್ ಇರುವ ಪ್ರೀಮಿಯಂ ಕಾರ್, ಬಡವರಿಗಾಗಿ ಈ ಕಾರ್.

8 ಲಕ್ಷಕ್ಕೆ ಲಾಂಚ್ ಆಯಿತು ಸನ್ ರೂಫ್ ಇರುವ ಪ್ರೀಮಿಯಂ ಕಾರ್

Mahindra XUV3XO Special Feature: ದೇಶಿಯ ಮಾರುಕಟ್ಟೆಯಲ್ಲಿ SUV ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮಹಿಂದ್ರಾ ಕಂಪನಿಯ XUV 300 ಲಾಂಚ್ ಆಗಿದ್ದು, ಈ ಮಾದರಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು.

ಹೊಸ SUV ಖರೀದಿಸುವ ಯೋಜನೆಯಲ್ಲಿರುವವರು ಸದ್ಯ XUV300 ಅನ್ನು ಆಯ್ಕೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ನೂತನ ಮಾದರಿಯು ಸೇಫ್ಟಿ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಹೆಚ್ಚಿನ ಸುರಕ್ಷತಾ ಫೀಚರ್, ಅತ್ಯತ್ತಮ ಕಾರ್ಯಕ್ಷಮತೆ ಹೊಂದಿರುವ Mahindra XUV300 ಬಗ್ಗೆ ಹೆಚ್ಚಿನ ವಿವರ ತಿಳಿಯಲು ಈ ಲೇಖನವನ್ನು ಓದಿ.

Mahindra XUV3XO Special Feature
Image Credit: Live Mint

8 ಲಕ್ಷಕ್ಕೆ ಲಾಂಚ್ ಆಯಿತು ಸನ್ ರೂಫ್ ಇರುವ ಪ್ರೀಮಿಯಂ ಕಾರ್
ಕಂಪನಿಯು ಇತ್ತೀಚೆಗಷ್ಟೇ ತನ್ನ ಬಹುನಿರೀಸ್ಖಿತ Mahindra XUV3XO SUV ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. Mahindra ಕಂಪನಿಯು ಲೇಟೆಸ್ಟ್ ಮಾಡೆಲ್ Mahindra XUV3XO ಕಾರು ಪನೋರಮಿಕ್ ಸನ್‌ ರೂಫ್ ಅನ್ನು ಒಳಗೊಂಡಿದೆ. ಇದಲ್ಲದೆ ಹೊಸ ಕಾರು ಹಳೆಯ XUV 3OO ಗಿಂತ ವಿಭಿನ್ನವಾದ ಡ್ಯಾಶ್‌ ಬೋರ್ಡ್ ಅನ್ನು ಹೊಂದಿರಲಿದೆ.

ಮಹಿಂದ್ರಾ XUV 3XO ಫ್ರೀ ಸ್ಟ್ಯಾಂಡಿಂಗ್ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಕಾರು 5 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಕಾರಿನ ಪ್ರಮುಖ ಆಕರ್ಷಣೆ ಎಂದರೆ ಪನೋರಮಿಕ್ ಸನ್ ರೂಫ್. ಈ ಸನ್‌ ರೂಫ್ 4 ಮೀಟರ್‌ ಗಿಂತಲೂ ದೊಡ್ಡದಾಗಿದೆ. ಇನ್ನು XUV3XO ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದೆ.

ಹೆಚ್ಚುವರಿಯಾಗಿ, ಹೊಸ ಮಹೀಂದ್ರ ಸಬ್‌ ಕಂಪ್ಯಾ SUV 6 ಏರ್‌ ಬ್ಯಾಗ್‌ ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ರೇಕ್ ಡಿಸ್ಕ್ ವೈಪಿಂಗ್ ಅನ್ನು ಪಡೆಯುತ್ತದೆ. ಇದು ರೋಲ್ ಓವರ್ ಮಿಟಿಗೇಶನ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಸಹ ಪಡೆಯುತ್ತದೆ.

Join Nadunudi News WhatsApp Group

Mahindra XUV3XO Mileage
Image Credit: Team-bhp

ಬಡವರಿಗಾಗಿ ಈ ಕಾರ್ ಬೆಸ್ಟ್
ಕಂಪನಿಯು ಹೊಸ SUV ಯಲ್ಲಿ ಡ್ಯುಯಲ್ ಟೋನ್ ಅನ್ನು ನೀಡುತ್ತದೆ, ಜೊತೆಗೆ ಪಿಯಾನೋ ಕಪ್ಪು ಫಿನಿಶ್ ಹೊಂದಿದೆ. ಹೊಸ XUV 3XO ಪೆಟ್ರೋಲ್ ಮತ್ತು ಡೀಸೆಲ್ ಪವರ್‌ ಟ್ರೇನ್‌ ಗಳೊಂದಿಗೆ ಲಭ್ಯವಿದೆ. ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಗರಿಷ್ಠ ಶಕ್ತಿ ಮತ್ತು 200 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಈ ನೂತನ ಮಾದರಿಯು 7 .89 ಲಕ್ಷ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ.

ಇನ್ನು 1.2-ಲೀಟರ್ TGDI ಟರ್ಬೊ ಪೆಟ್ರೋಲ್ ಎಂಜಿನ್ 130 PS ಪವರ್ ಮತ್ತು 250 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇನ್ನೊಂದು 1.5-ಲೀಟರ್ ಡೀಸೆಲ್ ಎಂಜಿನ್ 117 PS ಪವರ್ ಮತ್ತು 300 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ. ಇನ್ನು ಪೆಟ್ರೋಲ್ ಮಾದರಿಗಳು 17.96 ರಿಂದ 20.1 kmpl ಮೈಲೇಜ್ ನೀಡಿದರೆ, ಡೀಸೆಲ್ ರೂಪಾಂತರಗಳು 20.6 ರಿಂದ 21.2 kmpl ಮೈಲೇಜ್ ನೀಡುತ್ತದೆ.

Mahindra XUV3XO Price In India
Image Credit: Financialexpress

Join Nadunudi News WhatsApp Group