Mahindra XUV400: 456 Km ಮೈಲೇಜ್ ಕೊಡುವ ಈ ಮಹಿಂದ್ರಾ ಕಾರ್ ನ ಮೇಲೆ ಭರ್ಜರಿ 5 ಲಕ್ಷ ರೂ ಡಿಸ್ಕೌಂಟ್, ಇಂದೇ ಬುಕ್ ಮಾಡಿ

ಈ ಮಹಿಂದ್ರಾ ಕಾರ್ ನ ಮೇಲೆ ಭರ್ಜರಿ 5 ಲಕ್ಷ ರೂ ಡಿಸ್ಕೌಂಟ್

Mahindra XUV400 Discount: ಮಾರುಕಟ್ಟೆಯಲ್ಲಿ Electric ಮಾದರಿ ವೇಗವಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ.ಭಾರತೀಯ ಆಟೋ ವಲಯದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ಕಾರ್ ಗಳು ಹೆಚ್ಚಿನ ಸೇಲ್ ಕಾಣುತ್ತಿವೆ. ಇನ್ನು ಗ್ರಾಹಕರ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ವಿವಿಧ ಪ್ರತಿಷ್ಠಿತ ಕಂಪನಿಗಳು ವಿವಿಧ ಮಾದರಿಯಲ್ಲಿ ಎಲೆಕ್ಟ್ರಿಕ್ ಕಾರ್ ಗಳನ್ನೂ ಪರಿಚಯಿಸುತ್ತಿವೆ.

ಇನ್ನು Petrol, Diesel, CNG ಚಾಲಿತ ವಾಹನಗಳಿಗೆ ಹೋಲಿಸಿದರೆ ಕೆಲ Electric ಮಾದರಿ ಹೆಚ್ಚಿನ Mileage ನೀಡಲು ಹೆಸರುವಾಸಿಯಾಗಿದೆ. ಜನರು ವಾಹನಗಳನ್ನು ಖರೀದಿಸುವ ಹೆಚ್ವಿಚಾಗಿ ಮೈಲೇಜ್ ಬಗ್ಗೆ ಗಮನ ಕೊಡುತ್ತಾರೆ. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಮೊದಲು ಆದ್ಯತೆ ನೀಡುತ್ತಾರೆ. ಇದೀಗ ಒಂದೇ ಚಾರ್ಜ್ ನಲ್ಲಿ 450 ಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುವ ಮಹಿಂದ್ರಾ ಕಂಪನಿಯ Electric Car ನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

Mahindra XUV 400 Price In India
Image Credit: TV9 Hindi

456 Km ಮೈಲೇಜ್ ಕೊಡುವ ಈ ಮಹಿಂದ್ರಾ ಕಾರ್ ಗೆ ಹೆಚ್ಚಿದೆ ಬೇಡಿಕೆ
ಸದ್ಯ ಮಹಿಂದ್ರಾ ಕಂಪನಿಯು 5 ಸೀಟರ್ ವಿಭಾಗದಲ್ಲಿ ತನ್ನ ಹೊಚ್ಚ ಹೊಸ Mahindra XUV400 ಅನ್ನು ಲಾಂಚ್ ಮಾಡಲು ನಿರ್ಧರಿಸಿದೆ. ಮಹೀಂದ್ರಾ XUV400 ಎಂಬುದು ಮಹೀಂದ್ರಾದ ಎಲೆಕ್ಟ್ರಿಕ್ SUV ಗಳ ಜಗತ್ತಿಗೆ ಅತ್ಯಾಕರ್ಷಕ ಪ್ರವೇಶವಾಗಿದೆ. ಥ್ರಿಲ್ಲಿಂಗ್ ರೈಡ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ Mahindra XUV400 ಬಗ್ಗೆ ಈ ಲೇಖನದಲ್ಲಿ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

ನೀವು Mahindra XUV400 ನಲ್ಲಿ ಎರಡು ಬ್ಯಾಟರಿ ಆಯ್ಕೆಗಳನ್ನು ಪಡೆಯುತ್ತೀರಿ. ನಿಮ್ಮ ಚಾಲನಾ ಅಗತ್ಯಗಳಿಗೆ ಸೂಕ್ತವಾದ ಒಂದನ್ನು ಆರಿಸಿಕೊಳ್ಳಬಹುದು. ಚಿಕ್ಕ ಬ್ಯಾಟರಿಯಲ್ಲಿ ಒಮ್ಮೆ ಚಾರ್ಜ್ ಮಾಡಿದರೆ 375 ಕಿ.ಮೀ ವರೆಗೆ ಹಾಗೂ ದೊಡ್ಡ ಬ್ಯಾಟರಿಯಲ್ಲಿ ಒಂದೇ ಚಾರ್ಜ್‌ನಲ್ಲಿ 456 ಕಿಮೀ ವರೆಗೆ ಮೈಲೇಜ್ ಅನ್ನು ಪಡೆಯಬಹುದು. ನೀವು ಈ ನೂತನ ಮಾದರಿಯನ್ನು ಬಾರಿ ಡಿಸ್ಕೌಂಟ್ ನಲ್ಲಿ ಖರೀದಿಸಬಹುದು.

Mahindra XUV 400 Mileage
Image Credit: Cartrade

ಮಹಿಂದ್ರಾ ಕಾರ್ ನ ಮೇಲೆ ಭರ್ಜರಿ 5 ಲಕ್ಷ ರೂ ಡಿಸ್ಕೌಂಟ್
ಇತರ ಕೆಲವು ಎಲೆಕ್ಟ್ರಿಕ್ ಕಾರುಗಳಿಗಿಂತ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಎಲೆಕ್ಟ್ರಿಕ್ ಸನ್‌ ರೂಫ್, ಸಂಗೀತ ಮತ್ತು ನ್ಯಾವಿಗೇಷನ್‌ ಗಾಗಿ ಟಚ್‌ ಸ್ಕ್ರೀನ್ ಮತ್ತು ನಿಮ್ಮ ಫೋನ್‌ ಗೆ ಸಂಪರ್ಕಿಸುವ ಸ್ಮಾರ್ಟ್ ಕಾರ್ ತಂತ್ರಜ್ಞಾನವನ್ನು Mahindra XUV400 ನಲ್ಲಿ ನೋಡಬಹುದು. ಇದು ನಿಮ್ಮ ಮನಸ್ಥಿತಿಗೆ ಹೊಂದಿಕೆಯಾಗಲು ವಿಭಿನ್ನ ಡ್ರೈವಿಂಗ್ ಮೋಡ್‌ ಗಳನ್ನು ಸಹ ಹೊಂದಿದೆ.

Join Nadunudi News WhatsApp Group

ಇನ್ನು ಮಾರುಕಟ್ಟೆಯಲ್ಲಿ Mahindra XUV400 ಬೆಲೆಗಳು ಸುಮಾರು ರೂ. 16 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಇನ್ನು ನೀವು Mahindra XUV400 ರ ಹಳೆಯ ಮಾದರಿಯನ್ನು ಕೂಡ ಖರೀದಿಸಬಹುದು. ಇನ್ನು XUV400 ನ ಹಳೆಯ ಆವೃತ್ತಿಯು ಕೆಲವು ಅದ್ಭುತ ರಿಯಾಯಿತಿಗಳನ್ನು ಹೊಂದಿದ. ಇನ್ನು ಆಕರ್ಷಕ ಹಣಕಾಸು ಯೋಜನೆಯ ಮೂಲಕ ಕೂಡ ನೀವು Mahindra XUV400 ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Mahindra XUV 400 Features
Image Credit: Cartrade

Join Nadunudi News WhatsApp Group