XUV700 Electric: ಒಂದೇ ಚಾರ್ಜ್ ನಲ್ಲಿ 400 Km ಚಲಿಸುವ ಕಾರ್ ಲಾಂಚ್ ಮಾಡಲು ಮುಂದಾದ ಮಹಿಂದ್ರಾ, ಆಕರ್ಷಕ ಫೀಚರ್

ಸಿಂಗಲ್ ಚಾರ್ಜ್ ನಲ್ಲಿ 400 Km ರೇಂಜ್ ನ XUV ಲಾಂಚ್ ಮಾಡಲು ಮುಂದಾದ ಮಹಿಂದ್ರಾ

Mahindra XUV700 Electric: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ SUV ಗಳು ಲಗ್ಗೆ ಇಡುತ್ತಿವೆ. ಎಸ್ ಯುವಿ ವಿಭಾಗದ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ವಿಭಿನ್ನ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇನ್ನು ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ Mahindra ತನ್ನ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ವಿಭಿನ್ನ ರೂಪಾಂತರದಲ್ಲಿ ಬಿಡುಗಡೆ ಮಾಡುತ್ತಿದೆ. ಮಹಿಂದ್ರಾ ಕಂಪನಿಯ ಕಾರ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತದೆ. ಇದೀಗ ಕಂಪನಿಯು ಹೊಸ ಮಾದರಿಯ ಎಸ್ ಯುವಿಯನ್ನು ಪರಿಚಯಿಸಿದೆ. ಈ ನೂತನ ಮಾದರಿ ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸಲಿದೆ.

Mahindra XUV700 Electric SUV
Image Credit: Evcarfamily

ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ Mahindra XUV700
ಕಾರ್ ತಯಾರಕ ಕಂಪನಿಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ MAHINDRA ಸದ್ಯ SUV ವಿಭಾಗದಲ್ಲಿ ಹೊಚ್ಚ ಹೊಸ XUV700 ಅನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈ XUV700 ಮಾದರಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ರೂಪಾಂತರದಲ್ಲಿ ಲಭ್ಯವಾಗಲಿದು, ಗ್ರಾಹಕರ ಆಯ್ಕೆಗೆ ಹೊಸ ಎಲೆಕ್ಟ್ರಿಕ್ ಮಾದರಿ ಸೇರಿಕೊಳ್ಳಲಿದೆ.

Mahindra XUV700 Electric SUV ವಿಶೇಷವೆಂದರೆ ಇದು ಸಿಂಗಲ್ ಮತ್ತು ಡ್ಯುಯಲ್-ಮೋಟಾರ್ ಲೇಔಟ್ ಆಯ್ಕೆಗಳಲ್ಲಿ ಬರಲಿದೆ. ಬೇಸ್ ವೇರಿಯಂಟ್ ಟೆಸ್ಟಿಂಗ್ ಮ್ಯೂಲ್ ಒಂದೇ ಮೋಟಾರು FWD ಸೆಟಪ್ ಅನ್ನು ಒಳಗೊಂಡಿರುತ್ತದೆ. ಹಿಂದಿನ ಮಾದರಿಗಿಂತ ಹೆಚ್ಚಿನ ಫೀಚರ್ ಗಳನ್ನೂ ಅಳವಡಿಸಲಾಗಿದೆ. ಈ SUV ಯಲ್ಲಿ ಸುಮಾರು 60 kWh ನ ಚಿಕ್ಕ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.

Mahindra XUV700 Electric SUV Price
Image Credit: Zigwheels

Mahindra XUV700 Electric SUV ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದುಕೊಳ್ಳಿ
ಮಹೀಂದ್ರಾ XUV700 ಎಲೆಕ್ಟ್ರಿಕ್ INGLO ಪ್ಲಾಟ್‌ ಫಾರ್ಮ್ ಅನ್ನು ಬಳಸುವ ನಿರೀಕ್ಷೆಯಿದೆ ಮತ್ತು 2025 ಆಟೋ ಎಕ್ಸ್‌ ಪೋದಲ್ಲಿ ಬಿಡುಗಡೆಯಾಗಬಹುದು. XUV700 ಎಲೆಕ್ಟ್ರಿಕ್‌ ನ ಒಳಭಾಗವು ಟ್ರಿಪಲ್ ಹಾರಿಜಾಂಟಲ್ ಸ್ಕ್ರೀನ್ ಲೇಔಟ್, ವೆಂಟಿಲೇಟೆಡ್ ಸೀಟ್‌ ಗಳು ಮತ್ತು 19-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದ್ದು, ಹೆಚ್ಚು ಆಕರ್ಷಣೀಯವಾಗಿರಲಿದೆ. ಕಂಪನಿಯು ಈ ನೂತನ ಮಾದರಿಯಲ್ಲಿ 16.51 ಲಕ್ಷ ಆರಂಭಿಕ ಬೆಲೆಯಲ್ಲಿ 24-25 ರಲ್ಲಿ ಬಿಡುಗಡೆ ಮಾಡಲಿದೆ. ಇನ್ನು Mahindra XUV700 Electric SUV 400 ಕಿಲೋಮೀಟರ್ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group