Vandana Yojana: ಮೋದಿ ಸರ್ಕಾರದ ಈ ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 1000 ರೂ, ಇಂದೇ ಅರ್ಜಿ ಹಾಕಿ.

ಮೋದಿ ಸರ್ಕಾರದ ಈ ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 1000 ರೂ

Mahtari Vandana Yojana: ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿರಿಯ ನಾಗರಿಕರು, ಮಹಿಳೆಯರು, ರೈತರು ಸೇರಿದಂತೆ ವಿವಿಧ ವರ್ಗದ ಜನರಿಗೆ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಜನಸಾಮಾನ್ಯರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಜನರಿಗೆ ಸರ್ಕಾರದ ಎಲ್ಲ ಯೋಜನೆಗಳು ಸಾಕಷ್ಟು ಅನುಕೂಲವನ್ನು ತಂದುಕೊಟ್ಟಿದೆ.

ಸದ್ಯ ಈ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರಿಗೆ ಆರ್ಥಿಕವಾಗಿ ಸಹಾಯಧನ ನೀಡಲು ಸರ್ಕಾರವು ವಿಶೇಷ ಯೋಜನೆಯನ್ನು ಪರಿಚಯಿಸಿದೆ. ರಾಜ್ಯದ ಮಹಿಳೆಯರು ಈ ವಿಶೇಷ ಯೋಜನೆಯಡಿ ಲಾಭವನ್ನು ಪಡೆಯಬಹುದು.

Mahtari Vandana Yojana
Image Credit: Hindi Currentaffairs Adda247

ಮಹಿಳೆಯರಿಗಾಗಿ ವಿಶೇಷ ಯೋಜನೆ ಜಾರಿ
ಛತ್ತೀಸ್ ಗಡ ಸರ್ಕಾರ ಮಹಿಳೆಯರಿಗಾಗಿ ಮಹತಾರಿ ವಂದನ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಮಹತಾರಿ ವಂದನ್ ಯೋಜನೆಯ ಮೊದಲ ಕಂತು ಇಂದು ಬಿಡುಗಡೆಯಾಗಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಛತ್ತೀಸ್ ಗಡ ರಾಜ್ಯದ ಮಹಿಳೆಯರು ಮಹತಾರಿ ವಂದನ ಯೋಜನೆಯಡಿ ಮಾಸಿಕ ಹಣವನ್ನು ಪಡೆದುಕೊಳ್ಳಬಹುದು. ಮಹಿಳಾ ಸಬಲೀಕರಣದ ಗುರಿ ಹೊಂದಿರುವ ರಾಜ್ಯ ಸರ್ಕಾರ ಮಹಿಳೆಯರಿಗಾಗಿಯೇ ಈ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ.

ಮೋದಿ ಸರ್ಕಾರದ ಈ ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 1000 ರೂ
ಛತ್ತೀಸ್‌ ಗಢದಲ್ಲಿ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ ಮಹತಾರಿ ವಂದನ್ ಯೋಜನೆ ಕುರಿತು ಮಾತನಾಡಿತ್ತು. ನಂತರ ಅದನ್ನು ಪೂರ್ಣಗೊಳಿಸುವ ಭರವಸೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು. ಈಗ ನಿಖರವಾಗಿ 100 ದಿನಗಳ ನಂತರ, ಛತ್ತೀಸ್‌ ಗಢ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಪ್ರಾರಂಭಿಸಿದೆ.

Mahtari Vandana Yojana Application
Image Credit: NDTV

ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಆರ್ಥಿಕ ಮೊತ್ತವನ್ನು ನೀಡಲಾಗುತ್ತದೆ. ಅಂದರೆ ಒಂದು ವರ್ಷದಲ್ಲಿ ಮಹಿಳೆಯೊಬ್ಬರಿಗೆ ಸರ್ಕಾರ ರೂ. 12000 ಆರ್ಥಿಕ ನೆರವು ನೀಡುತ್ತದೆ. ಅಂದರೆ ಮಾರ್ಚ್ 10 ರಂದು ಈ ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರ ಖಾತೆಗಳಿಗೆ ಸಾವಿರ ರೂಪಾಯಿಗಳ ಆರ್ಥಿಕ ಮೊತ್ತವನ್ನು ಕಳುಹಿಸಲಾಗುವುದು. ಛತ್ತೀಸ್‌ ಗಢದ ಹಣಕಾಸು ಸಚಿವ ಗೋಪಿ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Mahtari Vandana Yojana 2024
Image Credit: Banglawikibio

Join Nadunudi News WhatsApp Group