Call Without Sim Card: Jio ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್, ಇನ್ಮುಂದೆ ಸಿಮ್ ಕಾರ್ಡ್ ಇಲ್ಲದೆ ಈ ರೀತಿ ಕರೆ ಮಾಡಬಹುದು

ಇದೀಗ ಸಿಮ್ ಕಾರ್ಡ್ ಇಲ್ಲದೆ ಕೂಡ ಕರೆ ಮಾಡಬಹುದಾಗಿದೆ.

Make A Phone Call Without Sim Card: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಾಗುತ್ತಿದ್ದಾರೆ. ಮೊಬೈಲ್ ಗಳ ಮೇಲಿನ ಬೇಡಿಕೆ ಕೂಡ ಹೆಚ್ಚುತ್ತಿದೆ. ಮೊಬೈಲ್ ಬಳಕೆದಾರರು ಇನ್ನು ಸಿಮ್ (Sim Card) ಗಳನ್ನೂ ಬಳಸಲು ಯಾವುದೇ ಮಿತಿ ಇರುವುದಿಲ್ಲ. ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಗಳನ್ನೂ ಬೇಕಾದರೂ ಬಳಸಬಹುದು.

ಆದರೆ ಇದೀಗ ಸಿಮ್ ಕಾರ್ಡ್ ಇಲ್ಲದೆ ಕೂಡ ಕರೆ ಮಾಡಬಹುದಾಗಿದೆ. ಇದೀಗ ಸಿಮ್ ಕಾರ್ಡ್ ಇಲ್ಲದೆ ಹೇಗೆ ಕರೆ ಮಾಡಲು ಸಾಧ್ಯ…? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಇದೀಗ ನಾವು ನಿಮಗೆ ಸಿಮ್ ಕಾರ್ಡ್ ಇಲ್ಲದೆ ಹೇಗೆ ಕರೆ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

Make A Phone Call Without Sim Card
Image Credit: Airtel

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಬಹುದೇ…?
ಸಿಮ್‌ ಕಾರ್ಡ್‌ ಇಲ್ಲದೆ ಕರೆ ಮಾಡಲು ಅವಕಾಶ ಇದೆ. ಹೌದು ಸಿಮ್ ಇಲ್ಲದೆ ಜಿಯೋ ಏರ್ ಫೈಬರ್ ಕನೆಕ್ಷನ್ ನಿಂದ ಕರೆ ಮಾಡಬಹುದು. ಅದು ಕೂಡಾ ಅನಿಯಮಿತ ವಾಯ್ಸ್ ಕರೆ. ಹಾಗಾದರೆ ನಾವೀಗ ಜಿಯೋ ಏರ್ ಫೈಬರ್ ಮೂಲಕ ಕರೆ ಮಾಡುವುದು ಹೇಗೆ…? ಮತ್ತು ಜಿಯೋ ಏರ್ ಫೈಬರ್ ನ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಜಿಯೋ ಏರ್ ಫೈಬರ್ ಮೂಲಕ ಕರೆ ಮಾಡುವುದು ಹೇಗೆ…?
ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ JioJoin Application ಅನ್ನು Instal ಮಾಡಿಕೊಳ್ಳಬೇಕು. ತದ ನಂತರ ಆ App ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ರಿಜಿಸ್ಟರ್ ಆಗಬೇಕು. ರಿಜಿಸ್ಟರ್ ಆದ ಬಳಿಕ ಜಿಯೋ ಏರ್‌ ಫೈಬರ್‌ ನಂಬರ್‌ ಸಿಗಲಿದೆ. ನಂತರ ಬಳಕೆದಾರರು ವಾಯ್ಸ್ ಕರೆ ಮಾಡಬಹುದು. ಇದಲ್ಲದೆ ನಿಮ್ಮ ಫೋನ್ ಜಿಯೋ ಏರ್‌ ಫೈಬರ್‌ ಜೊತೆಗೆ ವೈಫೈ ಕನೆಕ್ಟ್‌ ಆಗಿರಬೇಕು.

Jio Airfiber Recharge Plan
Image Credit: Punenow

ಜಿಯೋ ಏರ್ ಫೈಬರ್ ನ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ
*ಜಿಯೋ ಏರ್ ಫೈಬರ್ ನ 599 ರೂಪಾಯಿ ಯೋಜನೆ 30mpbs ವೇಗದಲ್ಲಿ ಕೆಲಸ ಮಾಡಲಿದೆ. ಇದು 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಇದರ ಜೊತೆಗೆ ಡಿಸ್ನಿ +ಹಾಟ್ ಸ್ಟಾರ್, Zee 5, ಜಿಯೋ ಸಿನಿಮಾ, ಸೇರಿದಂತೆ 14 OTT ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ. ಜೊತೆಗೆ 14 Apps ಸೇವೆ ಪಡೆದಿದೆ.

Join Nadunudi News WhatsApp Group

*ಜಿಯೋ ಏರ್ ಫೈಬರ್ ನ 899 ರೂಪಾಯಿ ಯೋಜನೆ 100mpbs ವೇಗದಲ್ಲಿ ಕೆಲಸ ಮಾಡಲಿದೆ. ಇದು 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಇದರ ಜೊತೆಗೆ ಡಿಸ್ನಿ +ಹಾಟ್ ಸ್ಟಾರ್, Zee 5, ಜಿಯೋ ಸಿನಿಮಾ, ಸೇರಿದಂತೆ 14 OTT ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ.

*ಜಿಯೋ ಏರ್ ಫೈಬರ್ ನ 1199 ರೂಪಾಯಿ ಯೋಜನೆ 550+ ಡಿಜಿಟಲ್ ಕನೆಕ್ಷನ್‌ ಅನ್ನು ಒಳಗೊಂಡಿದೆ. ಹಾಗೆಯೆ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮಿಯಂ , ಡಿಸ್ನಿ +ಹಾಟ್ ಸ್ಟಾರ್, Zee 5, ಸೇರಿದಂತೆ 14 OTT ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ.

Jio Airfiber Max Recharge Plan
Image Credit: Jagran

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ ಪ್ಲಾನ್ ಗಳ ಬಗ್ಗೆ ಮಾಹಿತಿ
*ಜಿಯೋ ಏರ್ ಫೈಬರ್ ಮ್ಯಾಕ್ಸ್ ನ 1,499 ರೂಪಾಯಿ ಯೋಜನೆ 300mpbs ಸ್ಪೀಡ್ ನಲ್ಲಿ ಕೆಲಸ ಮಾಡಲಿದೆ. ಇದು 550+ ಡಿಜಿಟಲ್ ಕನೆಕ್ಷನ್‌ ಅನ್ನು ಒಳಗೊಂಡಿದೆ. ಇದರೊಂದಿಗೆ 14 Apps ಸೇವೆ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮಿಯಂ ಸೇವೆ ಪಡೆದುಕೊಂಡಿದೆ.

*ಜಿಯೋ ಏರ್ ಫೈಬರ್ ಮ್ಯಾಕ್ಸ್ ನ 2,499 ರೂಪಾಯಿ ಯೋಜನೆ 500mpbs ವೇಗದಲ್ಲಿ ಕೆಲಸ ಮಾಡಲಿದೆ. ಇದು 550+ ಡಿಜಿಟಲ್ ಕನೆಕ್ಷನ್‌ ಅನ್ನು ಒಳಗೊಂಡಿದೆ. ಇದರಲ್ಲಿಯೂ ಸಹ 14 Apps ಸೇವೆ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮಿಯಂ ಸೇವೆ ಕಾಣಬಹುದಾಗಿದೆ.

*ಜಿಯೋ ಏರ್ ಫೈಬರ್ ಮ್ಯಾಕ್ಸ್ ನ 3,999 ರೂಪಾಯಿ ಯೋಜನೆ 1000mpbs ವೇಗದಲ್ಲಿ ಕೆಲಸ ಮಾಡಲಿದೆ. ಇದು 550+ ಡಿಜಿಟಲ್ ಕನೆಕ್ಷನ್‌ ಲಭ್ಯವಿದೆ. ಇದಲ್ಲದೆ 14 Apps ಸೇವೆ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮಿಯಂ ಸೇವೆ ದೊರೆಯುತ್ತದೆ.

Join Nadunudi News WhatsApp Group