Malashree: ಈ ಒಂದು ಕಾರಣಕ್ಕೆ ನಟ ವಿಷ್ಣುವರ್ಧನ್ ಜೊತೆ ನಟಿಸಲಿಲ್ಲ ನಟಿ ಮಾಲಾಶ್ರೀ, ಆ ಕಾರಣ ಏನು.

ಕನ್ನಡದ ಟಾಪ್ ನಟಿಯಾಗಿದ್ದ ಮಾಲಾಶ್ರೀ ಅವರು ನಟ ವಿಷ್ಣುವರ್ಧನ್ ಅವರ ಜೊತೆ ನಟನೆ ಮಾಡಲಿಲ್ಲ.

Actress Malashree And Vishnuvardhan: ಕನ್ನಡ ಚಿತ್ರರಂಗದ ಹಿರಿಯ ನಟಿ ಮಾಲಾಶ್ರೀ (Malashri) ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಮಾಲಾಶ್ರೀ ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಅಲ್ಲದೆ ಹೊಸ ಛಾಪು ಮೂಡಿಸಿದ್ದಾರೆ.

ನಟಿ ಮಾಲಾಶ್ರೀ ಕನ್ನಡದ ಹಲವು ಸ್ಟಾರ್ ನಂತರ ಜೊತೆ ತೆರೆ ಹಂಚಿಕೊಂಡಿದ್ದಾರೆ, ಆದರೆ ನಟ ವಿಷ್ಣುವರ್ಧನ್ (Vishnuvardhan) ಅವರ ಜೊತೆ ನಟಿ ಮಾಲಾಶ್ರೀ ಒಂದು ಸಿನಿಮಾದಲ್ಲಿ ಸಹ ನಟಿಸಲಿಲ್ಲ. 

Malashree And Vishnuvardhan
Image Source: Kannada Nade

ಕನ್ನಡದ ಹಿರಿಯ ನಟ ಡಾ. ವಿಷ್ಣುವರ್ಧನ್
ಡಾ. ವಿಷ್ಣುವರ್ಧನ್ ಅವರು ಕನ್ನಡದ ಚಿತ್ರರಂಗದ ಹೆಸರಾಂತ ನಟರಾಗಿದ್ದಾರೆ. ಇವರು ವಿಧಿವಶರಾಗಿದ್ದರು ಸಹ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಚಿರಋಣಿ. ವಿಷ್ಣುವರ್ಶನ್ ನಟನೆಯ ಬಹುತೇಕ ಸಿನಿಮಾಗಳು ಹಿಟ್ ಆಗಿದೆ. ಆದರೆ ನಟಿ ಮಾಲಾಶ್ರೀ ಡಾ. ವಿಷ್ಣುವರ್ಧನ್ ಅವರ ಜೊತೆ ನಟಿಸಲಿಲ್ಲ. ಇದಕ್ಕೆ ಬೇಸರವನ್ನು ಸಹ ನಟಿ ಮಾಲಾಶ್ರೀ ಸಾಕಷ್ಟು ಸಂದರ್ಭದಲ್ಲಿ ಹೊರ ಹಾಕಿದ್ದಾರೆ.

Malashree And Vishnuvardhan
Image Source: Karnataka News media

ನಟಿ ಮಾಲಾಶ್ರೀ ಜೊತೆ ವಿಷ್ಣುವರ್ಧನ್ ನಟಿಸದೆ ಇರುವುದಕ್ಕೆ ಕಾರಣ
ಮಾಲಾಶ್ರೀ ಆಗಿನ ಕಾಲದಲ್ಲಿ ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆಗಿದ್ದು. ಹೀಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಟಿ ಮಾಲಾಶ್ರೀ ಅವರು ನನ್ನ ಜೊತೆ ಮೃಗ ನಟಿಸಿದರು ಸಹ ತುಂಬಾನೇ ಫೇಮಸ್ ಆಗುತ್ತದೆ ಎಂದಿದ್ದರು. ಈ ಮಾತು ವಿಷ್ಣುವರ್ಧನ್ ಅವರ ಕಿವಿಗೆ ಬಿದ್ದ ಕಾರಣ, ನಟಿ ಮಾಲಾಶ್ರೀ ಜೊತೆ ಅವರು ನಟಿಸಲು ಮುಂದಾಗಲಿಲ್ಲವಂತೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ.

ಸದ್ಯ ನಟ ವಿಷ್ಣುವರ್ಧನ್ ಅವರ ಜೊತೆ ನಟಿಸಲು ನಟಿ ಮಾಲಾಶ್ರೀ ಅವರಿಗೆ ಸಿಗದ ಕಾರಣ ಅವರಿಬ್ಬರೂ ಒಟ್ಟಿಗೆ ನಟಿಸಲಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಟಾಪ್ ನಟಿಯಾಗಿದ್ದ ಮಾಲಾಶ್ರೀ ಅವರಿಗೆ ವಿಷ್ಣುವರ್ಧನ್ ಅವರ ಜೊತೆ ನಟಿಸಲು ಸರಿಯಾದ ಅವಕಾಶ ಸಿಕ್ಕಿರಲಿಲ್ಲ.

Join Nadunudi News WhatsApp Group

Malashree And Vishnuvardhan
Image Source: India Today

Join Nadunudi News WhatsApp Group