Manaswini Scheme: ರಾಜ್ಯ ಸರ್ಕಾರದ ಇನ್ನೊಂದು ಸ್ಕೀಮ್, ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 800 ರೂ.

ರಾಜ್ಯ ಸರ್ಕಾರದಿಂದ ಅವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 800 ರೂ.

Manaswini Scheme Details: ಇತ್ತೀಚೆಗಂತೂ ಹಲವು ಯೋಜನೆಯನ್ನು ಸರ್ಕಾರ ಮಹಿಳೆಯರಿಗಾಗಿ ಅಭಿವೃದ್ಧಿ ಪಡಿಸುತ್ತಿದೆ. ಮಹಿಳಾ ಸಬಲೀಕರಣ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಘೋಷಿಸಿದ ರಾಜ್ಯ ಸರ್ಕಾರ ಇದೀಗ ಅವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವಾಗಲು ಹೊಸ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ.  ಅವಿವಾಹಿತ ಮಹಿಳೆಯರಿಗೆ ಪರಿಚಯಿಸಿರುವ ಯೋಜನೆ ಯಾವುದು..? ಮಹಿಳೆಯರಿಗೆ ಈ ಯೋಜನೆಯಡಿ ಎಷ್ಟು ಹಣ ಸಿಗಲಿದೆ…? ಎನ್ನುವುದ ಬಗ್ಗೆ ವಿವರ ಇಲ್ಲಿದೆ.

Manaswini Scheme Money
Image Credit: Thehindu

ರಾಜ್ಯ ಸರ್ಕಾರದ ಇನ್ನೊಂದು ಸ್ಕೀಮ್
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರದ ಈ ಯೋಜನೆಯು 40 ರಿಂದ 64 ವರ್ಷ ಒಳಗಿನ ವಿಚ್ಛೇಧಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಲಭ್ಯವಾಗಲಿದೆ. ಇನ್ನು 2013 ರಲ್ಲಿ ಜಾರಿಗೊಳಿಸಿದ “ಮನಸ್ವಿನಿ ಯೋಜನೆ” (Manaswini Scheme) ಯನ್ನು ಇದೀಗ ಪುನಃ ಜಾರಿಗೆ ತಂದು ಈ ಯೋಜನೆಯಡಿ ವಿಚ್ಛೇದಿತ ಮಹಿಳೆ ಹಾಗೂ ಅವಿವಾಹಿತ ಮಹಿಳೆಯರಿಗೆ ಆರ್ಥಿಕ ನೆರವಾಗುವ ಯೋಜನೆಯನ್ನು ಸರ್ಕಾರ ಹೂಡಿದೆ.

ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 800 ರೂ.
ರಾಜ್ಯ ಸರ್ಕಾರದ ಈ ಮನಸ್ವಿನಿ ಯೋಜನೆಯ ಅಡಿಯಲ್ಲಿ 40 ರಿಂದ 64 ವರ್ಷ ಒಳಗಿನ ವಿಚ್ಛೇದಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಮಾಸಿಕ 800 ರೂ. ನೀಡಲು ಮುಂದಾಗಿದೆ. ಪ್ರತಿ ತಿಂಗಳು ಮಹಿಳೆಯರು 800 ರೂ. ಗಳ ಮಾಸಾಶನವನ್ನು ಪಡೆಯಬಹುದು. ಬಡತನ ರೇಖೆಗಿಂತ ಕೆಳಗಿರುವ ವಿಚ್ಛೇದಿತರು ಅಥವಾ ಅವಿವಾಹಿತ ಮಹಿಳೆಯರು ಮಾತ್ರ ಮನಸ್ವಿನಿ ಯೋಜನೆಯಡಿ ಮಾಸಿಕ 800 ರೂ. ಪಡೆಯಲು ಸಾಧ್ಯವಾಗುತ್ತದೆ. ಈ ಕೆಳಗಿನ ಮುಖ್ಯ ದಾಖಲೆಗಳನ್ನು ನೀಡಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Manaswini Scheme Details
Image Credit: Needsofpublic

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
•ಆದಾಯ ಪ್ರಮಾಣಪತ್ರ,

•ಆಧಾರ್ ಕಾರ್ಡ್,

Join Nadunudi News WhatsApp Group

•ವಿಚ್ಛೇದಿತರು ಅಥವಾ ಅವಿವಾಹಿತರು ಎನ್ನುವುದಕ್ಕೆ ಸ್ವಯಂ ಘೋಷಣಾ ಪ್ರಮಾಣ ಪತ್ರ,

•ಬ್ಯಾಂಕ್ ಖಾತೆಯ ವಿವರ.

Congress Govt Manaswini Scheme
Image Credit: Newsnext

Join Nadunudi News WhatsApp Group