Online Mango: ಪೋಸ್ಟ್ ಮೂಲಕ ಮನೆಯ ಬಾಗಿಲಿಗೆ ಬರಲಿದೆ ಮಾವಿನ ಹಣ್ಣು, ಆನ್ಲೈನ್ ಆರ್ಡರ್ ಮಾಡಬಹುದು.

ಆನ್ಲೈನ್ ಮೂಲಕ ಆರ್ಡರ್ ಮಾಡಿದರೆ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ ಮಾವಿನ ಹಣ್ಣು.

Mango Fruit Online Order: ಇದೀಗ ಮಾವಿನ ಹಣ್ಣಿನ ಸೀಸನ್ ಆಗಿದೆ. ನಿಮಗೆ ಮಾವಿನ ಹಣ್ಣು ಬೇಕಿದ್ದರೆ ನೀವು ಆನ್ ಲೈನ್ ಮೂಲಕ ಓರ್ಡರ್ ಮಾಡಿ ನೇರವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಆನ್ ಲೈನ್ ಅಲ್ಲಿ ಮಾವಿನ ಹಣ್ಣನ್ನು ಬುಕ್ ಮಾಡಿದರೆ ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ಮಾವಿನ ಹಣ್ಣನ್ನು ತಂದು ಕೊಡುತ್ತಾರೆ. 

Mango fruit will arrive at the door of the house by post
Image Credit: medicalnewstoday

ಆನ್ ಲೈನ್ ಮೂಲಕ ಮಾವಿನ ಹಣ್ಣು ಓರ್ಡರ್ ಮಾಡಬಹುದು
ಈ ಬಾರಿ ಗುಣಮಟ್ಟದ ಮಾವಿನ ಹಣ್ಣುಗಳನ್ನು ನೇರವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಲು ಅನುಕೂಲವಾಗುವಂತೆ ಕರ್ ಸಿರಿ ಆನ್ ಲೈನ್ ಪೋರ್ಟಾಲ್ ಅನ್ನು ಮೇ 3 ರಿಂದ ಆರಂಭಿಸಿದೆ. ಮಾವಿನ ಹಣ್ಣು ಮಾರಾಟಕ್ಕೆ ವೆಬ್ ಪೋರ್ಟಲ್ ರಚಿಸಲಾಗಿದೆ.

ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮಾವಿನ ತಳಿಗಳು , ಬೆಲೆ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ವೆಬ್ ಸೈಟ್ ನಲ್ಲಿ ದಾಖಲಿಸಿದ್ದಾರೆ. ಗ್ರಾಹಕರು ಆನ್ ಲೈನ್ ನಲ್ಲಿ ಬುಕ್ ಮಾಡಿದರೆ ರೈತರ ತೋಟದಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ. ಮಾವಿನ ಹಣ್ಣು ಬುಕ್ ಮಾಡಿದ ಎರಡು ಅಥವಾ ಮೂರೂ ದಿನಗಳಲ್ಲಿ ಮನೆಗೆ ಬರುತ್ತದೆ. ಈ ಹಣ್ಣು ರೈತರು ಬೆಳೆದ ತಾಜಾ ಹಣ್ಣಾಗಿರುತ್ತದೆ.

Now if you buy mangoes online, you will receive mangoes at your doorstep by post
Image Credit: soopermango

ಮಾವಿನ ಹಣ್ಣು ಬುಕ್ ಮಾಡುವುದು ಹೇಗೆ
ಗ್ರಾಹಕರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವೆಬ್ ಸೈಟ್ ಗೆ ಹೋದರೆ ಅಲ್ಲಿ ನೊಂದಾಯಿತ ರೈತರ ವಿಭಾಗಗಳು ತೆರೆದುಕೊಳ್ಳುತ್ತದೆ. ತಮಗೆ ಬೇಕಾದ ರೈತರ ಹೆಸರಿನ ವಿಭಾಗಕ್ಕೆ ಹೋದರೆ ಮಾವಿನಹಣ್ಣಿನ ಫೋಟೋಗಳು ಆಯಾ ತಳಿಯ ಹೆಸರು ಹಾಗು ದರದೊಂದಿಗೆ ಪ್ರದರ್ಶನಗೊಂಡಿರುತ್ತದೆ.

ಗ್ರಾಹಕರು ತಮಗೆ ಬೇಕಾದ ತಳಿಯ ಮಾವಿನ ಹಣ್ಣಿನ ಮೇಲೆ ಕ್ಲಿಕ್ ಮಾಡಿ, ಆನ್ ಲೈನ್ ಅಲ್ಲೇ ಹಣ ಪಾವತಿಸಬೇಕು.ಬುಕ್ ಆದ ಕೂಡಲೇ ಇ-ಮೇಲ್ ಮತ್ತು ಮೊಬೈಲ್ ಮೂಲಕ ಅಂಚೆ ಇಲಾಖೆ ಹಾಗು ರೈತರಿಗೆ ಸಂದೇಶ ರವಾನೆಯಾಗುತ್ತದೆ. ಈ ಆನ್ಲೈನ್ ಪೋರ್ಟಲ್ ನಲ್ಲಿ ಗ್ರಾಹಕರು ತಮಗೆ ಬೇಕಾದಷ್ಟು ಮಾವಿನ ಹಣ್ಣುಗಳನ್ನ ಆರ್ಡರ್ ಮಾಡಿದರೆ ಮನೆಯ ಬಾಗಿಲಿಗೆ ಪೋಸ್ಟ್ ಮೂಲಕ ಮಾವಿನ ಹಣ್ಣು ಬರಲಿದೆ.

Join Nadunudi News WhatsApp Group

Join Nadunudi News WhatsApp Group