Mansukh Mandaviya: ಕರೋನ ವ್ಯಾಕ್ಸೀನ್ ತಗೆದುಕೊಂಡವರಿಗೆ ಹೃದಯಾಘಾತ, ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ.

ಕರೋನ ವ್ಯಾಕ್ಸಿನ್ ಹೃದಯಾಘಾತವನ್ನು ಸೃಷ್ಟಿ ಮಾಡುತ್ತದೆ ಎನ್ನುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ.

Mansukh Mandaviya About Covid- 19: ಕರೋನ ಸೋಂಕು (Carona Virus) ಎಲ್ಲೆಡೆ ಹರಡಿ ಅದೆಷ್ಟೋ ಜನರ ಪ್ರಾಣವನ್ನು ತೆಗೆದಿತ್ತು. ಕರೋನದಿಂದಾಗಿ ಅದೆಷ್ಟೋ ಜನರು ಸಾವು ಬದುಕಿನ ನಡುವೆ ಹೋರಾಟವನ್ನ ನಡೆಸಿ ಕೆಲವರು ಸಾವನ್ನು ಗೆದ್ದು ಬಂದಿದ್ದರು. ಇನ್ನು ಕೆಲವರು ಕರೋನಾಗೆ ಬಲಿಯಾದರು.

ಇನ್ನು ಭಾರತದಲ್ಲಿ ಸಾಕಷ್ಟು ಕರೋನ ರೂಪಾಂತರಗಳು ಬೆಳಕಿಗೆ ಬಂದಿವೆ. ಕರೋನ ರೂಪತಾರಗಳ ಹರಡುವಿಕೆಯ ಬಗ್ಗೆ ಸಾಕಷ್ಯು ಸಂಶೋದನೆಗಳು ನಡೆದಿವೆ. ಇನ್ನು ಕೋವಿಡ್ 19 ಸ್ಥಳೀಯ ಕಾಯಿಲೆ ಆಗುವ ಅಂಚಿನಲ್ಲಿದೆ.

ಕರೋನ ವ್ಯಾಕ್ಸಿನೇಷನ್
ಇನ್ನು ಕರೋನ ಬಂದ ಹಿನ್ನಲೆ ಜನರು ರಕ್ಷಣೆಗಾಗಿ ಕರೋನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು. ಕರೋನಗಾಗಿ ಎರಡು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕಾಗಿತ್ತು.

Mansukh Mandaviya About Covid- 19
Image Credit: Hindustantimes

ಇನ್ನು ಕರೋನ ವ್ಯಾಕ್ಸಿನ್ ಪಡೆದ ಕಾರಣ ದೇಶದಲ್ಲಿ ಹೆಚ್ಚಿನ ಹೃದಯಾಘಾತ ಪ್ರಕರಣವು ಬೆಳಕಿಗೆ ಬಂದಿವೆ ಎನ್ನುವ ವರದಿಯಾಗಿದೆ. ಕರೋನ ವ್ಯಾಕ್ಸಿನ್ ಹೃದಯಾಘಾತವನ್ನು ಸೃಷ್ಟಿ ಮಾಡಿದೆ ಎನ್ನುವ ಆರೋಪದ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ (Mansukh Mandaviya) ಮಾಹಿತಿ ನೀಡಿದ್ದಾರೆ.

ಕರೋನ ವ್ಯಾಕ್ಸೀನ್ ತಗೆದುಕೊಂಡವರಿಗೆ ಹೃದಯಾಘಾತ
ಕರೋನ ವ್ಯಾಕ್ಸೀನ್ ತಗೆದುಕೊಂಡವರಿಗೆ ಹೃದಯಾಘಾತ ಎನ್ನುವ ಆರೋಪದ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಸಂಶೋಧನೆಯಿಂದ ಹಿಡಿದು ಅದರ ಅನ್ವಯದವರೆಗೆ ಎಲ್ಲ ಸ್ಥಾಪಿತ ಅಂತಾರಾಷ್ಟ್ರೀಯ ಮಾನದಂಡಗಳನ್ನ ಸಂಪೂರ್ಣ ಪ್ರಕ್ರಿಯೆಯಲ್ಲಿ ಅನುಸರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಹೇಳಿದ್ದಾರೆ.

Join Nadunudi News WhatsApp Group

ವಿವಿಧ ಭೌತಿಕ ಮತ್ತು ಸಾಮಾನ್ಯ ಪ್ರಕ್ರಿಯೆಗಳಿಂದಾಗಿ ಮೊದಲು ಲಸಿಕೆ ತಯಾರಿಸಲು ಮತ್ತು ಅನುಮೋದಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಆದರೆ ಈ ಬಾರಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಕೃತಕ ಬುದ್ದಿಮತ್ತೆ (AI ) ಸೇರಿದಂತೆ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿ ಸಂಪೂರ್ಣ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

Mansukh Mandaviya About Covid- 19
Image Credit: Pbs

ಕರೋನ ವ್ಯಾಕ್ಸೀನ್ ತಗೆದುಕೊಂಡವರಿಗೆ ಹೃದಯಾಘಾತ ಆಗುತ್ತದೆ ಎನ್ನುವ ಆರೋಪವನ್ನು ಸಚಿವರು ತಳ್ಳಿಹಾಕಿದ್ದಾರೆ. ಕೋವಿಡ್ ನಿರ್ವಹಣೆಯಿಂದ ಹಿಡಿದು ಲಸಿಕೆ ಸಂಶೋಧನೆ ಮತ್ತು ಲಸಿಕೆ ಅಭಿಯಾನಕ್ಕೆ ಅನುಮೋದನೆ ನೀಡುವವರೆಗೆ ಎಲ್ಲ ಪ್ರಕ್ರಿಯೆಗಳಿಗೆ ಪ್ರಧಾನಿ ಮೋದಿ ಮೊದಲಿಂದಲೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದ್ದಾರೆ ಎಂದಿದ್ದಾರೆ.

Join Nadunudi News WhatsApp Group