Marriage Registration: ಹೊಸದಾಗಿ ಮದುವೆ ಆಗುವ ಗಂಡು ಹೆಣ್ಣಿಗೆ ಬಿಗ್ ರಿಲೀಫ್, ನಿಯಮದ ಬದಲಿಸಿದ ಸರ್ಕಾರ

ಮ್ಯಾರೇಜ್ ರಿಜಿಸ್ಟ್ರೇಷನ್ ನಿಯಮದಲ್ಲಿ ಬದಲಾವಣೆ ಮಾಡಿದ ಸರ್ಕಾರ

Marriage Registration Rule Change: ಭಾರತೀಯ ಕಾನೂನಿನಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ಸದ್ಯ ದೇಶದಲ್ಲಿ ಮದುವೆಯ ನಂತರ ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಸದ್ಯ ಮದುವೆಯಾಗುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ. ಹೌದು, ವಿವಾಹ ನೋಂದಣಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮದುವೆ ಆಗುವವರಿಗೆ ಬಿಗ್ ರಿಲೀಫ್ ನೀಡಿದೆ ಎನ್ನಬಹುದು.

Marriage Registration In India
Image Credit: Ourvadodara

ಮದುವೆಯಾಗುವವರಿಗೆ ರಾಜ್ಯ ಸರಕಾರದಿಂದ ಬಿಗ್ ರಿಲೀಫ್
ಸಾಮಾನ್ಯವಾಗಿ ಮದುವೆಯಾದ ದಂಪತಿಗಳು ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕು. ಕಾನೂನಿನ ನಿಯಮಾನುಸಾರ ದಂಪತಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ವಿವಾಹ ನೋಂದಣಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಇನ್ನುಮುಂದೆ ರಾಜ್ಯದ ಜನತೆಗೆ ಇದಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಬದಲಾಗಿ ನೀವು ಒಂದೇ ಕ್ಲಿಕ್ ನಲ್ಲಿ ಆನ್ಲೈನ್ ನಲ್ಲಿಯೇ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬಹುದು.

ಇನ್ನುಮುಂದೆ ಆನ್ಲೈನ್ ನಲ್ಲಿಯೇ ಮಾಡಬಹುದು Marriage Registration
ಮದುವೆಯಾದ ದಂಪತಿಗಳು ಇನ್ನುಮುಂದೆ ವಿವಾಹ ನೋಂದಣಿ ಮಾಡಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ. ಸದ್ಯ ಎಲ್ಲವು ಡಿಜಿಟಲೀಕರಣ ಆಗುತ್ತಿರುವ ಹಿನ್ನಲೆ Marriage Registration ಕೂಡ ಡಿಜಿಟಲ್ ಮೂಲಕವೇ ಆಗಲಿದೆ. ನೀವು ಆನ್ಲೈನ್ ನಲ್ಲಿಯೇ ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬಹುದು.

Marriage Registration Rule Change
Image Credit: Delhi-lawyers

ಇದಕ್ಕಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂದೂ ಮ್ಯಾರೇಜ್ ಆಕ್ಟ್ ಕಾಯ್ದೆ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಲಾಗಿದೆ. ವಿವಾಹ ಸರಳೀಕರಣಕ್ಕೆ ಸರ್ಕಾರದ ಸಮ್ಮತಿ ನೀಡಲಾಗಿದೆ. ಹಿಂದೂ ವಿವಾಹ ನೋಂದಣಿ ಕಾಯ್ದೆ 2024 ಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇನ್ನುಮುಂದೆ ಮದುವೆಯಾದ ದಂಪತಿಗಳು ಹಿಂದೂ ವಿವಾಹ ನೋಂದಣಿ ಕಾಯ್ದೆ 2024 ಅಡಿಯಲ್ಲಿ ಆನ್ಲೈನ್ ನಲ್ಲಿಯೂ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group