Marriage Rule: ಕಾನೂನಿನ ಪ್ರಕಾರ ಒಬ್ಬ ಪುರುಷ ಎಷ್ಟು ಮದುವೆ ಆಗಬಹುದು, ಕಾನೂನು ಹೇಳುವುದೇನು.

ಭಾರತೀಯ ಕಾನೂನಿನ ನಿಯಮದ ಪ್ರಕಾರ ಒಬ್ಬ ಪುರುಷ ಎಷ್ಟು ಮದುವೆಯನ್ನು ಮಾಡಿಕೊಳ್ಳಲು ಅವಕಾಶವಿದೆ ಎನ್ನುವ ಬಗ್ಗೆ ಮಾಹಿತಿ.

Indian Marriage Acts: ಭಾರತೀಯ ಕಾನೂನಿನಲ್ಲಿ ಮದುವೆಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳಿವೆ. ವಿವಿಧ ಧರ್ಮಗಳಲ್ಲಿ ಮದುವೆಗೆ ವಿವಿಧ ರೀತಿಯ ನಿಯಮಗಳಿರುತ್ತದೆ. ಇನ್ನು ಭಾರತೀಯ ಕಾನೂನಿನಲ್ಲಿ ಒಬ್ಬ ವ್ಯಕ್ತಿ ಎಷ್ಟು ಮದುವೆ ಆಗಬಹುದು ಎನ್ನುವ ಬಗ್ಗೆ ಕೂಡ ನಿಯಮಗಳನ್ನು ವಿಧಿಸಲಾಗಿದೆ. 

ಭಾರತದ ಕಾನೂನಿನ ಪ್ರಕಾರ ಒಬ್ಬ ಪುರುಷ ಎಷ್ಟು ಮದುವೆ ಆಗಬಹುದು
ಸಾಮಾನ್ಯವಾಗಿ ಪುರುಷರು ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಾರೆ. ಹಿಂದೂ ಧರ್ಮದ ಕಾನೂನಿನ ಪ್ರಕಾರ ಪುರುಷರು ಬಹುಪತ್ನಿಯನ್ನು ಹೊಂದಬಾರದು.

How many marriages can a man have according to Indian law?
Image Credit: Sadhguru

ಒಂದಕ್ಕಿಂತ ಹೆಚ್ಚಿನ ಮದುವೆಯು ಹಿಂದೂ ಧರ್ಮದಲ್ಲಿ ಕಾನೂನು ಬಾಹಿರವಾಗಿದೆ. ಇನ್ನು 1956 ರಲ್ಲಿ ಭಾರತೀಯ ಕಾನೂನಿನಲ್ಲಿ ಬಹುಪತ್ನಿತ್ವವು ಕಾನೂನುಬಾಹಿರವಾಗಿದೆ.

ಮುಸ್ಲಿಮರನ್ನು ಹೊರತುಪಡಿಸಿ ಇತರ ಎಲ್ಲಾ ನಾಗರಿಕರಿಗೆ ಬಹುಪತ್ನಿತ್ವನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಕಾನೂನಿನ ಪ್ರಕಾರ, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ ದ್ವಿಪತ್ನಿತ್ವ ಕಾನೂನುಬದ್ಧವಾಗಿದೆ.

ಒಬ್ಬ ಹಿಂದೂ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮಹಿಳೆಯನ್ನು ಕಾನೂನುಬದ್ಧವಾಗಿ ಮದುವೆಯಾಗುವಂತಿಲ್ಲ. ಒಬ್ಬ ವ್ಯಕ್ತಿಯು ಈಗಾಗಲೇ ಒಂದು ಮದುವೆಯಾಗಿದ್ದು, ಇನ್ನೊಂದು ಮದುವೆಯಾದರೆ ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

Join Nadunudi News WhatsApp Group

How many marriages can a man have according to Indian law?
Image Credit: News18

ಕಾನೂನಿನ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಖಚಿತ
ಇನ್ನು ಭಾರತದಲ್ಲಿ ಮುಸ್ಲಿಂ ಕಾನೂನಿನ ಪ್ರಕಾರ, ಒಬ್ಬ ಮುಸ್ಲಿಂ ಪುರುಷನು ನಾಲ್ಕು ಹೆಂಡತಿಯರನ್ನು ಹೊಂದಬಹುದು, ಆದರೆ ಮಹಿಳೆಗೆ ಒಬ್ಬ ಗಂಡನನ್ನು ಹೊಂದಲು ಮಾತ್ರ ಕಾನೂನಿನ ನಿಯಮವಿದೆ.

ಇನ್ನು ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮೊದಲ ಹೆಂಡತಿಯ ಒಪ್ಪಿಗೆ ಮೇರೆಗೆ ಆದ ಎರಡನೇ ಮದುವೆ ಕೂಡ ಕಾನೂನುಬಾಹಿರವಾಗಿದೆ. ಇನ್ನು ದ್ವಿಪತ್ನಿತ್ವಕ್ಕೆ ಭಾರತೀಯ ಕಾನೂನಿನಲ್ಲಿ ಹೆಚ್ಚಿನ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

Join Nadunudi News WhatsApp Group