Marriage Sustenance: ಇಂತಹ ಪತ್ನಿಯರು ಗಂಡನಿಗೆ ವಿಚ್ಛೇಧನ ನೀಡಿದರೆ ಆಕೆಯ ಯಾವುದೇ ಜೀವನಾಂಶ ಇಲ್ಲ, ಕೋರ್ಟ್ ತೀರ್ಪು

ಈ ಮಹಿಳೆ ಗಂಡನಿಂದ ವಿಚ್ಛೇಧನ ಬಯಸಿದರೆ ಆಕೆಗೆ ಯಾವುದೇ ಜೀವನಾಂಶ ಇಲ್ಲ

Marriage Sustenance Update: ಸದ್ಯ ದೇಶದಲ್ಲಿ ವಿಚ್ಛೇಧನ ಪ್ರಕರಣಗಳು ಸಾಕಷ್ಟು ನಡೆಯುತ್ತಿದೆ. ಮದುವೆಯ ನಂತರ ದಾಂಪಾಂತ್ಯ ಜೀವನದಲ್ಲಿ ಸಣ್ಣ ಬಿರುಕು ಉಂಟಾದರೂ ಕೂಡ ದಾಂಪತಿಗಳು ವಿಚ್ಛೇಧನಕ್ಕೆ ಮುಂದಾಗುತ್ತಿದ್ದಾರೆ.

ಇನ್ನು ಭಾರತೀಯ ಕಾನೂನು ವಿಚ್ಛೇಧನಕ್ಕೆ ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿದೆ. ಸದ್ಯ ಹೈಕೋರ್ಟ್ ವಿಚ್ಛೇಧನಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಮಹಿಳೆಯು ವೇಚ್ಛೆದನದ ನಂತರ ಜೀವನಾಂಶ ಪಡೆಯಲು ಯಾವ ಸಮಯದಲ್ಲಿ ಅರ್ಹಳು ಎನ್ನುವ ಬಗ್ಗೆ ಹೈಕೋರ್ಟ್ ಆದೇಶ ಹೊರಡಿಸಿದೆ.

High Court Verdict About Marriage Sustenance
Image Credit: Original Source

ವಿಚ್ಛೇಧನ ನಂತರ ಪತ್ನಿಯು ಜೀವನಾಂಶ ಪಡೆಯಲು ಅರ್ಹಳೆ…?
ಭಾರತೀಯ ನ್ಯಾಯಾಲಯದಲ್ಲಿ ಮದುವೆಯು ವಿಚ್ಛೇಧನ ಪಡೆದ ನಂತರ ಪತ್ನಿಯು ಜೀವನಾಂಶವನ್ನು ಪಡೆಯಲು ಅರ್ಹಳೆ ಎನ್ನುವ ಕುರಿತು ನ್ಯಾಯಾಲಯದ್ಲಲಿ ನಿಯಮವಿದೆ. ಆದರೆ ಭಾರತೀಯ ಕಾನೂನಿನ ಪ್ರಕಾರ ಕೆಲವು ಮಹಿಳೆಯರು ಜೀವನಾಂಶವನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ಸದ್ಯ ಜಾರ್ಖಂಡ್ ಹೈಕೋರ್ಟ್ ಇಂತಹ ಮಹಿಳೆಯರು ವಿಚ್ಛೇಧನದ ನಂತರ ಗಂಡನಿಂದ ಯಾವುದೇ ಜೀವನಾಂಶ ಕೇಳುವಂತಿಲ್ಲ ಎಂದು ಮಹತ್ವವಾದ ತೀರ್ಪನ್ನು ನೀಡಿದೆ. ಅಷ್ಟಕ್ಕೂ ಯಾವ ಮಹಿಳೆಯು ಜೀವನಾಂಶವನ್ನು ಪಡೆಯಲು ಅರ್ಹಳಲ್ಲ ಎನ್ನುವ ಬಗ್ಗೆ ಈ ಲೇಖಾನದಲಿ ಮಾಹಿತಿ ತಿಳಿಯೋಣ.

Marriage Sustenance Update
Image Credit: Medium

ಇಂತಹ ಮಹಿಳೆಯರು ಗಂಡನಿಂದ ಜೀವನಾಂಶ ಪಡೆಯಲು ಅರ್ಹರಲ್ಲ
ಸದ್ಯ ಪತಿ ಪತ್ನಿಯ ವಿಚ್ಛೇಧನದ ಜೀವನಾಂಶಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಪತ್ನಿಯು ತನ್ನ ಪತಿಯ ವಯಸ್ಸಾದ ಅಮ್ಮ ಮತ್ತು ಅಜ್ಜಿಯನ್ನು ನೋಡಿಕೊಳ್ಳದಿರುವುದು ವಿಚ್ಛೇದನಕ್ಕೆ ಕಾರಣವಾಗಿದೆ. ಪತ್ನಿಯು ವಯಸ್ಸಾದ ಅತ್ತೆ ಮತ್ತು ಅಜ್ಜಿಯನ್ನು ನೋಡಿಕೊಳ್ಳುವುದರಲ್ಲಿ ಎಡವಿದ್ದಾಳೆ. ಈ ಕಾರಣಕ್ಕೆ ನ್ಯಾಯಾಲಯ ಪತ್ನಿಯ ವಿರುದ್ಧ ಮಹತ್ವದ ಆದೇಶ ಹೊರಡಿಸಿದೆ.

Join Nadunudi News WhatsApp Group

ವಯಸ್ಸಾದವರನ್ನು ನೋಡಿಕೊಳ್ಳದ ಪತ್ನಿ ಜೀವನಾಂಶಕ್ಕೆ ಅರ್ಹಳಲ್ಲ
ಜಾರ್ಖಂಡ್ ಹೈಕೋರ್ಟ್ ವಯಸ್ಸಾದ ಅತ್ತೆಯನ್ನು ನೋಡಿಕೊಳ್ಳುವುದು ಸಾಂಸ್ಕೃತಿಕ ಪದ್ಧತಿ ಎಂದು ಹೇಳಿದೆ. ಭಾರತದಲ್ಲಿ ಮಹಿಳೆಯರು ತಮ್ಮ ವಯಸ್ಸಾದ ಅತ್ತೆ ಮತ್ತು ಅಜ್ಜಿಯವರಿಗೆ ಸೇವೆ ಸಲ್ಲಿಸಲು ಬದ್ಧರಾಗಿರಬೇಕು. ವಯಸ್ಸಾದವರನ್ನು ನೋಡಿಕೊಳ್ಳದ ಪತ್ನಿ ಜೀವನಾಂಶಕ್ಕೆ ಅರ್ಹಳಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Join Nadunudi News WhatsApp Group