Marriage Sustenance: ಜಾರಿಗೆ ಬಂತು ಇನ್ನೊಂದು ವಿಚ್ಛೇಧನ ನಿಯಮ, ಈ ಸಮಯದಲ್ಲಿ ಪತಿಗೆ ಪತ್ನಿ ಜೀವನಾಂಶ ನೀಡಬೇಕು.

ಈ ವಿಚ್ಚೇದನ ನಿಯಮದ ಪ್ರಕಾರ ಪತ್ನಿ ಪತಿಗೆ ಜೀವನಾಂಶವನ್ನು ನೀಡಬೇಕು.

Marriage Sustenance: ಭಾರತೀಯ ನ್ಯಾಯಾಲಯವು ಆಗಾಗ ಹೊಸ ಹೊಸ ತಿದ್ದುಪಡಿಯನ್ನು ಜಾರಿಗೆ ತರುತ್ತಲೇ ಇರುತ್ತದೆ. ಇನ್ನು ಭಾರತೀಯ ನ್ಯಾಯಾಲಯದಲ್ಲಿ ಹೆಚ್ಚಾಗಿ ಮದುವೆಯ ವಿಚ್ಛೇಧನಕ್ಕೆ ಸಂಬಂಧಿಸಿದಂತಹ ಪ್ರಕರಣಗಳು ಸಾಕಷ್ಟು ತನಿಖೆ ನಡೆಯುತ್ತಿರುತ್ತದೆ.

ನ್ಯಾಯಾಲಯದಲ್ಲಿ ಹೊಸ ಹೊಸ ವಿಚ್ಛೇಧನದ ಪ್ರಕರಣ ದಾಖಲಾಗುತ್ತಿದ್ದಂತೆ ನ್ಯಾಯಾಲಯವು ಆ ಆದೇಶವನ್ನು ವಿಚ್ಛೇಧನದ ನಿಯಮಕ್ಕೆ ಸೇರಿಸುತ್ತದೆ. ಸದ್ಯ ವಿಚ್ಛೇಧನದ ಜೀವನಾಂಶಕ್ಕೆ ಸಂಬಂಧಿಸಿದಂತೆ ಕೋರ್ಟ್ ಇನ್ನೊಂದು ತೀರ್ಪು ನೀಡಿದ್ದು ಸದ್ಯ ಕೋರ್ಟಿನ ಈ ತೀರ್ಪು ಬಹಳ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದು.

Marriage Sustenance New Rules
Image Credit: India Spend

ಜಾರಿಗೆ ಬಂತು ಇನ್ನೊಂದು ವಿಚ್ಛೇಧನ ನಿಯಮ
ಇನ್ನು ವಿಚ್ಛೇಧನ ಪಡೆಯುವಾಗ ಜೀವನಾಂಶದ ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತದೆ. ಭಾರತೀಯ ನ್ಯಾಯಾಲಯದ ಪ್ರಕಾರ, ವಿಚ್ಛೇಧನ ಪಡೆದರೆ ಆರ್ಥಿಕವಾಗಿ ಸಬಲನಾಗಿರುವ ಪತಿಯು ತನ್ನ ಪತ್ನಿಗೆ ಜೀವನಾಂಶವನ್ನು ನೀಡಬೇಕಾಗುತ್ತದೆ. ಆದರೆ ಕೆಲವೊಂದು ಸಮಯದಲ್ಲಿ ಪತಿಯು ಪತ್ನಿಗೆ ಜೀವನಾಂಶವನ್ನು ನೀಡುವ ಅಗತ್ಯ ಇರುವುದಿಲ್ಲ.

ಕೆಲವೊಂದು ಪ್ರಕರಣದಲ್ಲಿ ಪತ್ನಿಯೇ ಪತಿಗೆ ಜೀವನಾಂಶವನ್ನು ನೀಡಬೇಕಾಗುತ್ತದೆ. ಸದ್ಯ ಇಂತಹದ್ದೊಂದು ಪ್ರಕರಣ ಮಧ್ಯಪ್ರದೇಶ ನ್ಯಾಯಾಲಯದ ಮೆಟ್ಟಿಲೇರಿದೆ. ವಿಚ್ಛೇಧನ ಜೀವನಾಂಶಕ್ಕೆ ಸಂಬಂಧಿಸಿದಂತೆ ಪತಿ ಪತ್ನಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ತನಿಖೆ ನಡೆಸಿದ ನ್ಯಾಯಾಲಯವು ಮಹತ್ವದ ಆದೇಶವನ್ನು ನೀಡಿದೆ.

Marriage Sustenance
Image Credit: Lawwallet

ಈ ಸಮಯದಲ್ಲಿ ಪತಿಗೆ ಪತ್ನಿ ಜೀವನಾಂಶ ನೀಡಬೇಕು…!
ನನ್ನ ಕಕ್ಷಿದಾರನು ದ್ವಿತೀಯ ಪಿಯು ನಂತರ ತನ್ನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಕಾರಣ ಅವನ ಹೆಂಡತಿ ಅವನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಳು. ನನ್ನ ಕಕ್ಷಿದಾರರು ಹೀಗಾಗಿ ನಿರುದ್ಯೋಗಿಯಾಗಿರುವುದರಿಂದ ಜೀವನಾಂಶ ಕೋರಿ ಪತಿಯ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ನನ್ನ ಕಕ್ಷಿದಾರ ಮಹಿಳೆಯನ್ನು ಮದುವೆಯಾಗಲು ಸಿದ್ಧರಿರಲಿಲ್ಲ. ಆದರೆ ಆಕೆಯ ಕುಟುಂಬ ಸದಸ್ಯರ ಬೆದರಿಕೆಯಿಂದಾಗಿ ಅವರು 2022 ರಲ್ಲಿ ಆರ್ಯ ಸಮಾಜ ದೇವಸ್ಥಾನದಲ್ಲಿ ವಿವಾಹವಾದರು.ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರೂ ಬೇರ್ಪಟ್ಟರು ಎಂದು ವಿವರಿಸಿದ್ದಾರೆ.

Join Nadunudi News WhatsApp Group

ಈ ವಾದ ವಿವಾದದ ನಂತರ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. “Beauty Parlour ನಡೆಸುತ್ತಿರುವ ಅವರ ಪತ್ನಿ ನಿರುದ್ಯೋಗಿ ಪತಿಗೆ ತಿಂಗಳಿಗೆ ರೂ. 5,000 ಜೀವನಾಂಶ ನೀಡುವಂತೆ” ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ. ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಫೆ. 20ರಂದು ಈ ಕುರಿತು ಆದೇಶ ಹೊರಡಿಸಿದ್ದು, ಜೀವನಾಂಶ ಮಾತ್ರವಲ್ಲದೆ ವ್ಯಾಜ್ಯ (Litigation) ಮುಂದುವರಿಕೆಗೆ ಸಂಬಂಧಿಸಿದ ವೆಚ್ಚವನ್ನೂ ಭರಿಸುವಂತೆ ಆದೇಶಿಸಿದೆ.

Join Nadunudi News WhatsApp Group