Toe Ring: ಮದುವೆಯಾದ ಮಹಿಳೆಯರು ಕಾಲುಂಗುರು ಧರಿಸಲು ಕಾರಣವೇನು.

ಮದುವೆಯಾದ ಮಹಿಳೆಯರು ಏಕೆ ಕಾಲುಂಗುರ ಧರಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

Married Women’s Toe Ring: ಹಿಂದೂ ಧರ್ಮದಲ್ಲಿ ಮದುವೆಯೂ ಸಂಪ್ರದಾಯದ ಪ್ರಕಾರ ನಡೆಯುತ್ತದೆ. ಮದುವೆಯ ಸಮಯದಲ್ಲಿ ವಿಶೇಷ ಆಚರಣೆಯನ್ನು ಮಾಡಲಾಗುತ್ತದೆ. ಹಿಂದೂ ಧರ್ಮದ ಮದುವೆಯು ವಿದಿ ವಿಧಾನದ ಮೂಲಕ ನೆರವೇರುತ್ತದೆ. ಸಾಕಷ್ಟು ಶಾಸ್ತ್ರಗಳನ್ನು ಮಾಡಿಕೊಂಡು ಶಾಸ್ತ್ರೋಸ್ತ್ರವಾಗಿ ಮದುವೆಯನ್ನು ನೆರವೇರಿಸಲಾಗುತ್ತದೆ. ಮದುವೆಯ ಸಮಯದಲ್ಲಿ ಯಾವುದೇ ಶಾಸ್ತ್ರವನ್ನು ಮಿರುವಂತಿಲ್ಲ.

ಯಾವುದೇ ಒಂದು ಶಾಸ್ತ್ರವನ್ನು ಮೀರಿದರು ಕೂಡ ಮದುವೆಗೆ ವಿಘ್ನ ಉಂಟಾಗುತ್ತದೆ ಎನ್ನುವುದು ಹಿರಿಯರ ನಂಬಿಕೆಯಾಗಿದೆ. ಈ ಕಾರಣಕ್ಕೆ ಮದುವೇ ಸಮಯದಲ್ಲಿ ವಿಶೇಷವಾಗಿ ಪುರೋಹಿತರನ್ನು ನೇಮಿಸಿರುತ್ತಾರೆ. ಪುರೋಹಿತರು ಎಲ್ಲ ರೀತಿಯ ಶಾಸ್ತ್ರವನ್ನು ತಿಳಿದಿರುವ ಕಾರಣ ಮದುವೆಯನ್ನು ಶಾಸ್ತ್ರ ಬದ್ದವಾಗಿ ನೆರವೇರಿಸುತ್ತಾರೆ.

Married Women's Toe Ring
Image Credit: Anuradhaartjewellery

ಹಿಂದೂ ಧರ್ಮದ ಮದುವೆಯು ವಿಶೇಷವಾಗಿರುತ್ತದೆ
ಮದುವೆಯ ಸಮಯದಲ್ಲಿ ಗಂಡು ಹೆಣ್ಣಿಗೆ ವಿಶೇಷ ಶಾಸ್ತ್ರಗಳನ್ನು ಮಾಡಲಾಗುತ್ತದೆ. ನಿಗದಿಪಡಿಸಲಾದ ಮೂಹೂರ್ತದಲ್ಲಿಯೇ ಗಂಡು ಹೆಣ್ಣಿನ ಕುತ್ತಿಗೆಗೆ ತಾಳಿಯನ್ನು ಕಟ್ಟಬೇಕು. ತಾಳಿ ಕಟ್ಟಿದ ಬಳಿಕ ಸಪ್ತಪದಿ ತುಳಿಯುವ ಶಾಸ್ತ್ರ ವಿಶೇಷವಾಗಿರುತ್ತದೆ. ಏಳು ಹೆಜ್ಜೆಯನ್ನು ದಂಪತಿಗಳು ಜೊತೆಯಾಗಿ ನಡೆಯುತ್ತಾರೆ. ಇನ್ನು ಹಿಂದೂ ಸಂಪ್ರದಾಯದಲ್ಲಿ ತಾಳಿ ಮತ್ತು ಕಾಲುಂಗರ (Toe Ring) ಧರಿಸಿರುವುದು ಮುಖ್ಯವಾಗಿರುತ್ತದೆ.

ಮದುವೆಯಾದ ಮಹಿಳೆಯರು ಕಾಲುಂಗುರು ಧರಿಸಲು ಕಾರಣವೇನು
ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದ ಮಹಿಳೆಯರು ತಾಳಿ ಹಾಗೂ ಕಾಲುಂಗುರವನ್ನು ಧರಿಸಿರುವುದು ಒಂದು ರೀತಿಯ ಸಂಪ್ರದಾಯವಾಗಿದೆ. ತಾಳಿ ಹಾಗೂ ಕಾಲುಂಗರ ಧರಿಸಿರುವ ಮಹಿಳೆಯರು ಮದುವೆಯಾಗಿದ್ದಾರೆ ಎಂದು ಸುಲಭವಾಗಿ ಗುರುತಿಸಬಹುದು. ಇನ್ನು ಮದುವೆಯಾದ ಮಹಿಳೆಯರು ಕಾಲುಂಗುರು ಧರಿಸಲು ಅದರದ್ದೇ ಆದ ಕಾರಣಗಳಿವೆ.

Married Women's Toe Ring
Image Credit: Facebook

ಸಾಮಾನ್ಯವಾಗಿ ಕಾಲಿನ ಬೆರಳುಗಳಿಗೆ ಬಿಲ್ಲಿನ ಉಂಗುರವನ್ನು ಧರಿಸುವುದು ವಾಡಿಕೆ. ಇತ್ತೀಚೆಗಂತೂ ಮಹಿಳೆಯರು ವಿವಿಧ ವಿನ್ಯಾಸದ ಕಾಲುಂಗುರವನ್ನು ಬಳಸಲು ಪ್ರಾರಂಭಿಸಿದ್ದಾರೆ. ಇನ್ನು ಮಹಿಳೆಯರು ತಮ್ಮ ಕಾಲಿನ ಎರಡನೇ ಮತ್ತು ಮದ್ಯದ ಬೆರಳಿಗೆ ಕಾಲುಂಗುರವನ್ನು ಧರಿಸುತ್ತಾರೆ. ಪಾದದಲ್ಲಿ ಧರಿಸುವ ಈ ಲೋಹವು ಚಂದ್ರನಿಗೆ ಸಂಬಂದಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರ ಧರಿಸುವುದು ವಿಶೇಷ.

Join Nadunudi News WhatsApp Group

Join Nadunudi News WhatsApp Group