Alto 800: ಹೊಸ ಮಾರುತಿ ಆಲ್ಟೊ ಕಾರಿಗೆ ಜನರು ಫುಲ್ ಫಿದಾ, 30 Km ಮೈಲೇಜ್ ಮತ್ತು ಕಡಿಮೆ ಡೌನ್ ಪೇಮೆಂಟ್.

2024 ರಲ್ಲಿ ಹೊಸ ಅವತಾರದಲ್ಲಿ ಬಂತು ಮಾರುತಿ ಆಲ್ಟೊ 800

Maruti Alto 800 2024: Maruti ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಈಗಾಗಲೇ ಪೆಟ್ರೋಲ್, ಎಲೆಕ್ಟ್ರಿಕ್ ಚಾಲಿತ ವಾಹನವನ್ನು ಪರಿಚಯಿಸಿದೆ. ಮಾರುತಿ ಕಾರ್ ಗಳು ಬಿಡುಗಡೆಗೊಂಡ ಕೆಲವೇ ಕ್ಷಣದಲ್ಲಿ ಅಧಿಕ ಸೇಲ್ ಕಾಣುತ್ತವೆ.

ಮಾರುತಿ ಕಾರ್ ಗಳು ಅತಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ. ಇದೀಗ ಮಾರುತಿ ಗ್ರಾಹಕರಿಗಾಗಿ ನವೀಕರಿಸಿದ ವಿನ್ಯಾಸದಲ್ಲಿ ನೂತನ ಮಾದರಿಯ ಕಾರ್ ಅನ್ನು ಪರಿಚಯಿಸಿದೆ. ಹೊಸ ಮಾರುತಿ ಆಲ್ಟೊ ಕಾರಿಗೆ ಜನರು ಫುಲ್ ಫಿದಾ ಆಗಿದ್ದಾರೆ. ಹೆಚ್ಚಿನ ಮೈಲೇಜ್ ನೀಡುವ ಈ ಕಾರ್ ಅನ್ನು ಗ್ರಾಹಕರು ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Maruti Alto 800 2024
Image Credit: Autokhabri

ಹೊಸ ಮಾರುತಿ ಆಲ್ಟೊ 800 ಕಾರಿಗೆ ಜನರು ಫುಲ್ ಫಿದಾ
ಕೆಲವು ತಿಂಗಳುಗಳ ಹಿಂದೆ Maruti ತನ್ನ Alto 800 ಉತ್ಪಾದನೆಯನ್ನು ನಿಲ್ಲಿಸಿತ್ತು. ಇದೀಗ ಹೊಸ ಲುಕ್ ಹಾಗೂ ಆಧುನಿಕ ವೈಶಿಷ್ಟ್ಯಗಳೊಂದಿದೆ ಮಾರುತಿ Alto 800 ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇನ್ನು 5 ಆಸನಗಳೊಂದಿಗೆ ಹೊಸ ಅವತಾರದಲ್ಲಿ ಹಳೆಯ ಮಾರುತಿ Alto 800 ಭಾರತೀಯ ಮಾರುಕಟ್ಟೆಗೆ ಸದ್ಯದಲ್ಲೇ ಎಂಟ್ರಿ ಕೊಡಲಿದೆ. ಈ ನವೀಕರಿಸಲಾದ ಮಾದರಿಯ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೂ Maruti Alto 800 ಕಾರ್ ನ ಒಂದಿಷ್ಟು ಸುಧಾರಿತ ವಿಶಿಷ್ಟ್ಯಗಳ ಬಗ್ಗೆ ಮಾಹಿತಿ ಲಭಿಸಿದೆ.

30 Km ಮೈಲೇಜ್ ಮತ್ತು ಕಡಿಮೆ ಡೌನ್ ಪೇಮೆಂಟ್
Maruti Alto 800 ಹಗುರವಾದ ಹಾರ್ಟೆಕ್ಟ್ ಪ್ಲಾಟ್‌ ಫಾರ್ಮ್ ಅನ್ನು ಆಧರಿಸಿದ್ದು, Maruti S-Presso ಲುಕ್ ನಲ್ಲಿ ಕಾಣಬಹುದಾಗಿದೆ. ಇನ್ನು ನೂತನ Alto 800 796cc, 3 ಸಿಲಿಂಡರ್ ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು, ಈ ಕಾರ್ 48 PS ಗರಿಷ್ಠ ಶಕ್ತಿ ಮತ್ತು 69 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು.

maruti suzuki alto 800 new model
Image Credit: Techytopics

ಈ ಕಾರ್ ನಲ್ಲಿ ಬಲಿಷ್ಠ ಎಂಜಿನ್ ಅನ್ನು ನೀಡಲಾಗಿದ್ದು ಬರೋಬ್ಬರಿ 30km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ Power windows, LED DRL wheel caps, dual airbags and ABS with EBD and reverse parking ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು Renault Kwid, MG Comet, Hyundai i10 ಮಾದರಿಗಳಜೊತೆ ಸ್ಪರ್ದಿಸಲು Maruti alto 800 5 ಲಕ್ಷ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಅಂದಾಜಿಸಲಾಗಿದೆ. 2024 ರ ಆಟೋ ಎಕ್ಸ್ಪೋದಲ್ಲಿ ಮಾರುತಿ ಆಲ್ಟೊ 800 ಪ್ರದರ್ಶನಗೊಳ್ಳಲಿದೆ.

Join Nadunudi News WhatsApp Group

Join Nadunudi News WhatsApp Group