Maruti Celerio: ಸಣ್ಣ ಕುಟುಂಬಕ್ಕೆ ಈ ಕಾರ್ ಬೆಸ್ಟ್, 34km ಮೈಲೇಜ್ ನೀಡುವ ಈ ಸೆಲೆರಿಯೊ ಬೆಲೆ ಕೇವಲ 5 ಲಕ್ಷ ಮಾತ್ರ.

34km ಮೈಲೇಜ್ ನೀಡುವ ಈ ಸೆಲೆರಿಯೊ ಬೆಲೆ ಕೇವಲ 5 ಲಕ್ಷ ಮಾತ್ರ

Maruti Celerio Price And Feature: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯ ಕಾರ್ ಗಳಿಗೆ ಬಾರಿ ಬೇಡಿಕೆ ಇರುತ್ತದೆ. ಕಂಪನಿಯು ಅತ್ಯಾಧುನಿಕ ಫೀಚರ್ ಹಾಗೂ ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ. ಅದರ ಜೊತೆಗೆ ಮಾರುತಿ ಕಂಪನಿಯ ಕಾರ್ ಗಳ ಬೆಲೆ ಕೂಡ ಅತಿ ಕಡಿಮೆ ಇರುತ್ತದೆ ಎನ್ನಬಹುದು. ಕಡಿಮೆ ಬಜೆಟ್ ಹೊಂದಿರುವವರ ಮೊದಲ ಆಯ್ಕೆ ಮಾರುತಿ ಸುಜುಕಿ ಆಗಿರುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ Celerio ಮಾದರಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು 2024 ರಲ್ಲಿ ಬಿಡುಗಡೆಯಾಗಿ ಇಂದಿಗೂ ಕೂಡ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಸಣ್ಣ ಕುಟುಂಬಕ್ಕೆ ಈ ಕಾರ್ ಬೆಸ್ಟ್ ಆಗಿದೆ. ನಾವೀಗ ಈ ಲೇಖನದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಮಾದರಿಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

Maruti Celerio Price
Image Credit: Carwale

ಸಣ್ಣ ಕುಟುಂಬಕ್ಕೆ ಈ ಕಾರ್ ಬೆಸ್ಟ್ ಆಗಿದೆ
ಭಾರತದಲ್ಲಿ ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ ರೂ. 5.36 ಲಕ್ಷ (ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ. ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯೊಂದಿಗೆ ಸೆಲೆರಿಯೊ ಒಟ್ಟು ಏಳು ರೂಪಾಂತರಗಳಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಸೆಲೆರಿಯೊ ಆ್ಯಪಲ್ ಕಾರ್‌ ಪ್ಲೇ, ಸ್ಮಾರ್ಟ್‌ ಪ್ಲೇ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯಂತಹ ಹಲವಾರು ಹೊಸ ಮತ್ತು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಜೊತೆಗೆ ಪುಶ್ ಸ್ಟಾರ್ಟ್ ಅಥವಾ ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಸಹ ಒದಗಿಸಲಾಗಿದೆ.

Maruti Celerio Price And Features
Image Credit: Carwale

34km ಮೈಲೇಜ್ ನೀಡುವ ಈ ಸೆಲೆರಿಯೊ ಬೆಲೆ ಕೇವಲ 5 ಲಕ್ಷ ಮಾತ್ರ
ಮಾರುತಿ ಸುಜುಕಿ ಸೆಲೆರಿಯೊ CNG ರೂಪಾಂತರದ ಮೈಲೇಜ್ 34.43 km/kg ಆಗಿದೆ. ಮಾರುತಿ ಸುಜುಕಿ ಸೆಲೆರಿಯೊ ಪೆಟ್ರೋಲ್ ಮೇಲೆ 25.17 kmpl ನಿಂದ 26.23 kmpl ವರೆಗೆ ಮೈಲೇಜ್ ನೀಡುತ್ತದೆ. ಹೊಸ ಮಾರುತಿ ಸೆಲೆರಿಯೊ ಹ್ಯಾಚ್‌ ಬ್ಯಾಕ್ ಅನ್ನು LXi, VXi, ZXi ಮತ್ತು ZXi ಪ್ಲಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ಕಾಣಬಹುದು. ವಿನ್ಯಾಸಕ್ಕೆ ಬರುವುದಾದರೆ, ಇದು ಆಕರ್ಷಕ ಗ್ರಿಲ್, ರಿಫ್ರೆಶ್ಡ್ ಫ್ರಂಟ್ ಫ್ಯಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರದ ಹೆಡ್‌ ಲ್ಯಾಂಪ್‌ ಗಳು, ಕ್ರೋಮ್ ಸ್ಟ್ರಿಪ್‌ ನಿಂದ ಸಂಪರ್ಕಗೊಂಡಿರುವ ಸಿಗ್ನೇಚರ್ ಲೋಗೋವನ್ನು ಒಳಗೊಂಡಿದೆ.

Join Nadunudi News WhatsApp Group

ಹೊಸ ಸೆಲೆರಿಯೊ ಡ್ರೈವರ್ ಮತ್ತು ಫ್ರಂಟ್ ಸೀಟ್ ಪ್ಯಾಸೆಂಜರ್ ಏರ್‌ ಬ್ಯಾಗ್‌ ಗಳು, ರಿಯರ್ ಡೋರ್ ಚೈಲ್ಡ್ ಪ್ರೂಫ್ ಲಾಕ್‌ ಗಳು, ಸ್ಪೀಡ್ ಅಲರ್ಟ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್-ಇಬಿಡಿ, ಇಂಜಿನ್ ಇಮೊಬಿಲೈಜರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

Maruti Celerio Review
Image Credit: Carwale

Join Nadunudi News WhatsApp Group